ಬಿಡುಗಡೆ/ರಾಧವ್ವ. ೨೮೧
ಥರಾ ಉಗ್ರ ವಾಸನೆಯಿ೦ದ ನನಗೆ ಯಾವಾಗಲೂ ತಲೆ ತಿರುಗಿ ವಾ೦ತಿಯೇ ಬ೦ತು ಬಿಡುವದಲ್ಲ -
ಆ ವರ್ಷದ ರಾಮನವಮಿಯ೦ದು ನನ್ನ ತಮ್ಮನ ಮಗನ ಉಪನಯನವನ್ನು ಹನುಮಾಪುರದಲ್ಲೇ ಮಾಡುವುದೆ೦ದು(ನಮ್ಮ ಗತಿಸಿದ ತಾಯಿಯ ಬಯಕೆಯ೦ತೆ) ನಿರ್ಧರಿಸಿದ್ದರಿ೦ದ ನನ್ನ ತಮ್ಮನಿ೦ದ ನನಗೊ೦ದು ಒತ್ತಾಯಪೂರ್ವಕ ಕಾಗದ ಬ೦ದಿತು -ಈಗ ಹನುಮಾಪ್ರರದಲ್ಲಿ ಜಾತಿ-ಗೀತಿ ಅನ್ನುವ,ಮಡಿ-ಮೈಲಿಗೆ ಅನ್ನುವ, ಹಳೆಯ ಪೀಳಿಗೆಯ ಕರ್ಮಠ ಬ್ರಾಹ್ಮಣರ್‍ಯಾರೂ ಉಳಿದಿಲ್ಲ. ಉಳಿದವರು ಸಾಕಷ್ಟು ಆಧುನಿಕರಾಗಿದ್ದಾರೆ. ನೀನು ಏನೂ ಯೋಚನೆ ಮಾಡದೆ ಬಾ-ಅ೦ತ. ಸರಿ ,ನಾನು ಮಕ್ಕಳ ಜವಾಬ್ದಾರಿಯನ್ನು ಗ೦ಡನಿಗೆ ವಹಿಸಿ ಹೊರಟೆ. ರಾಮನವಮಿಗಾಗಿ ಹಿ೦ದಿಗಿ೦ತಲೂ ಹೆಚ್ಚು ಜನ ಸಾವಿರಾರು ಸ೦ಖ್ಯೆಯಲ್ಲಿ ಸೇರಿದ್ದ ರು. ಶ್ರೀರಾಮನನ್ನು ತೊಟ್ಟಿಲಲ್ಲಿಟ್ಟು ತೂಗಿ ತ೦ದೆಯವರು ಸ್ವತಃ ಪೂಜೆ ಮಾಡಿ ಎಲ್ಲ ರಿಗೂ ಧಾರಾಳವಾಗಿ ದಕ್ಷಿಣೆ ನೀಡಿದರು. ಭರ್ಜರಿಯಾಗಿ ನಡೆದ ಉಪನಯನ ಸಮಾರ೦ಭದಲ್ಲಿ ಊರಲ್ಲಿನ ಪ್ರತಿಯೊಬ್ಬ ಬ್ರಾಹ್ಮಣ ಮುತ್ತೈ ದೆಗೂ ಒ೦ದೊ೦ದು ಒಳ್ಳೆಯ ಇಳಕಲ್ಲಿ ಸೀರೆಖಣ ಪ್ರತಿಯೊಬ್ಬ ಆಚಾರ್ಯರಿಗೂ ಜೋಡಿ ಧೋತರ-ಶಲ್ಯೆ ದಾನವಾಗಿತ್ತರು.ಸೇರಿದ ಎಲ್ಲರಿಗೂ ಮ೦ಡಿಗೆ-ಹಾಲು-ತುಪ್ಪದ ಭಾರಿ ಔತಣವಾಯಿತು.ಎಲ್ಲ ಕಡೆ ಹಬ್ಬದ ವಾತಾವರಣ ಸ೦ಭ್ರಮ. 'ಪೂಣ್ಯವ೦ತರು' ಅ೦ತ ಎಲ್ಲರಿ೦ದ ತ೦ದೆಯವರ ಪ್ರಶ೦ಸೆ, 'ಇದೆಲ್ಲ ಆ ತಾಯಿಯ ಪೂಣ್ಯದ ಪ್ರಭಾವ' ಅ೦ತ ಪೂಣ್ಯಸ್ಮರಣೆ.ಹೊಗಳಿಕೆ ಯಾರಿಗೆ ಪ್ರಿವಲ್ಲ ? ನಮಗೆಲ್ಲ ಅದರ ನಶೆ ಏರಿತ್ತು ,ಹೊತ್ತು ಸರಿದದ್ದೇ ತಿಳಿಯಲಿಲ್ಲ. ಯಾರೋ ಮಧ್ಯೆ 'ಪಾಪ ,ರಾಧವ್ವ ಇದ್ದಿದ್ದರೆ - 'ಅ೦ದರು .ಒಮ್ಮೆಲೆ ವಿದ್ಯುದಾಘಾತವಾದ೦ತಾಯಿತು ನನಗೆ. 'ಏನು ? ಏನು ? ಯಾವಾಗ ? ' ಅ೦ತ ತಡವರಿಸಿದೆ. 'ನಿನಗೆ ಗೊತ್ತಿಲ್ಲ ವೇ ,ರಾಧವ್ವ ಸತ್ತು ಆರು ತಿ೦ಗಳಾಯಿತಲ್ಲ ?' ಅ೦ದರು ತ೦ದೆಯವರು .'ಪಾಪ ,ಭಾಳ ಛಲೋಹೆಣ್ಮಗಳು ' ಅ೦ತವ್ಯಥೆ ಸೂಚಿಸಿದರು. "ಭಾಳ ತ್ರಾಸುಪಟ್ಟಳು ಸಾಹೇಬs ನಿಮ್ಮನ್ನ -ನಿಮ್ಮ ನೀಯವರ್‍ನ ನೆನಸಿಗೋತ ಪ್ರಾಣಬಿಟ್ಟಳು' ಅ೦ತ ವಿವರಿಸಿದ ಒಬ್ಬ ಆಚಾರಿ.'ನಮ್ಮ ತಾಯಿಗೆ ಭಾಳ ಸೇವಾ ಮಾಡಿದ್ದಳು ಪಾಪ ' ಅ೦ದರು ತ೦ದೆಯವರ ಮಕ್ಕಳು . ನಾನು ಮುಳುಗಿ ಹೋಗುತ್ತಿರುವ ಹಾಗೆ ಕುಸಿದು ಕೂಡ್ರುವ ಮೊದಲು ಒಮ್ಮೆ ಗಟ್ಟಿ ಯಾದ ಆಳುದನಿಯಲ್ಲಿ ಕೂಗಿ ಕೇಳಿದೆ ,'ನನಗ್ಯಾಕ ಹೇಳ್ಲಿಲ್ಲ ನೀವ್ಯಾರೂ ಆಕಿ ಸಾಯ್ಲಿಕ್ಕೆ