ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನ್ನು ದಾಟಿದಾಗ ಆತ ಒಂದು ದಿನ ಮಧ್ಯಾಹ್ನದ ಬಿಡುವಿನಲ್ಲಿ ಆಕೆ ಒಬ್ಬಳೇ ಚಹಾ ಕುಡಿಯುತ್ತಿದ್ದಾಗ ಆಕೆಯನ್ನು ಸಮೀಪಿಸಿ ಮೆಲುದನಿಯಲ್ಲಿ ಹೇಳಿದ,"ಹೀಗೆಲ್ಲ ಮಾಡಬಾರದು ಕುಸುಮಾ,ನಿಮ್ಮ ಬಗ್ಗೆ ಏನೊ ಅನ್ನಿಸುವುದಿಲ್ಲ."ಅವಳಿಗೆ ಬಹಳ ದುಃಖವಾದದ್ದು ಅವಳ ಮುಖಭಾವದಿಂದಲೇ ಆತನಿಗೆ ತಿಳಿಯಿತು.ಆಕೆ ಸುಮ್ಮನೆ ಎದ್ದು ಹೋಗಬಹುದೆಂದು ಆತನಿಗೆ ಅನಿಸಿತು.ಆದರೆ ಅದಕ್ಕೆ ವ್ಯತಿರಿಕ್ತವಾಗಿ ಆಕೆ ಜಗಳ ಮಾಡುವ ಧಾಟಿಯಲ್ಲಿ "ಆದರೆ ಯಾಕೆ?ಯಾಕೆ?ಯಾಕೆ ಅಂತ ನೀವು ಹೇಳಲಿಕ್ಕೇಬೇಕು" ಅಂತ ಪದೇಪದೇ ಕೇಳತೊಡಗಿದಳು.ಈ ಪ್ರಶ್ನೆಗೆ ಏನೆಂದು ಉತ್ತರಿಸುವುದೆಂದು ತಿಳಿಯದೆ ಕ್ಷಣಕಾಲ ಪೆಚ್ಚಾಗಿ ಆತ ಆಕೇಯನ್ನೇ ನೋಡುತಲಿದ್ದ.ಆಕೆ ಪುನಃ ಪುನಃ ಪೀಡಿದಸಿದಾಗ ಆತನಿಗೆ ಸಿಟ್ಟೇ ಬಂದಿತು. ಆಗ ತುಸು ಸ್ಪಷ್ಟವಾಗಿಯೇ ಹೇಳಿದ : "ಯಾಕೆ ಅಂದರೆ-ಯಾಕೆ ಅಂದರೆ-ನೀವು ಬಹಳ ತೆಳುವಾಗಿದ್ದೀರಿ,ಮಾತಾಡುವಾಗ ತಡವರಿಸುತ್ತೀರಿ, ಬಗ್ಗಿ ನಡೆಯುತ್ತೀರಿ, ಸೀರೆ ಸಹ ಸರಿಯಾಗಿ ಉಡುವುದಿಲ್ಲ...."ಆತನಿನ್ನೂ ಮಾತಾಡುತ್ತಲೇ ಇದ್ದಾಗ ಆಕೆ ತಟ್ಟನೆ ಎದ್ದು ಹೋಗೇ ಬಿಟ್ಟಳು,ಮುಂದೆ ಒಂದು ವಾರ ರಜೆಯ ಮೇಲೇ ಇದ್ದಳು .ಆ ಅವಧಿಯಲ್ಲೇ ಬೇರೆ ಊರಿಗೆ ಟ್ರಾನ್ಸಫರ್ ಮಾಡಿಸಿಕೊಂಡು ಊರು ಬಿಟ್ಟೇ ಹೋದಳು. ನಂತರ ಎಂದೂ ಆಕೆ ಆ ಬ್ಯಾಂಕಿನಲ್ಲಿ ಯಾರ ಕಣ್ಣಿಗೂ ಬೀಳಲಿಲ್ಲ.ಸತೀಶನಿಗೇನೋ ಪೀಡೆ ತೊಲಗಿತು ಅಂತ ಸಮಾಧಾನವೇ ಆಯಿತು.ಆದರೆ ಈ ನಡುವೆ ಸತೀಶ ಕುಲಕರ್ಣಿಯನ್ನು ಪ್ರೀತಿಸಿ,ಪ್ರೀತಿಸಿ,ಪ್ರೇಮಭಂಗ ಹೊಂದಿ,ಎದೆ ಒಡಕೊಂಡು,ಆ ಹುಡುಗಿ ದೇಶಾಂತರ ಹೋದಳೆಂದು ಗುಸುಗುಸು ಹರಡಿದ್ದರಿಂದ ಸತೀಶನಿಗ ಬಹಳ ಬೇಸರವಾಯಿತು.ಇದರಲ್ಲಿ ನಿಜವಾಗಿ ಆತನ ತಪ್ಪೇನೂ ಇರಲಿಲ್ಲ.ಅವಳೇಕೆ ಸುಮ್ಮನೆ ಎದೆ ಒಡೆದುಕೊಳ್ಳಬೇಕಿತ್ತು? ತಾನೇನೂ ಯಾವ ರೀತಿಯಲ್ಲೂ ಅವಳಿಗೆ ಪ್ರಚೋದನೆ ನೀಡಿರಲಿಲ್ಲ. ಬಿಡುವಿನ ವೇಳೆ ಒಬ್ಬನೇ ಕೂತು ಇದು ಹೀಗಾಯಿತಲ್ಲ ಅಂತ ಯೋಚಿಸುವಾಗ ಸತೀಶನಿಗೆ ಅನ್ನಿಸಿತ್ತು:ತಾನು ಆ ಹುಡುಗಿಯ ಪ್ರೀತಿ ನಿರಾಕರಿಸಲು ಅವಳು ತೆಳ್ಳಗಿದ್ದದ್ದೇ ಕಾರಣವೆ? ಖಂಡಿತ ಅಲ್ಲ. ಪ್ರೀತೆಗೂ ದೈಹಿಕ ಆಕರ್ಷಣೆಗೂ ಏನೂ ಸಂಬಂಧವಿರಲಾರದು.ಆಕೆ ದೈಹಿಕವಾಗಿ ಅನಾಕರ್ಷಕಳಾಗಿದ್ದಷ್ಟೇ ತನ್ನ ನಿರಾಕರಣೆಗೆ ಕಾರಣವಲ್ಲ.ಪ್ರೀತಿ ಹುಟ್ಟಲು ಅಥವಾ ಹುಟ್ಟದೇ ಇರಲು ಇದಕ್ಕೂ ಬಲವತ್ತರವಾದ ಬೇರಾವುದೋ ಕಾರಣಗಳಿರಬೇಕು.ಅವು ಯಾವವು? ಇಂತಹದೇ ಸಂದಿಗ್ಧ ಮನಸ್ಥಿತಿಯಲ್ಲಿದ್ದಾಗ ಸತೀಶ ಕುಲಕರ್ಣಿಗೆ ಒಮ್ಮೆಲೇ ಈ ಎಲ್ಲಾ ಪ್ರಶ್ನೆಗಳಿಗೊ ಥಟ್ಟನೇ ಉತ್ತರ ಹೊಳೆದ ಅನುಭವವಾಯಿತು.ಅದಕ್ಕೆ ಕಾರಣ ಶೋಭಾ ನಾಯಕ ಅನ್ನುವ ಹೊಸ ಹುಡುಗಿ.ಅದೇ ಬ್ಯಾಂಕಿನ ಇನ್ನೊಂದು