ಪುಟ:ನಡೆದದ್ದೇ ದಾರಿ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಳ್ಳುಗಳು/ಅತಿಥಿ

೨೩

ಪತ್ರಗಳಲ್ಲಿ ಏನಿರುತ್ತದೆ ? ದಪ್ಪ-ದಪ್ಪಗಿನ ಕವ್ಹರುಗಳನ್ನು ಬಿಗಿಯಾಗಿ
ಎದೆಗೊತ್ತಿಕೊಂಡು ಓಡಿ ರೂಮಿಗೆ ಹೋಗಿ ಕಾಟಿನ ಮೇಲೆ ಡಬ್ಬ ಬಿದ್ದು ತಾಸುಗಟ್ಟಲೆ
ಓದುತ್ತಾರಲ್ಲ , ಏನಂಥ ಬ್ರಹ್ಮಾಂಡ ಬರೆದಿರುತ್ತದೆ ಆ ಪತ್ರಗಳಲ್ಲಿ ? ಎಲ್ಲಾ ಬರೇ
ನಾನ್ ಸೆನ್ಸ್. ಇಂದು ಸಂಜೆ ಗೇಟಿನಲ್ಲೆ ನಿಂತು ಪತ್ರ ಓದುತ್ತಾ ಸುತ್ತಲಿನ ಯಾರ
ಪರಿವೆಯೂ ಇಲ್ಲದೆ ಒಬ್ಬಳೇ ನಗುತ್ತಿದ್ದಳು ಸರೋಜಿನಿ. ಅವಳಂತೂ ವಿಪರೀತ
ಸೆಂಟಿಮೆಂಟಲ್. ಒಂದೇ ಊರಲ್ಲಿ ಇದ್ದರೂ ಅವಳ ಆ ಗೆಳೆಯ ದಿನಾ ಪತ್ರ
ಬರೆಯುತ್ತಾನೆ. ಅವಳಿಗೆ. ಒಮ್ಮೆ(ಒಮ್ಮೆ ಏಕೆ, ಎರಡು-ಮೂರು ಸಲವಿರಬೇಕು ),
ಅವಳಿಲ್ಲದಾಗ ಅವಳ ಹೆಸರಿಗೆ ಬಂದ ಪತ್ರವನ್ನು-ಯಾರೂ ನೋಡುತ್ತಿರಲಿಲ್ಲವೆಂದು
ಖಾತ್ರಿ ಮಾಡಿಕೊಂಡು-ತಾನು ರೂಮಿಗೆ ತಂದು ಓದಿರಲಿಲ್ಲವೆ? ಥೇಟ್ ಹಿಂದೀ
ಸಿನೇಮಾ ನೋಡಿದಂತಾಗಿತ್ತು ಆ ಪತ್ರ ಓದಿದಾಗ. ದಿನಾ ಸಂಜೆ ಭೆಟ್ಟಿಯಾದಾಗ
ಎದುರಾ ಎದುರು ಮಾತಾಡಿದರೂ ಮತ್ತೆ ಮುಂಜಾನೆ ಎದ್ದು ಪತ್ರ ಬರೆಯುತ್ತಾನೆ
ಆ ಮೂರ್ಖ, ಗಂಡುಹುಡುಗರ ಹಾಸ್ಟೆಲಿನಿಂದ,ಅದೂ ಬರೇ ರಾತ್ರಿ ತಾನು ಕಂಡ
ಹುಚ್ಚುಚ್ಚಾರ ಕನಸುಗಳ ಬಗ್ಗೆ. ಎದೆಯಲ್ಲೇನೋ ವಿಚಿತ್ರ ನೋವು ಉಂಟಾದ
ಅನುಭವ ತನಗೆ. ಅಂದು ರಾತ್ರಿ ಬಹಳ ಹೊತ್ತು ನಿದ್ರೆಯೇ ಬರಲಿಲ್ಲ.ತನಗೇಕೋ
ಅಂದಿನಿಂದ ಸರೋಜಿನಿಯನ್ನು ಕಂಡರೆ ಸಿಟ್ಟು ಬೆಂಕಿ.
"May I come in Madam?"
-ಬಾಗಿಲಿನಿಂದ ಮೆತ್ತಗಿನ ಧ್ವನಿ. ಅವಳೇ ಇರಬೇಕು.ಇಷ್ಟು ಹೊತ್ತು ಅವನ
ಜೊತೆ ತಿರುಗಿ ಈಗ ಬಂದಿದ್ದಾಳೆ.
ಕೈಯಲ್ಲಿಯ ಪತ್ರವನ್ನು ಬಿಗಿಯಾಗಿ ಹಿಚುಕಿದಳುಪ್ರೊ.ಲೀಲಾನವತಿ,"ಯೆಸ್."
ಅಳುಕುತ್ತ ಒಳಗೆ ಬಂದಳು ಸರೋಜಿನಿ.ಒಂದುಕ್ಷಣ ಬೈಯುವುದನ್ನು ಮರೆತು
ಅವಳನ್ನೇ ನೋಡಬೇಕೆನಿಸಿತು:ಕೆಂಪು ಜಾರ್ಜೆಟ್ ಸೀರೆಯಲ್ಲಿ ಅವಳಿಂದು
ನಿಜವಾಗಿಯೂ ಚೆಂದ ಕಾಣಿಸುತ್ತಿದ್ದಾಳೆ.ತಲೆಯಲ್ಲೊಂದು ಕೆಂಪುಗುಲಾಬಿ,ಅವನು
ಕೊಟ್ಟಿದ್ದು (ಮುಡಿಸಿದ್ದು ?) ಇರಬಹುದೇ?
ಒಮ್ಮೆಲೆ ಬಿರುಸಾಯಿತು ವಾರ್ಡನ್ ಧ್ವನಿ,"ಎಲ್ಲಗೆ ಹೋಗಿದ್ದೆ?"ನೆಲ
ಕೆರೆಯುತ್ತ ತಲೆತಗ್ಗಿಸಿ ನಿಂತಿದ್ದಳು ಸರೋಜಿನಿ.ಎಂಥದೋ ಸವಿ ಅನುಭವದ ನೆನಪು-
ನೆರಳು ಇನ್ನೂ ಅವಳ ಕಣ್ಣು-ಕೆನ್ನೆ-ತುಟಿ,ಅಷ್ಟೇ ಏಕೆ,ಇಡೀ ದೇಹದ ತುಂಬ ತುಂಬಿ
ಸೂಸುತ್ತಿದೆ.ಮಾತಾಡುವುದು ಅಸಾಧ್ಯ,ಅನಗತ್ಯ ಎಂಬ ಭಾವವಿದೆ ಅವಳಲ್ಲಿ.
"ಸರೋಜಿನಿ,ಕಡೀಸರೆ ನಿನಗ ವಾರ್ನಿಂಗು ಕೊಡ್ತೀನಿ.ಹಾಸ್ಟೆಲಿಗೆ ರಾತ್ರಿ ತಡಾ
ಮಾಡಿ ಬಂದ್ರ ಇನ್ನ ನಡಿಯೂ ಹಾಂಗಿಲ್ಲ.ನೀಯೇನ ಅಭ್ಯಾಸಗಿಭ್ಯಾಸ ಎಲ್ಲಾ ಬಿಟ್ಟs