ಪುಟ:ನಡೆದದ್ದೇ ದಾರಿ.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ನಡೆದದ್ದೆ ದಾರಿ

ದೂರದೂರಿಗೆ ಬಂದು ನೆಲೆಸಿದ ನಾನು ಬಹಳ ಕಾಲ ಮತ್ತೆ ಹನುಮಾಪುರಕ್ಕೆ ಹೋಗಲಾಗಿರಲಿಲ್ಲ. ಹಾಗಿರುವಾಗೊಮ್ಮೆ ಅಲ್ಲಿಂದ ಬಂದಿದ್ದ ಯಾರೋ ಹೇಳಿದರು-ರಾಧವ್ವನಿಗೆ ಕ್ಯಾನ್ಸರ್ ಅಂತೆ. ತುಂಬ ಸೋತುಹೋಗಿದ್ದಾಳಂತೆ. ಅವಳ ಮಕ್ಕಳು- ಮರಿ ಯಾರೂ ಅವಳನ್ನು ವಿಚಾರಿಸಿಕೊಳ್ಳುತ್ತಿಲ್ಲವಂತೆ, ಇತ್ಯಾದಿ. ನನ್ನ ತಂದೆಯವರಿಗೆ ವಯಸ್ಸಾಗಿತ್ತು. ಅಣ್ಣ -ತಮ್ಮಂದಿರು, ಅಕ್ಕ -ತಂಗಿಯರು ಅವರವರ ಸಂಸಾರಗಳಲ್ಲಿ ಮಗ್ನರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ತಂದೆಯವರು ರಾಮನವಮಿಗೆ ಮಾತ್ರ ಹನುಮಾಪುರಕ್ಕೆ ಹೋಗುತ್ತಿದ್ದರು. ಅದೂ ಬೆಳಿಗ್ಗೆ ಹೋಗಿ ಸಮಾರಾಧನೆ ಮುಗಿಸಿ ರಾತ್ರಿಯೇ ಅಲ್ಲಿಂದ ಹೊರಟು ಬಂದುಬಿಡುತ್ತಿದ್ದರು. ರಾಧವ್ವನಿಗೆ ಹುಷಾರಿಲ್ಲದ ಸುದ್ದಿ ಕೇಳಿ ಅಯ್ಯೋ ಪಾಪ ಅಂತಂದು ಒಂದಿಷ್ಟು ಹಣ ಕೊಟ್ಟು ಬಂದಿದ್ದರು. 'ಒಳ್ಳೆ ಹೆಣ್ಮಗಳು, ಹೀಗಾಗಬಾರದಿತ್ತು' ಅಂದಿದ್ದರು. ಇನ್ನೇನು ಮಾಡಲು ಸಾಧ್ಯ- ಅಂದುಕೊಂಡಿದ್ದರು. ವಿಷಯ ತಿಳಿದು ದೂರದ ಊರಿನಲ್ಲಿದ್ದ ನಾನು ಸಹಜವಾಗಿಯೇ ತ್ರಸ್ತಳಾಗಿದ್ದೆ. ನಮ್ಮ ಮನೆತನದ ಜೀವವಾಗಿದ್ದ -ಬೆಳಕಾಗಿದ್ದ ನಮ್ಮ ತಾಯಿಯವರನ್ನು ಹತ್ತಿಪ್ಪತ್ತು ವರ್ಷಗಳ ಕಾಲ ನಿರ್ವಂಚನೆಯಿಂದ ನಿರ್ವ್ಯಾಜಪ್ರೀತಿಯಿಂದ ಸೇವಿಸಿದ್ದ ಆ ಹೆಣ್ಮಗಳು ಕ್ಯಾನ್ಸರ್ ನಂಥ ಭೀಕರ ಕಾಯಿಲೆಗೆ ತುತ್ತಾಗಿ, ಅಸಹಾಯಕಳಾಗಿ ಬಳಲುತ್ತಿರುವಾಗ, ಅವಳಿಂದ ಅಷ್ಟೊಂದನ್ನು ಪಡೆದುಕೊಂಡಿದ್ದ ನಾವು ಅವಳಿಗಾಗಿ ಏನೂ ಮಾಡುವುದು ನಿಜವಾಗಿಯೂ ಸಾಧ್ಯಾವಿರಲಿಲ್ಲವೇ ಅಂತ ನನ್ನ ಮನಸ್ಸಿನಲ್ಲಿ ತುಮುಲ ಶುರುವಾಯಿತು. ಅವಳನ್ನು ನಗರಕ್ಕೆ ಕರೆತಂದು ದವಾಖಾನೆಗೆ ಸೇರಿಸಿ ಹೊತ್ತು ಹೊತ್ತಿಗೆ ಆಹಾರ-ಪಾನೀಯ-ಪಥ್ಯ ಒದಗಿಸಿ ಸರಿಯಾದ ಆರೈಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿರಲಿಲ್ಲವೇ ಅಂತ ನನಗೆ ಅನಿಸತೊಡಗಿತು. ಆದರೇನು ? ತಂದೆಯವರಿಗೆ ನಿಶ್ಶಕ್ತಿ, ಪರಾಧೀನತೆ. ಅಣ್ಣ -ತಮ್ಮಂದಿರಿಗೆ ಅವರವರ ನೌಕರಿ-ಬಿಝಿನೆಸ್ಸು, ಅವರವರ ಹೆಂಡಂದಿರಿಗೆ ಸಹಜ ಅನಾಸಕ್ತಿ. ಅಕ್ಕತಂಗಿಯರು ಅತ್ತೆಮನೆಗಳಲ್ಲಿರುವವರು. ಇನ್ನುಳಿದುದು ಸರ್ವತಂತ್ರ ಸ್ವತಂತ್ರಳಾಗಿದ್ದ ನಾನೇ. ನಾನೇ ರಾಧವ್ವನನ್ನು ಕರೆತಂದು ಕ್ಯಾನ್ಸರ್ ಹಾಸ್ಪಿಟಲ್ ಗೆ ಸೇರಿಸುವುದು ಯೋಗ್ಯ ಹಾಗೂ ಅವಶ್ಯ. ಈ ಬಗ್ಗೆ ಎರಡು ಮಾತ್ತಿಲ್ಲ ಅಂದುಕೊಂಡೆ. ನಿರ್ಧರಿಸಿದೆ. - ಆದರೆ ಸಮಸ್ಯೆಗಳಿದ್ದವು. ನನ್ನ ಮಕ್ಕಳು ಚಿಕ್ಕವು. ಗಂಡನಿಗೆ ವಿಪರೀತ ಜವಾಬ್ದಾರಿಯ ನೌಕರಿ. ನಾನು ರೋಗಿಯ ಸೇವೆಗಾಗಿ ದವಾಖಾನೆಯಲ್ಲುಳಿದರೆ ಸಂಸಾರವನ್ನು ನೋಡುವವರ್ಯಾರು? ಅದೂ ಅಲ್ಲದೆ ದವಾಖಾನೆಯಲ್ಲಿರುವ ಒಂದು