ಪುಟ:ನಡೆದದ್ದೇ ದಾರಿ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬

                                                          ನಡೆದದ್ದೇ ದಾರಿ                      

ಕೋಣೆಯ ಕಿಟಕಿಯ ಸರಳುಗಳನ್ನು ಬಿಗಿಯಾಗಿ ಹಿಡಿದುಕೊಂಡು ಕತ್ತಲಲ್ಲಿ ಕೋಮಲಾ ಒಬ್ಬಳೇ ನಿಂತಿದ್ದಳು. ಓಡಿ ಹೋದರೆ ಹೇಗೆ ಎಂಬ ವಿಚಾರವೂ ಬಂದಿತು. ಆದರೆ ಸಮಾಜದ ಸುತ್ತಲಿನ ಏಳುಫೂಟು ಎತ್ತರದ, ಗಾಜಿನ ಚೂರುಗಳನ್ನು ಚುಚ್ಚಿದ ಗೋಡೆ, ಗೇಟಿನಲ್ಲಿ ಚಾಕು ಸಿಗಿಸಿಕೊಂಡು ನಿಂತ ಗೂರ್ಖಾನ ವಿಕಾರ ಸ್ವರೂಪ ನೆನೆದಾಗ ಹದಿನಾಲ್ಕು ವರ್ಷದ ಅವಳ ಎಳೆಯ ಮನಸ್ಸು ಹೆದರಿಕೊಂಡಿತು.

                                 ***

ರಾತ್ರಿ ಹನ್ನೊಂದೂವರೆ. ಅತಿಥಿಗೃಹದ ಹೊರಗೆ ಬೆಳದಿಂಗಳಲ್ಲಿ ಕಟ್ಟೆಯ ಮೇಲೆ ಕಮಲಮ್ಮನೊಂದಿಗೆ ಮಜವಾಗಿ ಹರಟುತ್ತ ಬೀದಿ ಸೇದುತ್ತ ಕೂತಿದ್ದ ಹೆಡ್ಮಾಸ್ತರು ಯಾಕೋ ಬಾಗಿಲ ಸಪ್ಪಳ ಕೇಳಿ ತಿರುಗಿ ನೋಡಿದರು. ಮಾನ್ಯ ಅತಿಥಿಗಳು ನೈಟ್ ಗೌನಿನಲ್ಲಿ ಹೊರಬಂದಿದ್ದರು. ಎದ್ದು ಅವರೆಡೆ ಧಾವಿಸಿದ ಶಿವರಾಮ ರೆಡ್ಡಿ , "ಏನಾಯ್ತು ಮಹಾಸ್ವಾಮಿ ? ಮಾಲು ಮನಸ್ಸಿಗೆ ಬರಲಿಲ್ಲವೇ ? ಏನು ತೊಂದರೆ ನನಗೆ ಹೇಳಿರಿ." ಅನುಮಾನಿಸುತ್ತ ಕೆಳದನಿಯಲ್ಲಿ ಮಾತಾಡಿದ ಅತಿಥಿ ; "ರೆಡ್ಡಿಯವರs, ನಿಮಗೆ ಮೊದಲs ಹೇಳಿದೆ, ನಮಗಿದೆಲ್ಲಾ ಬ್ಯಾಡ ಅಂತ. ನೀವು ಒತ್ತಾಯ ಮಾಡಿದ್ರಿ ಅಂತ ಹೂಂ ಅಂದೇ. ಈಗ ನೋಡಿದರೆ ಯಾರೋ ಅಡ್ನಾಡಿ ಹುಡುಗೀನ್ನ ಕಳಿಸೀರಿ. ಅತ್ತು ಕರೆದು ರಂಭಾಟ ಮಾಡ್ಲಿಕ್ಹತ್ಯಾಳ. ನನ್ನ ಸಮೀಪ ಬರಬ್ಯಾಡ್ರಿ, ಮುಟ್ಟಬ್ಯಾಡ್ರಿ, ನೀವs ದೇವ್ರು, ತಾಯಿ-ತಂದೆ ಅಂತ ಪ್ರಲಾಪ ಮಾಡ್ಲಿಕ್ಹಟ್ಯಾಲ. ನನಗೆ-ನೀವೇನs ಅನ್ರಿ, ನನಗ-ಹೆಣ್ಮಕ್ಕಳ ಮನಸ್ಸು ನೋಯ್ಸೂದಾಗೂದಿಲ್ಲ .... ಅಂದರ ಅವರ ಒಪ್ಪಿಗಿ ಇಲ್ಲದಾಗ" -ಉಗುಳು ನುಂಗಿದ. ಶಿವರಾಮ ರೆಡ್ಡಿ ಅನುಭವಿಕ, ಪ್ರಸಂಗಾವಧಾನ ತಂದುಕೊಂಡು ಒಮ್ಮೆಲೇ ಆರ್ಜವತೆಯಿಂದ ಹೇಳಿದ, "ಮಹಾಸ್ವಾಮಿಯವರು ಸಿಟ್ಟಾಗಬಾರದು. ಐದು ನಿಮಿಷ ಈ ಹಾಲ್ ನಲ್ಲಿ ಕೂತು ಒಂದು ಸಿಗರೇಟ್ ಸೇದಿರಿ-ಇಂಪೋರ್ಟೆಡ್. ಅಷ್ಟರಲ್ಲಿ ನಾನು ಎಲ್ಲ ಸರಿ ಮಾಡುವೆ."

                                 ***

ಹದಿನೈದು ನಿಮಿಷಗಳ ನಂತರ ಕಚ್ಚೆ ಬಿಗಿದುಕೊಳ್ಳುತ್ತ ಹೊರಬಂದ ಶಿವರಾಮ ರೆಡ್ಡಿ ಮಾನ್ಯ ಅತಿಥಿಗಳನ್ನು ಪುನಃ ಆದರಪೂರ್ವಕವಾಗಿ ಒಳಗೆ ಕಳಿಸಿದಾಗ ಅವರಿಗೆ ಮಧುರ ಆಶ್ಚರ್ಯ ಕಾದಿತ್ತು. ಅಷ್ಟೊಂದು ವಿರೋಧ ಮಾಡಿ, ಆಣೆ, ಭಾಷೆ ಹಾಕಿ, ಅತ್ತು ಕರೆದು ಹುಡುಗಿ ಈಗ ದೊಡ್ಡ ಮಂಚದ ಮೇಲೆ ಸುಮ್ಮನೆ ಮಲಗಿಕೊಂಡಿದ್ದಳು. ಆತ ಬಳಿ ಸಾರಿದಾಗ ಪ್ರತಿಕ್ರಿಯೆ ತೋರಲಿಲ್ಲ. ಇಷ್ಟೇ ಅಲ್ಲ, ಅವಳ ಅರಿವೇ ಸೆಳೆದಾಗಲೂ ಸುಮ್ಮನೆ ಬಿದ್ದುಕೊಂಡಿದ್ದಳು- ಶೂನ್ಯವನ್ನು