ಪುಟ:ನಡೆದದ್ದೇ ದಾರಿ.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ನಡದದ್ದೇ ದಾರಿ ವರ್ಷದಲ್ಲಿ ಆರೇಳು ಸಲ ನನ್ನ ತಾಯಿ ಹನುಮಾಪುರಕ್ಕೆ ಹೋಗಿ ಎಲ್ಲಿನ ಬಡಬಗ್ಗರಿಗೆ,ವೆಶೇಷತಃ ಶೂದ್ರರಿಗೆ,ಅನ್ನ-ವಸ್ತ್ರ-ಔಷಧ ಹಾಗೂ ಹಣ ದಾನ ಮಾಡುವ ಕಾರ್ಯಕ್ರಮ ಅನೂಚಾನವಾಗಿ ನಡೆದುಕೊಂಡು ಬಂದಿತ್ತು.ಹೀಗಾಗಿ ಆ ಗ್ರಾಮದ ಬಹುಸಂಖ್ಯಾತರಾದ ಬಡತನ ನನ್ನ ತಾಯಿ ಆಂದರೆ ಪ್ರತ್ಯೆಕ್ಷ ದೇವತೆ ಅಂತನ್ನುತ್ತಿದ್ದುದರಲ್ಲಿ ವಿಶೇಷವೆನಿಲ್ಲಾ . ನಮ್ಮ ಕಾರು ಆ ಊರಿನ ಅಗಸಿಯ ಬಳಿ ನಿಲ್ಲುತ್ತಿದ್ದುದೇ ತಡ, ಹಲವಾರು ಹರಕು ಬಟ್ಟೆಯ ದೀನಮೂಖದ ಹುಡುಗರು ದೊಡ್ಡವರು ಅದನ್ನು ಸುತ್ತುವರಿಯುತ್ತಿದ್ದ ದೃಶ್ಯ ನನಗೆ ಕಣ್ಣ ಮುಂದೆ ಕಟ್ಟಿಡಂತಿದೆ.'ಬಂದ್ಯಾ ಯವ್ವಾ ,ಬೇಶಿ ಅದೀಯಾ ?'ಅಂತ ಕೇಳಿ ನಂತರ ,'ಯಾಡ್ದ ದಿನಾ ಇರ್ತೀಯೆಲ್ಲವಾ ಯವ್ವ ?'ಅಂತ ಆಕೆಯ ವಾಸ್ತವ್ಯದ ಬಗ್ಗೆ ಖಾತರಿ ಮಾಡಿಕೊಂಡೇ ಅವರೆಲ್ಲ ಅಲ್ಲಿಂದ ಚದರುತ್ತಿದ್ದರು . ಬಂದ ತಕ್ಷಣ ತಮ್ಮ ಕಷ್ಟ -ಸುಖ ಹೇಳಿ ಆಕೆಗೆ ತ್ರಾಸು ಕೊಡಬಾರದು ,ಆಕೆ ದೇವರ ದರ್ಶನ -ಸ್ನಾನ-ನೈವೇದ್ಯ-ಪ್ರಸಾದ -ವಿಶ್ರಾಂತಿ ಎಲ್ಲ ಮುಗಿಸುವ ತನಕ ಡಿಸ್ಟರ್ಬ್ ಮಾಡಬಾರದು , ಅನ್ನುವ ತಿಳಿವಳಿಕೆಯಿರುತ್ತಿತ್ತು ಅವರಿಗೆ ಅಂತಲೇ ಸಾಯಂಕಾಲದ ತನಕ ಅವರ್ಯಾರು ಮಡಿ -ಮಡಿ ಅನ್ನುವ ಬ್ರಾಹ್ಮಣರ ಸರ್ಕಲ್ ಕಡೆ ಸುಳಿಯುತ್ತಿರಲಿಲ್ಲ .ಹೊತ್ತು ಮುಳುಗುತ್ತಿದ್ದ0ತೆ ಹೊಲಗೆಲಸಗಳಿಂದ ಮರಳಿದ ಅವರೆಲ್ಲ ಯಥಾಪ್ರಕಾರ ನನ್ನ ತಾಯಿಯನ್ನು ಸುತ್ತುವರಿಯುತ್ತಿದ್ದರು .

     ಅದರೆ ಈ ವಾಡಿಕೆಯ ನಿಯಮಗಳಿಗೆ ವಿರುದ್ದವಾಗಿ ವರ್ತಿಸುವ ವ್ಯಕ್ತಿಯೊಂದಿತ್ತು, ಹನುಮಾಪುರದ ಹೊಲೆಯರ ಕೇರಿಯಲ್ಲಿ .ನಾನೀಗ ಇಷ್ಟು ವರ್ಷಗಳ ನಂತರವೂ ಮರೆಯಲಾರದೆ ನೋವು ತುಂಬಿದ ಕೃತಜ್ಞತೆ ಯೊಂದಿಗೆ ಸ್ಮರಿಸುತ್ತಿರುವುದು ಅದೇ ವ್ಯಕ್ತಿಯನ್ನು . ಆಕೆ ರಾಧವ್ವ  ,ಹನುಮಾಪುರದ ಹೊರವಲಯದಲ್ಲಿ ಅವಳ ಪುಟ್ಟ  ಗುಡಿಸಲು ,ದೊಡ್ಡ  ಸಂಸಾರ ,ದೇವಸ್ಥಾನದ ಪೌಲಿಯ ಕಸವನ್ನು ದಿನಕ್ಕೆರದು ಬಾರಿ ಬಳಿಯುವುದು ಅವಳ ಕಸುಬು .ದೇವಸ್ಥಾನದವರು  ಉಂಬಳಿ ಹಾಕಿಕೊಟ್ಟ ಒಂದೆಕೆರೆ ಹೊಲವೇ ಅವಳ ಹೊಟ್ಟೆಗೆ ಆಧಾರ .ಅವಳ ಮನೆಯ ಗಂಡಸರೆಲ್ಲ ಸೋಮಾರಿಗಳಾದುದರಿಂದ ಆ ಹೊಲದ ಉತ್ಪನ್ನ ಸಂಸಾರಕ್ಕೆ ಏನೂ ಸಾಲದೆ ಮಕ್ಕಳು ಮರಿಗಳೆಲ್ಲ ವರ್ಷದಲ್ಲಿ ಆರು ತಿಂಗಳು ಹೆಚ್ಚು ಕಡಿಮೆ ಉಪವಾಸವೇ ಇರಬೇಕಾದ ಪರಿಸ್ಥಿತಿ .ಬಡತನ - ಉಪವಾಸ -ರೋಗರುಜಿನ ಇಲ್ಲವೆ ಜೀವನದ ಅವಿಭಾಜ್ಯ ಅಂಗಗಳೇ ಆಗಿದ್ದ ಹನೂಮಾಪುರದ ಬಹುಪಾಲು ಜನರಂತೆ ರಾಧವ್ವನೂ ಅವಕ್ಕೆಲ್ಲ ಒಂದು ರೀತಿಯಿಂದ ಒಗ್ಗಿಕೊಂಡಿದ್ದಳು. ಆದರೆ ಉಳಿದವರಂತೆ ಅವಳೆಂದೂ ಕಷ್ಟ ಕಾರ್ಪಾಣ್ಯಗಳ ಬಗೆಗೆ