ತತ್ವಗಳಿಗೆ ಬದ್ದಳಾಗಿ ದುಡೀತಾ ಇದ್ದದ್ದು ಮ್ಯಾಲಿನವ್ರಿಗೆಲ್ಲಾ ಗೊತ್ತದ. ನೀವು
ಹೊಸದಾಗಿ ಬಂದೀರಿ.ನಿಮಗ ಇಲ್ಲಿಯ ಪರಿಸ್ಥಿತಿಯ ಖರೇ ಪರಿಚಯ ಮಾಡಿ
ಕೊಡೂದು ನನ್ನ ಕರ್ತವ್ಯ.ಅದಕ್ಕಽ ನಿಮಗೆ ಆ ಬಗ್ಗೆ ನಾಲ್ಕು ಮಾತು ಹೇಳೋಣಂತ
ಬಂದೆ.ಅಧಿಕಾರಿಗೆ ಮೊದಲೇ ಎಲ್ಲಾ ಕ್ಲಿಯರ್ ಪಿಕ್ಚರ್ ಕೊಡೋದು ಅಸಿಸ್ಟೆಂಟ್ನ
ಧರ್ಮ. ಈ ತತ್ವವನ್ನ ಪಾಲಿಸ್ಲಿಕ್ಕೇಂತ ನಾ ಬಂದೀನಿ ಹೊರತಾಗಿ ಬ್ಯಾರೆ ಉದ್ದೇಶ
ನನಗಿಲ್ಲ."
ಆಕೆಯ ಆಸ್ಖಲಿತ ಮಾತುಗಳ ಪರಿಣಾಮ ಆಗಲೇ ಹೊಸ ಅಧಿಕಾರಿಯ ಮೇಲೆ
ಆಗತೊಡಗಿತ್ತು.'ತತ್ವಗಳಿಗೆ ಬದ್ದ'ರಾಗಿಯೇ ಕೆಲಸ ಮಾಡುವ ಉದ್ದೇಶದಿಂದ ಅಲ್ಲಿಗೆ
ಬಂದಿದ್ದ ಆತನಿಗೆ 'ತತ್ವ'ಗಳ ಬಗ್ಗೆ ಮಾತಾಡುವ ಈ ಮಹಿಳೆಯ ಬಗ್ಗೆ ಗೌರವ
ಮೂಡತೊಡಗಿತ್ತು.ಸ್ವಭಾವತಃ ತುಸು ರಸಿಕರೂ ಆಗಿದ್ದ ಆತನಿಗೆ
ಸುಂದರಿಯಲ್ಲದಿದ್ದರೂ ವೈಯಾರಿಯಾಗಿ ಕಾಣುತ್ತಿದ್ದ ಈಕೆಯನ್ನು ತುಸು ಹೊತ್ತು
ಕೂಡ್ರಿಸಿಕೊಂಡು ಈಕೆ ಹೇಳುವುದನ್ನು ಕೇಳುವುದರಲ್ಲಿ ತಪ್ಪೇನಿಲ್ಲ ಅನ್ನಿಸಿತು. ಆತ
ಮಾತಾಡದಿದ್ದರೂ ಜಾಣೆಯಾಗಿದ್ದ ತಾರಾ ಅತನ ಅನಿಸಿಕೆಯನ್ನು
ಅರ್ಥಮಾಡಿಕೂಂಡು ಇನ್ನಷ್ಟು ಮಾತಾಡಿದಳು:"ಸರ್.ಇತ್ತಿತ್ಲಾಗ ೩-೪ ವರ್ಷ
ಅಫೀಸಿನ ಮ್ಯಾನೇಜಮೆಂಟು ಪೂರಾ ಕೆಟ್ಟು ಹೋಗೇದ,ನಿಮ್ಮ ಹಿಂದಿನ ನಿರ್ದೇಶಕರಿಗೆ
ಸಿನ್ಸಿಯರ್ ವರ್ಕರ್ಸನ್ನು ಎನ್ಕರೇಜ್ ಮಾಡೋ ಬುಧ್ದೀನೇ ಇರಲಿಲ್ಲ. ಹಿಂಗಾಗಿ
ನನ್ನಂಥವರು ಭಾಳ ಕಷ್ಟ ಅನುಭವಿಸಿದಿವಿ. ನಾನಂತೂ ಯಾವಾಗಲೂ ತತ್ವನಿಷ್ಠಳಾಗಿ
ಕೆಲಸ ಮಾಡುವಾಕಿ.ಪ್ರತಿಯೊಂದೂ ರೂಲ್ಸ್ ಪ್ರಕಾರೇ ಆಗಬೇಕು ಅನ್ನುವಾಕಿ
ಡಿಪಾರ್ಟ್ಮೆಂಟಿನ ಕಲ್ಯಾಣವೇ ನನ್ನ ಕಲ್ಯಾಣ ಅಂದುಕೊಂಡಾಕಿ.ಅಫೀಸೇ ನನ್ನ ಮನೆ
ಅಂತ ತಿಳದು ಕೆಲಸಾ ಮಾಡುವಾಕಿ ಹಿಂಗಾಗಿ ಉಳಿದ ಅಸಿಸ್ಟೆಂಟ್ ಡೈರೆಕ್ಟರ್ಸು,
ಕ್ಲಾರ್ಕುಗಳು-ಎಲ್ಲಾರಿಗೂ ನಾ ಬ್ಯಾಡಾದೆ ನನ್ನ ಯವ ಯೋಜನೆಗೂ ಪ್ರೋತ್ಸಾಹ
ಸಿಗ್ಲಿಲ್ಲ.ಯಾಕಂದರೆ ಉಳಿದವ್ರೆಲ್ಲಾ ಹೆಚ್ಚಾಗಿ ಸೋಮಾರಿಗಳು, ದಡ್ಡರು,
ಭ್ರಷ್ಟಾಚಾರಿಗಳು, ಸ್ವಾರ್ಥಿಗಳು. ಇದು ನಿಮಗೂ ಲಗೂನೇ ಗೊತ್ತಾಗ್ತದ,
ಯಾಕಂದರ ನೀವು ಭಾಳ ಕೀನ್ ಅಬ್ಜರ್ವರ್ ಇದ್ದೀರಿ.ನಾ ಒಬ್ಬಾಕೀನೇ ತತ್ವ-ತತ್ವ
ಅಂತ ಬಡಿದಾಡಿ ಸುಸ್ತಾದೆ,ಸೋತೆ,ನಿರಾಶ ಅದೆ,"ಬಹಳ ನಾಟಕೀಯವಾಗಿ ಆದರೆ
ಪರಿಣಾಮಕಾರಿಯಾಗಿ ಧ್ವನಿಯಲ್ಲಿ ನೋವು ಹಾಗೂ ಪ್ರಾಮಾಣಿಕ ಅಸಹಾಯಕತೆ
ವ್ಯಕ್ತಪಡಿಸುತ್ತ ಅಕೆ ಅಂದಳು."ಅಂಥಾ ಹೊತ್ತಿನ್ಯಾಗ ನೀವು ಬಂದೀರಿ. ನನಗ ಹೊಸಾ
ಬೆಳಕು ಕಾಣಿಸಿಧಾಂಗ ಅನಿಸ್ಲಿಕ್ಹತ್ತೇದ.ಈ ಡಿಪಾರ್ಟ್ಮೆಂಟಿನ ಉನ್ನತಿಯ ಸಲುವಾಗಿ
ನಾನು ಹಾಕಿಕೊಂಡಿರೋ ಪ್ಲ್ಯಾನುಗಳೆಲ್ಲಾ ಇನ್ನಾದರೂ ನಿಮ್ಮ ಸಹಾಯದಿಂದ