ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೬ ನಡೆದದ್ದೇ ದಾರಿ

ಗೊತ್ತಾಯಿತು-ತಾನು ಈ ಗುರುತಿಲ್ಲದ ಹುಡುಗಿ ಶೋಭಾ ನಾಯಕಳನ್ನು

ಪ್ರೀತಿಸುತ್ತಿದ್ದೇನೆ-ಎಂದು.

ಅಷ್ಟರಲ್ಲಾಗಲೇ ಆಕೆ ರಸ್ತೆಗೆ ಬಂದು ತನಗಾಗಿ ಕಾಯುತ್ತಿದ್ದ ತನ್ನ ಬ್ಯಾಂಕಿನ

ವ್ಯಾನಿನಲ್ಲಿ ಕೂತಿದ್ದಳು.ಆಕೆ ಕೂತಿದ್ದರೂ ವ್ಯಾನು ಹೊರಟಿರಲಿಲ್ಲ.ಆಕೆ

ಸತೀಶನತ್ತಲೇ ತಾಳ್ಮೆಯಿಂದ ನೋಡುತ್ತಿದ್ದವಳು ಆತ ಹತ್ತಿರ ಬಂದೊಡನೆ ದೃಢವಾಗಿ

ಮೂಗುಳ್ನಕ್ಕಳು. ಅದಕ್ಕಾಗಿಯೇ ಕಾದಿದ್ದಂತೆ ಆತನೂ ಪ್ರತಿನಕ್ಕು "ಹಲೋ"ಅಂದ.

"ಮುಂಜಾನೆ ಮಳೆಯಾಗಿದ್ದರಿಂದ ಹವೆ ತಂಪಾಗಿವೆ ಅಲ್ಲವೇ?"ಅಂದಳು

ಆಕೆ.

"ಹೌದು"ಅಂದ ಆತ ತುಸು ನಿಂತು ಕೇಳಿದ,"ನಾಳೆ ರವಿವಾರ ನಿಮಗೂ ರಜೆ.

ನಂದೀದಂಡೆಗೆ ತಿರುಗಾಡಲು ಬರುತ್ತೀರಾ?"

"ತಿರುಗಾಡಲು?ಊಹ್ಞೂ. ಆಗುವುದಿಲ್ಲ."

ತಾನು ಒಮ್ಮೆಲೇ ಹಾಗೆ ಕೇಳಿದ್ದು ತಪ್ಪಾಯಿತು ಅನಿಸಿತು ಸತೀಶನಿಗೆ. ಆಕೆ

ಸಿಟ್ಟಾದರೆ?ಛೆ, ಕೆಲಸ ಕೆಟ್ಟಿತೇನೋ.ಇದನ್ನು ಹೇಗೆ ಸುಧಾರಿಸುವುದು?-ಹೀಗೆಲ್ಲ

ಆತ ಚಡಪಡಿಸುತ್ತಿದ್ದಾಗ ಆಕೆಯೇ ಮತ್ತೆ ಮಾತನಾಡಿದಳು."ಮುಂದಿನ ಶನಿವಾರ

ಸಾಧ್ಯವಾದರೆ ಅರ್ಧದಿನದ ರಜೆ ಹಾಕಿ ನನ್ನೊಂದಿಗೇ ಬರ್‍ರಿ.ನಮ್ಮ ಬ್ಯಾಂಕಿಗೆ ಹೋಗಿ

ಅಲ್ಲಿಂದ ಮುಂದೆ ನಮ್ಮ ಮನೆಗೆ ಹೋಗೋಣ.ಆದೀತೆ?"

"ಓಹೋ"ಎಂದ ಸತೀಶ ಸಂತೋಷದಿಂದ.

"ನಮ್ಮ ಮನೆ ನದೀದಂಡೆಯ ಮೇಲಿದೆ"-ಎಂದು ಮುಗುಳ್ನಗುತ್ತ ಹೇಳಿ

ಆಕೆ ಡ್ರೈವ್ಹರನಿಗೆ ಸೂಚನೆ ಕೊಟ್ಟೊಡನೆ ಆಕೆ ಕೂತಿದ್ದ ವ್ಯಾನು ಮುಂದೆ ಚಲಿಸಿತು.

ಐದು ನಿಮಿಷಗಳ ನಂತರ ಶಿಳ್ಳೆ ಹಾಕುತ್ತಾ ಒಳಬಂದ ಸತೀಶನನ್ನು ಆತನ

ಸಹೋದ್ಯೋಗಿಗಳು ಹುಬ್ಬೇರಿಸಿ ನೋಡಿದರು.

ಸತೀಶ ಬಹಳ ಉತ್ಕಂಠೇಯಿಂದ ಕಾಯುತ್ತಿದ್ದ ಆ ಶನಿವಾರ ಕೊನೆಗೂ ಬಂದಿತು.

ಆ ದಿನ ಅರ್ಧ ದಿನದ ರಜೆ ಹಾಕಿ ಆಕೆ ಬರುವ ಮೊದಲೇ ಸತೀಶ ಹೊರಡಲು

ತಯಾರಾಗಿ ನಿಂತಿದ್ದ.ಸರಿಯಾದ ಸಮಯಕ್ಕೆ ಆಕೆಯ ಬ್ಯಾಂಕಿನ ವ್ಯಾನು ಬಂದಿತು.

ಆದರೆ ಫೈಲುಗಳ ಜೊತೆ ಕೆಳಗಿಳಿದದ್ದು ಆಕೆಯಾಗಿರದೆ ಬೇರೆ ಯಾರೋ ಒಬ್ಬ

ಗಂಡಸಾಗಿದ್ದ.ಒಂದು ಕ್ಷಣ ದಿಗ್ಭ್ರಮೆಗೊಂಡ ಸತೀಶನನ್ನು ವ್ಯಾನಿನಿಂದ ಬಂದ ಕಿಲಕಿಲ

ನಗು ಎಚ್ಚರಿಸಿತು. ಆತ ವ್ಯಾನಿನೊಳಗೆ ಬಗ್ಗಿ ನೋಡಿದ.ಶೋಭಾ ನಾಯಕ ಕೂತಿದ್ದಳು.

ಆತ ಏನಾದರೂ ಕೇಳುವ ಮೊದಲೇ ಉತ್ತರಿಸಿದಳು,"ಈ ದಿನ ನಾನೂ ಹಾಫ್ ಡೇ

ಲೀವ್ಹ್ ತಗೊಂಡೆ.ಬರ್ರಿ. ಒಳಗಡೆ ಹೋದ ನಮ್ಮ ಕೊಲೀಗ್ ಬಂದಕೂಡಲೇ