ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖುಷಿಗೊಳ್ಳುತ್ತಿದ್ದೆವು.ಅಲ್ಲಿರುವತನಕವೂ ಅವಳ ಪ್ರೀತಿಯ ಅಮೃತವನ್ನು ಸವಿದು ಧನ್ಯತೆ ಅನುಭವಿಸುತ್ತಿದ್ದೆವು.ನಮ್ಮ ತಾಯಿಯ ಸಂಗದಿಂದ-ಸೇವೆಯಿಂದ ರಾಧವ್ವನಿಗೆ ಹೆಚ್ಚು ತೃಪ್ತಿಯಾಗುತ್ತಿತ್ತೋ,ರಾಧವ್ವನ ಸಂಗತಿಯಿಂದ ನಮಗೆಲ್ಲ ಹೆಚ್ಚು ತೃಪ್ತಿಯಾಗುತ್ತಿತ್ತೋ ಹೇಳಲು ಸಾಧ್ಯವಿರಲಿಲ್ಲ. ಹನುಮಾಪುರದೊಂದಿಗೆ ಅದೆಂತಹ ಋಣಾನುಬಂಧವೋ,ನನ್ನ ತಾಯಿ ತಮ್ಮ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬಯಸಿದರು.ನಗರದ ಹಲವರು ತಜ್ನ ಡಾಕ್ಟರುಗಳು ಪರೀಕ್ಷಿಸಿ ಔಷಧೋಪಚಾರ ಮಾಡಿ,ಏನೂ ತಿಳಿಯದೆ ಕೈಬಿಟ್ಟ ನಂತರ,'ನನ್ನನ್ನು ಹನುಮಾಪುರಕ್ಕೆ ಕರಕೊಂಡು ಹೋಗಿರಿ,ಪ್ರಾಣದೇವರ ಸನ್ನಿಧಿಯಲ್ಲೇ ನನ್ನ ಪ್ರಾಣ ಹೋಗಲಿ'ಅಂತ ಆಕೆ ಪಟ್ಟು ಹಿಡಿದಾಗ ಆಕೆಯ ಅಪೇಕ್ಷೆಯಂತೆ ಆಳು-ಕಾಳು ಸಮೇತ ತಂದೆಯವರೂ ಹಿರಿಯ ಮಗಳಾದ ನಾನೂ ಆಕೆಯನ್ನು ಅಲ್ಲಿಗೇ ಕರೆದೊಯ್ದು ಠಿಕಾಣಿ ಹೂಡಿದೆವು.ಅಲ್ಲಿ ಆಕೆ ಸುಮಾರು ಒಂದು ತಿಂಗಳಕಾಲ ಬದುಕಿದ್ದರು.ಹಾಸಿಗೆಯ ಮೇಲೆ ಮಲಗಿದ್ದಲ್ಲಿಂದಲೇ ಆಕೆಯ ದಾನ-ಧರ್ಮ ಕಾರ್ಯಕ್ರಮಗಳು ನಡೆಯುತ್ತಿದ್ದವು.ತೀರ ಕೊನೆಗೆ ಮಾತ್ರ ಆಕೆ ಅಂತರ್ಮುಖಿಯಾಗಿದ್ದು ಆ ದಿನಗಳಲ್ಲಿ ಆಕೆಯ ಎಡೆಬಿಡದ ಸಂಗಾತಿಯಾಗಿ ಹಗಲು-ರಾತ್ರಿ ರಾಧವ್ವ ಮಾಡಿದ ಸೇವೆಯ ಪರಿ ನಿಜಕ್ಕೂ ಶಬ್ದಗಳ ಅಳವಿಗೆ ಸಿಗುವಂಥದಲ್ಲ.ಹಗಲು ಊಟ ಮಾಡದೆ ರಾತ್ರಿ ನಿದ್ದೆ ಮಾಡದೆ ಗಂಭೀರವನದಿಂದ ರಾಧವ್ವ ನನ್ನ ತಾಯಿಯ ಬಳಿ ಕುಳಿತಿರುತ್ತಿದ್ದಳು.ಅತಿ ಮೆಲುದನಿಯಲ್ಲಿ ಆಕೆಯ ಬೇಕು-ಬೇಡಗಳನ್ನು ವಿಚಾರಿಸುತ್ತಿದ್ದಳು.ಆಕೆಯ ಮಲ-ಮೂತ್ರಾದಿಗಳು ಸಹ ಪ್ರಾಸಾದವೋ ಎಂಬಷ್ಟು ಭಕ್ತಿಯಿಂದ ಕೈಯಿಂದಲೇ ತೆಗೆದು ಸ್ವಚ್ಛ ಮಾಡುತ್ತಿದ್ದಳು.ನಡುರಾತ್ರಿ ಸರಿದಾಗ ಒಬ್ಬಳೇ ಹೋಗಿ ಭವ್ಯವಾದ ಹನುಮಂತ ದೇವರ ಮೂರ್ತಿಯೆದುರು ಕೂತು,'ನಮ್ಮ ಹಡದವ್ವನ್ನ ಬದುಕಿಸಿಕೊಡು.ಇಲ್ಲಾಂದರ ನಾ ನಿನ್ನ ಮಕಾ ನೋಡಾಕಿಲ್ಲ,ನಿನ್ನಾಣೆ'ಅಂತ ಕಣ್ಣೀರುಗರೆಯುತ್ತಿದ್ದಳು.ಶೀಘ್ರವೇ ಬಂದೆರಗಲಿರುವ ಸಾವನ್ನೆದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಲಿದ್ದ ನಾವು ರಾಧವ್ವನ ಮೌನ ತಪಸ್ಸನ್ನು ಆಚ್ಚರಿಯಿಂದ ನೋಡುತ್ತಿದ್ದೆವು.ಆ ಅಶಿಕ್ಷಿತ ಹಳ್ಳಿಗಾಡಿನ ಹೆಂಗಸಲ್ಲಿ ಅದೆಂತಹ ಅಪೊರ್ವ ಸಂಸ್ಕೃತಿ,ಅದೆಂತಹ ತ್ತತ್ವಜ್ನಾನ-ದಾರ್ಶನಿಕತೆ ಇದ್ದವು!ಅದ್ಯಾವ ಕಾರಣಗಳಿಂದ ಆಕೆ ನನ್ನ ತಾಯಿಯ ಬಗ್ಗೆ ಅತಂಹ ವರ್ಣನಾತೀತ ಪ್ರೀತಿ-ಭಕ್ತಿ-ಶ್ರದ್ಧೆಗಳನ್ನಿರಿಸಿಕೊಂಡಿದ್ದಳು!ಅದು ಹೇಗೆ ಕಲುಷಿತ ಪರಿಸರದಲ್ಲಿ ಆಕೆಯ