ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ /ನಿರಾಕರಣಿ ೨೭೩

ಹೇಗಿದ್ದನೊ ಇನ್ನೂ ಹೆಚ್ಚು ಕಡಿಮೆ ಹಾಗೆಯೇ ಇದ್ಧಾನೆ. ಅದೇ ಉದ್ರೇಕಿತ ಮುಖ, ಹಣೆಯ ಮೇಲೆ ಬೆವರಹನಿ ಸಾಲು, ಸಣ್ಣಗೆ ಕಂಪಿಸುವ ಬಾಹುಗಳು... ದ್ವನಿಯೋ ಅಮೃತಮಯ.

          "ದೇವಿ,ನಾನೆಂದು ಪರಮಸುಖಿ !"
          "......"
          "ಏನು ? ಏಕಾಂತದಲ್ಲೂ ನಾಚಿಕೆಯೆ ? ನನ್ನ ಹತ್ತಿರ ಬರುವುದಿಲ್ಲವೆ  ?

ವರ್ಷಗಳ ಕಾಲ ನಿನಗಾಗಿ ತಪಿಸಿರುವ ನನ್ನ ಮೈ-ಮನಸ್ಸುಗಳನ್ನು ಶಾoತಗೊಳಿಸುವುದಿಲ್ಲವೆ ?"

      .....ಇಲ್ಲ ಮಹಾರಾಜ, ವರ್ಷಗಳ ಕಾಲ ತಪಿಸಿರುವ  ನನ್ನ ಮೈ-ಮನಸ್ಸುಗಳು ಒಂದು ಅಪ್ಪುಗೆಯಿಂದ ಶಾಂತವಾಗಬಹುದು.ಹಳೆಯದನ್ನಲ್ಲಾ ಮರೆತು ನೀನು ಮತ್ತೇ ತುಂಬು ಉತ್ಸಾಹದಿಂದ ಹೊಸ ಜೀವನ ಸುರು ಮಾಡಬೇಕು .ಆದರೆ ನೀನು ಗಾಸಿಗೊಳಿಸಿದ ನನ್ನ ಒಳಗೂ ಮತ್ತೂ ಚೆತರಿಸಲಾಗದು. ನೀನು ಹೊಸಕಿ ಹಾಕಿದ ನನ್ನ ಭಾವನೆಗಳು ಮತ್ತೇ ಜೀವ ತಳೆಯಲಾರವು. ಈ ಶಕುಂತಲೆಯ ಆತ್ಮಸಮ್ಮನಕ್ಕೆ ಮಾಯಲಾರದೆ ಗಾಯವಾಗಿದೆ. ಆಕೆಯನೆಂದು ಮಾಡಲಿನಂತಾಗಲಾರಳು...
  "ಇನ್ನೂ ಏನು ಯೂಚಿಸುತಿರುವೆ ದೇವಿ? ನಾನಿನ್ನ ಈ ಅಂತರ ಸಹಿಸಲಾರೆ..."
   "ನಿಲ್ಲು ಮಹಾರಾಜ !" -ಶಕುಂತಲೆ ದ್ವನಿ ಕಂಚಿನಂತೆ ಮೊಳಗಿತು. ಮಹಾರಾಜನ ಮುಖದ ಮೇಲೆ ಒಮ್ಮೆಲೆ ಮೂಡಿದ ಢಿಗಬ್ಬರ್ವ ಕಂಡು ಶಕುಂತಲೆಗೆ ತನ್ನ ದ್ವನಿ ಅವಶ್ಯಕತೆಗಿಂತ ಹೆಚ್ಚು ಕಠಿಣವಗಿದೆಎಂದು ಅನ್ನಿಸಿತು. ದ್ವನಿಯನ್ನು ಸ್ಥಿಮಿತಕ್ಕೆ ತರಲು ಯತ್ನಿಸಿದಳು.
    "ಮಹಾರಾಜ, ನಾನು ಈ ಅರಮನೆಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ. ಆತನ ವಿದ್ಯಬ್ಯಾಸ, ತರಬೆತಿ ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ ಮಾತ್ರ ನಾನು ಬಂದಿರುವೆ.ನಿನ್ನ ನಂತರ ಅವನು ಈ ಸಾಮ್ರಾಜ್ಯದ ಕೀರ್ತಿಯನ್ನು ಎಲ್ಲ ಕಡೆ ಹರದುವಂತೆ ನೋಡಿಕೊಳ್ಳಬೇಕಲ್ಲ. ಅವನನ್ನು ಹಾಗೆ ಬೆಳೆಸುವ ಜವಾಬ್ದಾರಿ ನಮ್ಮಿಬರದ್ದು ಅಲ್ಲವೇ ? ಈ ಏಕಮಾತ್ರ ಕಾರಣದಿಂದ ನಾನು ಇಲ್ಲಿ ಇರುವೆ. ಇದೊಂದು ಬಿಟ್ಟರೆ ನಮ್ಮಿಬರ ಮದ್ಯ ಇನ್ನಾವ ಸಂಬಂಧವು ಇನ್ನು ಸಾಧ್ಯವಲ್ಲ. 
  "ದೇವಿ ! ಇದೇನು?" - ಡುಷ್ಯಂತನಿಗೆ ಆಘಾತ - ನೀನೇನು ನನ್ನನ್ನು ಕ್ಷಮೀಸಲಿಲ್ಲವೇ?"