ಪುಟ:ನಡೆದದ್ದೇ ದಾರಿ.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ನಿರಾಕರಣೆ ೨೭೧

        ತಾನು ಗುರುಗಳೆದುರಿಗೆ ಪತಿ ಹಾಗೂ ಪುತ್ರರೊಡಗೂಡಿ ಹೋಗಲು ಲಜ್ಜೆ ಪಡುತ್ತಿರುವೆನೆಂದು ಭಾವಿಸಿದ್ದಾನೆ ಈತ. ಹೌದು. ಈತನ ಜೊತೆ ಹೋಗಲು ತಾನು ಒಲ್ಲೆನೆಂದು, ಈತನನ್ನು ಸ್ವೀಕರಿಸಲು ತನ್ನ ಅಂತರಾತ್ಮ ಒಪ್ಪುತ್ತಿಲ್ಲವೆಂದು, ಈತ ಎಂದಿಗೂ ಕಲ್ಪನೆ ಕೂಡ ಮಾಡಲಾರ. ಆರ್ಯ ಸ್ತ್ರೀ ಅಲ್ಲವೆ ತಾನು ? ಪತಿ ಎಂತಹವನೇ ಇರಲಿ, ಆತನನ್ನು ತಿರಸ್ಕರಿಸುವ ಹೀನ ವಿಚಾರ ಆರ್ಯ ಸ್ತ್ರೀಗೆ ಬರಬಾರದಲ್ಲ !
           -ಅಂದರೆ ತಾನು ನಿಜವಾಗಿ ಮಹಾರಾಜ ದಷ್ಯಂತನನ್ನು ತಿರಸ್ಕರಿಸುತ್ತಿದ್ದೇನೆಯೇ ? ಯಾವನ ಬರವಿಗಾಗಿ ಇಷ್ಟು ದಿನ ಕಾಯ್ದೆನೋ ಆತ ಕೊನೆಗೊಮ್ಮೆ ಬಂದಿದ್ದಾನೆ. ಜೊತೆಗೆ, ಪುನರ್ಮಿಲನದ ಈ ಗಳಿಗೆಯಲ್ಲಿ, ನಿರೀಕ್ಷೆ ಸಫಲವಾದ ಈ ಕ್ಷಣದಲ್ಲಿ, ಇಷ್ಟು ದಿನ ನನ್ನ ಅಂತರಾಳದಲ್ಲಿ ಸುಪ್ತವಾಗಿದ್ದುದೊಂದು ತೀವ್ರ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದಾನೆ. ಈ ಪ್ರಜ್ಞೆ, ನನ್ನ ಸ್ತ್ರೀತ್ವವು ಅಪಮಾನಿತವಾಗಿದೆ ಎಂಬ ತೀವ್ರವಾದ ಈ ಅರಿವು, ನಾನು ಕಾಯುತ್ತಿರುವಾಗ, ನೋಯುತ್ತಿರುವಾಗ ನನ್ನ ಆಳದಲ್ಲೆಲ್ಲೋ ಅಡಗಿಕೊಂಡಿತ್ತು. ಕಾಯುವುದು-ನೋಯುವುದು ಎಲ್ಲ ಮುಗಿಯಿತೆಂಬ ಈ ಕ್ಷಣದಲ್ಲಿ ನನ್ನೊಳಗೆ ಮೌನವಾಗಿ ಹೂತುಕೊಂಡಿದ್ದ ಈ ಬೇರೆಯದೇ ಒಂದು ಉತ್ಕಟ ಸಂವೇದನೆ ಒಮ್ಮೆಲೆ ಪುಟಿದೆದ್ದಿದೆ....ಧಿಕ್ಕಾರ! ನಾರಿಯ ಮಧುರ ಭಾವನೆಗಳನ್ನು ಎಗ್ಗಿಲ್ಲದೆ ಹೊಸಕಿ ಹಾಕುವ, ನಂತರ ಬಂದು ಕ್ಷಮೆ ಕೇಳುವ, ಆಕೆ ಕ್ಷಮಿಸಿಯೇ ಕ್ಷಮಿಸುತ್ತಾಳೆಂಬ ಖಚಿತ ನಂಬಿಕೆ ಹೊಂದಿರುವ, ಇಂತಹ ಗಂಡಸಿಗೆ ಧಿಕ್ಕಾರ!
     "ಅಮ್ಮಾ,ಈತ ನಿಜವಾಗಿಯೂ ಮಹಾರಾಜ ದುಷ್ಯಂತನೇ! ಈತನೇ ನನ್ನ ತಂದೆಯೆ?" -ಕಣ್ಣುಗಳಲ್ಲಿ ಮುಗ್ಧ ಕುತೂಹಲ ತುಂಬಿಕೊಂಡು ಕೇಳುತ್ತಿದ್ದಾನೆ ಕುಮಾರ ಭರತ. ತನ್ನ ಪ್ರೀತಿಯ ಮಗ, ದುಷ್ಯಂತನ ವಂಶೋದ್ಧಾರಕ‌. ಪುರುವಂಶದ ಉತ್ರಾಧಿಕಾರಿ!.... ತನ್ನ ಪ್ರೀತಿಯ ಮಗ ದುಷ್ಯಂತನ ಉತ್ತರಾಧಿಕಾರಿ ಅಂದ ಮೇಲೆ ತಾನು ಮಹಾರಾಜನನ್ನು ಹೇಗೆ ಧಿಕ್ಕರಿಸಬಲ್ಲೇ ? ತಾನು ಕೇವಲ ಹಿಂದೆ ತಿರಸ್ಕ್ರುತಳಾದ‌. ಈಗ ಜಾಗ್ರುತಳಾದ ಹೆಣ್ಣು ಮಾತ್ರವಲ್ಲ. ತಾನೀಗ ಒಬ್ಬ ಮಗನ ತಾಯಿ. ಈ ಮಗನ ಪೂರ್ಓತ್ತರ ಅಬಿವ್ರುದ್ಧಿಯೇ ತನ್ನ ಕರ್ತವ್ಯ. ಈ ಮಗನಿಗೆ ಆತನ ಅಧಿಕಾರವನ್ನು ನಾನು ದೊರಕಿಸಿಕೊಡಲೇಬೇಕು. ನನ್ನ ತಾಯಿಯಾದ ಮೇನಕೆ ಮಗುವನ್ನು ತ್ರುಜಿಸಿಹೋದದ್ದು ಕ್ಷಮಿಸಲನರ್ಹವಾದ ಕರ್ತವ್ಯಲೋಪವೆಂದು ನನಗೆ ಯಾವಾಗಲೂ ಅನ್ನಿಸಿದ್ದಿದೆ. ನಾನು ತಾಯಿಯ ಕರ್ತವ್ಯ ನಿರ್ವಹಿಸಲೇಬೇಕು. ನನ್ನ ಮಗ ಪುರುವಂಶದ ಯುವರಾಜನಾಗಲೇಬೇಕು. ಮತ್ತು ಅದಕ್ಕಾಗಿ-