ಪುಟ:ನಡೆದದ್ದೇ ದಾರಿ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨. ನಡೆದದ್ದೇ ದಾರಿ

ಅಲ್ಲಾಡಿಸುತ್ತಾ ತಮ್ಮ ಹಿಂದಿಂದೆ ತಿರುಗಿದರೆ ಸಾಕು,ಎಲ್ಲಾ ಮರೆತುಬಿಡುತ್ತಾರೆ.
ಇವರಿಗೆ ಬುದ್ಧಿ ಹೇಳುವದು ವಾಡ೯ನ್ ಆಗಿರುವ ತನ್ನ ಕರ್ತವ್ಯ.
ಎತ್ತರದ ದನಿಯಲ್ಲೇ ಮುಂದುವರಿಸಿದಳು ಪ್ರೊ. ಲೀಲಾವತಿ, "ನಾ ನಿಮಗ
ಸ್ಪಷ್ಟ ಹೇಳಿರತೀನಿ. ಇಂಥಾದೆಲ್ಲಾ ಹಾಸ್ಪಲಿನೊಳಗೆ ನಾ ನಡಸಿಗೊಡಲಿಕ್ಕಿಲ್ಲ.
ನಾಳಿನಿಂದ ನಿಮಗೆ ಎಲ್ಲೆರs ಹೋಗೂದಿದ್ರ ನನಗೆ ಹೇಳಿ ಹೋಗತಕ್ಕದ್ದು. ತಡಾ
ಆಗಿ ಬಂದ್ರ ಬಾಗಲಾನೇ ತಗೀಬ್ಯಾಡಂತ ನಾ ಬಸ್ಯಗ ಹೇಳಿಬಿಡತೀನಿ.ಒಂದು ಹೋಗಿ
ಒಂದು ಆತಂದ್ರ ನಾ ಜವಾಬ್ದಾರ ಆಗಬೇಕಾಗತದ. ನಿಮಗೇನು? ನೆನಪಿನ್ಯಾಗಿಟಗೊಳ್ರಿ
ನಾ ಹೇಳಿದ್ದು. ತಿಳೀತಿಲ್ಲೋ?"
....ಎಷ್ಟು ಸೊಕ್ಕು ಈ ಹುಡಿಗಿಯರಿಗೆ ! ತಾನಿಷ್ಟು ಗಂಟಲು ಹರಿದುಕೊಂಡರೂ
ಒಬ್ಬಳು 'ಹ್ಞೂ' ಅನ್ನಲಿಲ್ಲ. ಮುಖ ಕೆಳಗೆ ಮಾಡಿ ಹಲ್ಲು ಕಿಸಿಯುತ್ತಿದ್ದಾಳೆ ಆ
ಮೂಲೆಯಲ್ಲಿ ನಿಂತವಳು. ಇವರಿಗೆ ಏನಾದರೂ ಶಿಕ್ಷೆ ವಿಧಿಸಬೇಕು.ಅಂದಾಗಲೇ
ದಾರಿಗೆ ಬರುತ್ತಾರೆ. "ಸರೋಜಿನಿ ಬಂದ ಕೂಡ್ಲೇ ನನಗೆ ಭೆಟ್ಟ್ಯಾಗಂತ ಹೇಳ್ರಿ ಅಕೀಗೆ."
-ಹಾಜರಿ ಪುಸ್ತಕವನ್ನು ಟೇಬಲ್ ಮೇಲೇ ಬಿಟ್ಟು ಪ್ರೋ.ಲೀಲಾವತಿ ತನ್ನ
ರೂಮಿಗೆ ಬಂದು ದೀಪ ಹಾಕಿ ಉಸ್ಸೆಂದು ಕುರ್ಚಿಯ ಮೇಲೆ ಕುಳಿತಳು.
ಹಲವಾರು ಪತ್ರಗಳು ಟೇಬಲ್ ಮೇಲೇ : "To ಪ್ರೊ. ಮಿಸ್ ಲೀಲಾಬಾಯಿ
ನಾಯಿಕ, ಎಂ.ಎಸ್‌ಸಿ." ಥೂ, ಯಾಕೆ ತನ್ನ ಹೆಸರಿಗೆ 'ಬಾಯಿ' ಸೀರಿಸುವರೋ ಪತ್ರ ಬರೆಯುವ
ಮುಟ್ಠಾಳರು? ಅದೇನು ಗೌರವವಾಚಕವೇ? ಇದ್ದೀತು. ಆದರೆ ತಾನು ನಲವತ್ತೈದು
ದಾಟಿರುವೆನೆಂದು ನೆನಪಿಸಿಕೊಡುವ ಈ 'ಬಾಯಿ' ಕಂಡರೆ ತನಗೇಕೋ ಬಹಳ ಸಿಟ್ಟು.
ಆ ಪತ್ರ ಓದುವ ಮನಸ್ಸೇ ಆಗುವದಿಲ್ಲ. ಪತ್ರ ಬಂದು ಇಲ್ಲಿ ಬಿದ್ದು ತಾಸಿನ
ಮೇಲಾಗಿದೆ. ಆದರೂ ಒಡೆದು ನೋಡುವ ಆತುರವಿಲ್ಲ. ಮೇಲೇ 'From' ಎಂದಲ್ಲಿ
ಯಾವುದೋ ಸ್ಕೂಲಿನ ಸಿಕ್ಕಾ ಇದೆ. ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ
ತನ್ನನ್ನು ಅಮಂತ್ರಿಸಿರಬೇಕು. ಅದಕ್ಕಿಂತ ಹೆಚ್ಚಿನದು ಏನೂ ತನಗೆ ಬರುವ ಯಾವ
ಪತ್ರಗಳಲ್ಲೂ ಇರುವುದೇ ಇಲ್ಲ. ಮುಂಜಾನೆ ಅಭ್ಯಾಸ ಮಾಡುವುದು ಬಿಟ್ಟು, ಅಥವಾ ಎದುರಿಗೆ
ಪುಸ್ತಕವಿದ್ದರೂ ರಸ್ತೆಯ ಮೇಲೆ ಕಣ್ಣು ನೆಟ್ಟು, ಹಾಸ್ಟೆಲಿನ ಗೇಟಿನ ಹೊರಗೆ ದೂರ
ಆ ಖಾಕಿ ಡ್ರೆಸ್ಸಿನ ಪೋಸ್ಟಮನ್ ಕಾಣಿಸಿದಾಗ ಉಟ್ಟ ಸೀರೆಯ ಪರಿವೆಯೂ ಇಲ್ಲದೆ
ಹೊರಬಾಗಿಲ ವರೆಗೆ ಓಡಿ ಹೋಗುತ್ತಾರಲ್ಲ ಈ ಹುಡುಗಿಯರು. ಅವರಿಗೆ ಬರುವ