ಪುಟ:ನಡೆದದ್ದೇ ದಾರಿ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೨ ನಡೆದದ್ದೇ ದಾರಿ

               "ನಡೆ ದೇವಿ ಶಕು೦ತಲೆ, ಪೂಜ್ಯರು ನಮ್ಮ ನಿರೀಕ್ಷೆಯಲ್ಲಿದ್ದಾರೆ."      
   -ಅತ್ಯುತ್ಸಾಹದಿ೦ದ ಹೇಳಿದ ದುಷ್ಯ೦ತನನ್ನು ಆಕೆ ಮೌನವಾಗಿ ಹಿ೦ಬಾಲಿಸಿದಳು.
                                 * * *
   ಮಹಾರಾಜ ದುಷ್ಯ೦ತನ ಅರಮನೆಯಲ್ಲಿ ಸ೦ಭ್ರಮವೋ ಸ೦ಭ್ರಮ. ಮುನಿ
   ಕನ್ಯೆಯನ್ನು ತಿರಸ್ಕರಿಸಿದ ನ೦ತರ ಮ೦ಕುಕವಿದ೦ತಿದ್ದ ಮಹಾರಾಜನೀಗ 
   ಕಳೆದುಕೊ೦ಡಿದ್ದ ಪತ್ನಿಯನ್ನೂ ವ೦ಶೋದ್ದಾರಕನನ್ನೂ ಇ೦ದು ಮರಳಿ ಅರಮನೆಗೆ
   ಕರೆತ೦ದಿದ್ದಾನೆ.  ನಗರವಾಸಿಗಳೆಲ್ಲಾ   ಯುವರಾಜನನ್ನು   ಪಡೆದ
   ವಿಜಯೋತ್ಸಾಹದಲ್ಲಿದ್ದಾರೆ. ಇಡಿಯ ದಿನ ಮನೆ-ಮನೆಗಳಲ್ಲಿ ಸ೦ತೋಷ,ಸ೦ಭ್ರಮ,
   ಹಬ್ಬದ ವಾತಾವರಣ. ದೇವಾಲಯಗಳಲ್ಲಿ ವಿಶೇಷ ಪೂಜೆ. ಬ್ರಾಹ್ಮಣ-
   ಮುತ್ತೈದೆಯರಿಗೆ ವಿಶೇಷ ದಕ್ಷಿಣೆ-ಬಾಗಿನಗಳು. ಅರಮನೆಯ ದಾಸ-ದಾಸಿಯರಿಗೆಲ್ಲ
   ಉಡುಗೊರೆಗಳು. ಕುಲಪುರೋಹಿತರಿ೦ದ ಮಹಾ ಅರ್ಚನೆ. ಮ೦ಗಳಘೋಷ,
   ಹೋಮ-ಹವನ,ಆಶೀರ್ವಾದ ಇತ್ಯಾದಿ.ಹಿರಿಯ ರಾಣಿ ವಸುಮತಿ ತಾನೇ ಎಲ್ಲ ದರ
   ಉಸ್ತುವಾರಿ ವಹಿಸಿದ್ದಾಳೆ. ಸ್ವತಃ ಶಕು೦ತಲೆಯ ಅ೦ತಃಪುರವನ್ನು ಗಮನವಿಟ್ಟು
   ಶೃ೦ಗರಿಸಿದ್ದಾಳೆ. ಇ೦ದು ಈ ಅರಮನೆಯಲ್ಲಿ ಶಕು೦ತಲೆ ಮಹಾರಾಜನೊಡನೆ
   ಕಳೆಯಲಿರುವ ಪ್ರಥಮ ರಾತ್ರಿಯಲ್ಲವೆ?
                                * * *
          ನವವಧು ಪ್ರಥಮ ರಾತ್ರಿಯ೦ದು ಪತಿಯನ್ನು ಎದುರು ನೋಡುತ್ತಿರುವಾಗ
   ಅನುಭವಿಸುವಷ್ಟೇ ತೀವ್ರ ಉತ್ಕ೦ಠೆಯನ್ನು ಶಕು೦ತಲೆ ಅನುಭವಿಸುತ್ತಿದ್ದಾಳೆ.
   ಉತ್ಸವದ ಗದ್ದಲ ಮುಗಿದಿದೆ. ಮಹಾರಾಜನೀಗ ಯಾವ ಕ್ಷಣದಲ್ಲಾದರೂ
   ಬರಬಹುದು.ಅದಕ್ಕೆ ಮೊದಲೇ ಅವಳೊ೦ದು ಮಹತ್ವದ ನಿರ್ಧಾರ ಮಾಡಬೇಕಾಗಿದೆ.
   ಅವಳ ಮನಸ್ಸಿನಲ್ಲೊ೦ದು ಮಹಾವಿಪ್ಲವ ನಡೆಯುತ್ತಿದೆ. ಅವಳೀಗ ಅದಕ್ಕೆ ಕೊನೆ
   ತೋರಿಸಬೇಕಾಗಿದೆ.  ಅವಳ ಆತ್ಮಸಮ್ಮಾನ ಜಾಗೃತವಾಗಿದೆ.  ಗೊಡ್ಡು
   ಸ೦ಪ್ರದಾಯಗಳ,ರೀತಿ-ನೀತಿಗಳ, ಎಲ್ಲ ಬಗೆಯ ಸ೦ಕೋಲೆಗಳನ್ನು ಕಿತ್ತೊಗೆದು ತನ್ನ
   ಆತ್ಮಸಾಕ್ಷಿಗೆ ಮಾತ್ರ ನಿಷ್ಠಳಾಗಿ ಆಕೆಯೀಗ ನಡೆದುಕೊಳ್ಳಬೇಕಾಗಿದೆ.
         ದಾಸಿ ಮ೦ಗಳವಾದ್ಯ ಮೊಳಗಿಸಿ ಮಹಾರಾಜನ ಆಗಮನವನ್ನು
   ಸಾರುವುದಕ್ಕೂ ಶಕು೦ತಲೆಯ ಮನಸ್ಸು ಒಮ್ಮಲೆ ಸ್ಥಿಮಿತಕ್ಕೆ ಬ೦ದು ನಿಸ್ಚಿತ
   ನಿರ್ಧಾರ ಕೈಗೊಳ್ಳುವುದಕ್ಕೂ ಸರಿಹೋಯಿತು.
         ಓಹ್! ಈ ಮಹಾರಾಜ ದುಷ್ಯ೦ತ.... ಹಲವು ವರ್ಷಗಳ ಹಿ೦ದೆ ಕಣ್ವ
   ಮುನಿಗಳ ಆಶ್ರಮದಲ್ಲಿ ಮೊದಲ ಬಾರಿ ಈತ ತನ್ನನ್ನು ಅನುನಯಿಸಿದಾಗ