ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಬಿಡುಗಡೆ/ಒಲವೆ ಜೀವನ
೨೮೯

ತಂದೆಯೊಂದಿಗೆ ಕೆಲಸ ಮಾಡುವುದರಲ್ಲಿ ಕಳೆಯತೊಡಗಿದೆ. ಕಾಯಿ-ಪಲ್ಯಗಳನು,
ಅನುಗಳನ್ನು ಎಳೆನಿರುಗಳನು ಗಿಡಗಳಿಂದ ಇಳಿಸಿ, ರಾಶಿ ಮಾಡಿ ,ಬುಟ್ಟಿಗಳಲ್ಲಿ
ತುಂಬಿ ಸಂತೆಗೆ ಒಯ್ದು ತಲುಪಿಸುವ ಕೆಲಸದಲ್ಲೂ ಅವರಿಗೆ ನೆರವಾಗತೊಡಗಿದೆ.
ಅವರ ಮನೆಗೆ ಹೊಸ ಹೆಂಚು ಹೊಡಿಸುವುದು,ಸುಣ್ಣ ಬಳಿಯೂವುದು,ತೋಟಗಾರಿಕೆ
ಇಲಾಖೆಯಿಂದ ಬೀಜಗಳನ್ನು ತರುವುದು, ಲಾರಿಯಲ್ಲಿ ಗೊಬ್ಬರ ತರಿಸುವುದು.
ಶೋಭಾಳ ತಂದೆಗೆ ಕಾಯಿಲೆಯಾದಾಗ ಡಾಕ್ಟರನ್ನು ಕರೆತರುವುದು, ಬ್ಯಾಂಕಿನ
ಪರೀಕ್ಷೆಗಾಗಿ ಓದಲು ಅವಳಿಗೆ ನೆರವಾಗುವುದು-ಇತ್ಯಾದಿ ಕೆಲಸಗಳೆಲ್ಲಾ
ದಿನಗಳೆದಂತೆ ಸತೀಶನ ಸ್ವಂತ ಜವಾಬ್ದಾರಿಗಳೇ ಆದವು.
ಹಾಗಿದ್ದಾಗ ಒಂದು ಶನಿವಾರ ಕೆಲಸಗಳನ್ನೆಲ್ಲ ಮುಗಿಸಿ ವರಾಂ ಡದಲ್ಲಿ ಕುರ್ಚಿ
ಹಾಕಿಕೊಂಡು ಕೂತು ಮಾತಾಡುತ್ತಿದ್ದಾಗ ಏನೊಂದು ಪೀಠಿಕೆಯೂ ಇಲ್ಲದೆ
ಶೋಭಾಳ ತಂದೆ ಸತೀಶನನ್ನು ಕೇಳಿದರು,"ಶೋಭಾಳನ್ನು ನೀವು
ಮದುವೆಯಾಗಲೆಂದು ನನ್ನ ಇಚೆ-ಆದಷ್ಟು ಬೇಗ ಈ ಕೆಲಸವಾಗಬೇಕು.ನನಗೂ
ವಯಸಾಯಿತು.ಏನಂತೀರಿ ಸತೀಶ?"
ಎರಡು ನಿಮಿಷ ಸತೀಶ ಸುಮ್ಮನಿದ್ದಾಗ ಅವರೇ ಮತ್ತೆ ಅಂದರು:"ಹೀಗೆ
ಒಮ್ಮೆಲೆ ಕೇಳಬಾರದಿತ್ತೇನೋ.ಹೋಗಲಿ.ಯೋಚನೆ ಮಾಡಿ ಹೇಳಿರಿ."
ಸತೀಶ ತಟ್ಟನೆ ಅಲ್ಲಿಂದೆದ್ದು ಹೊರಗೆ ಹೊರಟ. ಬಾಗಿಲಿನಾಚೆ ನಿಂತಿದ್ದ ಶೋಭಾ
ಅವನನ್ನು ಹಿಂಬಾಳಿಸಿದಳು.ಗೇಟಿನ ಕಡೆ ನೇರವಾಗಿ ಹೋಗುತ್ತಿದ್ದ ಆತನ ಸಮಕ್ಕೇ
ಹೆಚ್ಚಿ ಹಾಕುತ್ತ ಊಟಕ್ಕೂಠೇಯೆಂದ ಆಕೆ ಹೇಳಿದಳು,"ಪ್ಲಿಜ್,ತಪ್ಪು ತಿಳೀಬಾರದು
ಸತೀಶ,ನೀವು ಈ ಬಗ್ಗೆ ವಿಚಾರ ಮಾಡಿಯೇ ನಿರ್ದಾರ ಮಾಡಿರಿ.ನನಗ್ಗೊತ್ತು,ಈ
ವಿಷಯದಲ್ಲಿ ರುವ ಅಡಚಣೆ ಏನು ಅಂತ.ಅದೆಕ್ಕೆ ನಾನು ಇಲ್ಲಿವರೆಗೂ ಏನೂ
ಕೇಳಲಿಲ್ಲ. ನೀವು ಚೆನ್ನಾಗಿ ಯೋಚನೆ ಮಾಡಿರಿ.ನಂತರವೇ ನಿಮ್ಮ ನಿರ್ಧಾರ ತಿಳಿಸಿರಿ.
ನಾನು ಕಾಯುತ್ತಿರುತ್ತೇನೆ."
ತನ್ನ ಬಲಗಡೆ ತನ್ನ ಸಮೀಪವೇ ನಡೆದು ಬರುತ್ತಿದ್ದ ಆಕೆಯ ವೊಂಡಾದ
ಎಡಗೈ ನೋಡುತ್ತಿದ್ದಂತೆ ತಲೆಯೆಲ್ಲ ಬಿಸಿಯಾದಂತೆನಿಸಿ ತಟ್ಟನೆ ನಿಂತು ಆತ
ಉತ್ತರಿಸಿದ,"ನಾನು ವಿಚಾರ ಮಾಡುತ್ತೇನೆ ಶೋಭಾ,ಮುದ್ದಿನ ವಾರ ಬಂದಾಗ
ಹೇಳುತ್ತೆನೆ.ನೀವು ಇಲ್ಲೇ ನಿಂತಿರ್ರಿ. ನನ್ನನ್ನು ಕಳಿಸಲು ಬರುವುದು ಬೇಡ. ನಾನೀಗ
ಹೋಗುತ್ತೆನೆ.ಇಲ್ಲವಾದರೆ ಕೊನೆಯ ಬಸ್ಸು ಸಿಗಲಾರದು"-ಅಷ್ಟಾಂದು ಹಿಂತಿರುಗಿ
ನೋಡದೆ ಆತ ವೇಗವಾಗಿ ಹೊರತುಬಂದ.