ಮರುವಾರದ ಮೊದಲ ದಿನಗಳಲ್ಲಿ ಒಂದು ಬೆಳಿಗ್ಗೆ ಅತ್ಯಂತ ಆಕಸ್ಮಿಕವಾಗಿ
ಸತೀಶನ ಟೇಬಲ್ಲಿನೆದುರು ಕುಸುಮಾ ಪಾಟೀಲ ಪ್ರತ್ಯಕ್ಷಳಾದಳು.ತುಂಬು ಆತ್ಮ
ವಿಶ್ವಾಸದಿಂದ ನಗುತ್ತ "ಹಲೋ ಸತೀಶ,ಹೇಗಿದ್ದೀರಿ?ಬರ್ರಿ,ಚಹಾ ಕುಡಿದು
ಬರೋಣ" ಎಂದು ಆಹ್ವಾನಿಸಿದಳು.ಅವಳಲ್ಲಾಗಿದ್ದ ಬದಲಾವಣೆ ನಿಜವಾಗಿ
ಆಶ್ಚರ್ಯಕಾರಕವಾಗಿದ್ದು ಆತ ಅವಳತ್ತ ಬಹಳ ಹೊತ್ತು ನೋಡುತ್ತಲೇ ಇದ್ದಆಕೆ
ಮೈತುಂಬಿಕೊಂಡಿದ್ದಳು.ಕೂದಲನ್ನು ಕತ್ತರಿಸಿ ಬಾಬ್ ಮಾಡಿದ್ದಳು. ಸುಂದರವಾದ
ಶೈಲಿಯಲ್ಲಿ ಸೀರೆ ಉಟ್ಟು ಸ್ಲೇವ್ಲೆಸ್ ಬ್ಲೌಜ್ ಹಾಕಿದ್ದಳು.ದುಂಡಗಿನ ಅವಳ
ಎರಡೂ ತೋಳುಗಳು,ತುಂಬಿಕೊಂಡು ಎರಡೂ ಮುಂಗೈಗಳು,ನೇಲ್ ಪಾಲಿಶ್ ಹಾಕಿದ್ದ
ಶೇಪ್ ಮಾಡಿದ್ದ ಉಗುರುಗಳುಳ್ಳ ಹತ್ತು ಬೆರಳುಗಳು ನಿಜವಾಗಿ ಅದ್ಭುತವೆನಿಸಿದವು.
ಚಹಾ ಕುಡಿಯುತ್ತ ಆಕೆ ತನ್ನ ಬಗ್ಗೆ ಹೇಳಿಕೊಂಡಳು.ಬೇರೆ ಊರಿಗೆ ವರ್ಗವಾಗಿ
ಹೋಗಿದ್ದ ಆಕೆ ಕೆಲಸದೊಂದಿಗೆ ಓದನ್ನೂ ಮುಂದುವರಿಸಿ ಡಿಗ್ರಿ ಪಡೆದಿದ್ದಳು.
ಇಲಾಖೆಯ ಪರೀಕ್ಷೆಳನ್ನೂ ಪಾಸು ಮಾಡಿ ಮ್ಯಾನೇಜರ್ ಆಗಿದ್ದಳು.ಅವಳ
ಧ್ವನಿಯಲ್ಲಿ,ನಡೆನುಡಿಯಲ್ಲಿ ಠೀವಿ-ಗತ್ತು-ಆತ್ಮವಿಶ್ವಾಸ ಎದ್ದು ಕಾಣುತ್ತಿದ್ದವು.
ಎಲ್ಲ ಹೇಳಿದ ನಂತರ ಕೊನೆಗೆ ದನಿಯಿಳಿಸಿ ಕುಸುಮಾ ಅಂದಳು,"ಇಷ್ಟು ದಿನ ಕಳೆದು
ನಿಮ್ಮನ್ನು ನೋಡಲೆಂದೇ ನಾನಿಲ್ಲಿಗೆ ಬಂದೆ ಸತೀಶ,ನಿಮ್ಮ ಬಗೆಗಿನ ನನ್ನ ಭಾವನೆಗಳು
ಇಂದಿಗೂ ಹಾಗೇಯೇ ಇವೆ."
ಚಹದ ಕಪ್ಪನ್ನು ಕೆಳಗಿರಿಸಿ ಎದ್ದು ನಿಲ್ಲುತ್ತ ಆತ ಹೇಳಿದ,"ಚಹಕ್ಕಾಗಿಥ್ಯಾಂಕ್ಸ್
ಕುಸುಮಾ.ಈಗ ಕೆಲಸದ ಹೊತ್ತು.ಮತ್ತೆ ಭೆಟ್ಟಿಯಾಗಿ ಮಾತನಾಡೋಣ.ಬಾಯ್"
ಕುಸುಮಾಳಿಂದ ಬೀಳ್ಕೊಂಡು ಬಂದ ನಂತರ ಸತೀಶ ಆಕೆಯನ್ನು ಮತ್ತೆ
ಭೆಟ್ಟಿಯಾಗಲಿಲ್ಲ.ಆದರೆ ಈ ಭೆಟ್ಟಿ ಆತನ ಮೇಲೆ ಆಳವಾದ
ಪರಿಣಾಮವನ್ನುಂಟುಮಾಡಿತು.ಎರಡೂ ಕೈಗಳನ್ನು ಹೊಂದಿರುವುದು ಎಷ್ಟೊಂದು
ಸುಂದರವಾದ,ಅದ್ಭುತವಾದ ವಿಷಯ ಅನ್ನುವುದನ್ನು ಆಕೆ ತೋರಿಸಿಕೊಟ್ಟಿದ್ದಳು.
ಅಂದಿನಿಂದ ಆತ ಎದುರಿಗೆ ಬಂದ ಎಲ್ಲಾ ಹೆಂಗಸರ ಕೈಗಳನ್ನು ಗಮನಿಸತೊಡಗಿದ
.
ದಪ್ಪಗಿನ ಕೈಗಳು,ತೆಳ್ಳಗಿನ ಕೈಗಳು,ದುಂಡಾಗಿ ಸುಂದರವಾಗಿದ್ದ ಕೈಗಳು,
ಚಪ್ಪಟೆಯಾಗಿ ರೋಮ ತುಂಬಿದ ಕೈಗಳು,ಸಶಕ್ತ ಕೈಗಳು,ಬಲಹೀನ ಕೈಗಳು,ಎಲ್ಲ
ಬಗೆಯ ಜೋಡು ಕೈಗಳಲ್ಲಿ ಅದೆಂತಹ ಸೌಂದರ್ಯ ಅಡಗಿತ್ತು! ಈ ಹಿನ್ನೆಲೆಯಲ್ಲಿ
ಶೋಭಾಳ ಯೋಚನೆ ಬಂದಾಗ ಆತನಿಗೆ ಗಂಟಲಲ್ಲಿ ಏನೋ ಸಿಕ್ಕಿಕೊಂಡ ಹಾಗೆ
ಅನಿಸತೊಡಗಿತು.ಇಲ್ಲ,ಸಾಧ್ಯವಿಲ್ಲ,ಎಂದಿಗೂ ಸಾಧ್ಯವಿಲ್ಲ-ಅನಿಸತೊಡಗಿತು.
ಶನಿವಾರ ಬರಲಿ,ಒಮ್ಮೆ ಹೋಗಿ ಸ್ಟಷ್ಟವಾಗಿ ಹಾಗೆಂದು ಹೇಳಿಬಿಟ್ಟು ಈ ನೋವಿನ
ಪುಟ:ನಡೆದದ್ದೇ ದಾರಿ.pdf/೨೯೭
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯೦
ನಡೆದದ್ದೇ ದಾರಿ