ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೮ ನಡೆದದ್ದೇ ದಾರಿ ಹಾಕಲಾರೆನೆಂದು ಆತ ಆಗಲೇ ಮನಸ್ಸಿನಲಿ ನಿರ್ಧರಿಸಿಯಾಗಿತ್ತು.
ಆದರೆ ಮುಂದಿನ ಶನಿವಾರ ಸತೀಶ ಕುಲಕರ್ಣಿ ಮತ್ತೆ ಶೋಭಾ ನಾಯಕನ
ತೋಟದ ಮನೆಗೆ ಹಾಜರಾದ. "ಬರುತೀರೇನು ? ತಂದೆಯವರು ನಿಮ್ಮನ್ನು
ನೆನೆಸುತ್ತಿದ್ದರು" ಅಂತ ಶೋಭಾ ಕೇಳಿದಾಗ ಆತನಿಗೆ ಇಲ್ಲ ವೆನ್ನಲಾಗಿರಲಿಲ್ಲ.
ಆಶ್ಚರ್ಯವೆಂದರೆ ಈ ಸಲ ಆ ಮನೆ,ತೋಟ, ಶೋಭಾಳ ಮೊಂಡು ಎಡಗೈ ಈ
ಯಾವುದರಿಂದಲೂ ಆತನಿಗೆ ಮುಜುಗರವೆನಿಸಲಿಲ್ಲ. ಆತ ಮಧ್ಯಾಹ್ನ ವಿಡೀ
ಆವರೊಂದಿಗೆ ತೆಂಗಿನ ಗಿಡಗಳಿಗೆ ಪಾತಿ ಮಾಡುವುದರಲ್ಲಿ, ಗುಲಾಬಿ ಗಿಡಗಲಿಗೆ
ಗೊಬ್ಬರ ಹಾಕುವುದರಲ್ಲಿ , ಮೆಣಸಿನ ಸಸಿಗಳಿಗೆ ನೀರು ಹಾಯಿಸುವುದರಲ್ಲಿ
ಸಂತೋಷದಿಂದ ಕಳೆದ. ಸಂಜೆಯಾಗುತ್ತ ಬಂದಂತೆ ಶೋಭಾ "ನೀವಿಬ್ಬರೂ ಕೈಕಾಲು
ತೊಳಕೊಂಡು ಬರ್ರಿ.ನಾನೊಂದಿಷ್ಟು ತಿನ್ನಲು ಏನಾದರೂ ಮಾಡಿ ತರುತ್ತೇನೆ"ಎಂದು
ಹೇಳಿ ಒಳಗೆ ಹೊರಟಳು . ಹಿಂದಿನಿಂದ ಆವಳನ್ನು ಗಮನಿಸುತ್ತಿದ್ದಂತೆ
ಸತೀಶನಿಗನಿಸಿತು-ಈ ಹುಡುಗಿ ಧ್ಯರ್ಯವಂತೆ.ಪ್ರಯತ್ನಶೀಲೆ.ತನ್ನದೊಂದು ಆಂಗವೇ
ಊನವಾಗಿದ್ದರೂ ಏನೂ ಆಗಿಲ್ಲದವರಂತ್ತೆ ಇರಲು , ಭೇರೆಯವರನ್ನೂ ಹಾಗೇ
ನಂಬಿಸಲು,ಹೆಣಗುತ್ತಿದ್ದಾಳೆ. ತೋಟಗಾರಿಕೆ ಅವಳ ಹವ್ಯಾಸವಲ್ಲ, ಜೀವನಾಧಾರ.
ಪ್ರತಿಯೊಂದನ್ನೂ ಆಕೆ ಶ್ರದ್ದೆಯಿಂದ ಆಚ್ಛುಕಟ್ಟಾಗಿ ಮಾಡುತ್ತಾಳೆ. ತಾನೂ
ಎಲ್ಲರಂತೆ ಜೀವಿಸಲು, ಕೆಲಸ ಮಾಡಲು, ಮದುವೆಯಾಗಲು ಅವಳು ಬಯಸುತ್ತಾಳೆ.
ನಿಜವಾಗಿ ಆ ಒಂದೇ ಕೈಯಿಂದ ಅವಳು ಏನೆಲ್ಲಾ ಮಾಡುತ್ತಾಳೆ!
"ಶೋಭಾ ಎರಡು ವರ್ಷದ ಮಗು ಆಗಿದ್ದಾಗ ನಾವು ಊತ್ತರದ ಕಡೆ
ತೀರ್ಥಯಾತ್ರೆಗೆ ಹೋಗಿದ್ದೆವು. ನಮ್ಮ ಬಸ್ಸು ಆಪಘಾತಕ್ಕೀಡಾಯಿತ್ತು.ಆದರಲ್ಲಿ ನನ್ನ
ಮಗಳು ಎಡಗೈ ಕಳಕೊಂಡಳು.ತನ್ನ ತಾಯಿಯನ್ನೂ ಕಳಕೊಂಡಳು."-ಆವಳ ತಂದೆ
ವಿಷಾದದಿಂದ ಹೇಳಿದರು.
ಸತೀಶ ತನ್ನ ಪ್ರಾಮಾಣಿಕ ಸಂತಾಪ ಸೂಚಿಸಿದ.
"ಆದರೆ ನನ್ನ ಮಗಳು ಧೈರ್ಯವಂತೆ.ಮನೆಕೆಲಸ,ಸ್ಕೂಲು-ಕಾಲೇಜಿನ ಓದು,
ಬ್ಯಾಂಕ್ ನೌಕರಿ,ತೋಟದ ಕೆಲಸ ಎಲ್ಲಾ ನಿಭಾಯಿಸುತ್ತಾಳೆ.ಅವಳ ಪಗಾರ ಕಡಿಮೆ
ಇದ್ದರೂ ತೋಟದಿಂದ ಬರುವ ಆಲ್ಪ - ಸ್ವಲ್ಪ ಉತ್ಪನ್ನದಿಂದಾಗಿ ಮನೆಯ ಸಾಲ
ತೀರಿಸುತ್ತಾ ಇದ್ದೇವೆ. ಅಂತೂ ಹೇಗೋ ಸೋಲದೆ ತಲೆಯೆತ್ತಿ ಬದುಕುವ ಪ್ರಯತ್ನ
ಮಾಡುತ್ತಾ ಇದ್ದೇವೆ"-ಆಂದರು ಆತ.
ಅವರ ಆ ಪ್ರಯತ್ನದಲ್ಲಿ ಕ್ರಮೇಣವಾಗಿ ಸತೀಶನೂ ಭಾಗಿಯಾಗತೊಡಗಿದ.
ಶನಿವಾರ ಮಧ್ಯಾಹ್ನ ಹಾಗೂ ಸಂಜೆಯೆಲ್ಲ ಆತ ಶೋಭಾಳ ತೋಟದಲ್ಲಿ ಆಕೆಯ