ಪುಟ:ನಡೆದದ್ದೇ ದಾರಿ.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನ್ನೊಂದು ಕಂಪ್ಲೇಂತ್ ಬರೀತೀನಿ." ನರ್ಮದಾಳ ಧ್ವನಿಯಲ್ಲಿ ದೈನ್ಯ ಇಣುಕಿತು,"ಹಾಂಗ ಮಾಡಬ್ಯಾಡ್ರಿ ಮ್ಯಾಡಮ್ .ಅದರೆ ಬದ್ಲಿ ಆ ಪೇಪರ್ಸು ಕೊಟ್ಟುಬಿಡ್ರಿ ಈಗ ಸಧ್ಯಾ, ಒಂದೇ ದಿನದಾಗ ರಿಪೋಪೋರ್ಟ್ ಬರೀತೀನಿ." "ಈಗ ಸಧ್ಯಾ? ಆದ್ಯಾಂಗ ಸಾಧ್ಯದ? ಅವು ನಾ ಎಲ್ಲಿಟ್ಟೇನೋ ಗೊತ್ತಿಲ್ಲ. ಹುಡುಕಬೇಕು."ತಾರಾ ನಿರ್ಲಕ್ಶ್ಯದಿಂದ ಅಂದಳು . ನರ್ಮದಾಗೆ ಆತಂಕ,ಗಾಬರಿ, "ಮ್ಯಾಡಮ್,ಒಂದೇ ವಾರ ಟೈಮ್ ಕೊಟ್ಟಾರ ಬಾಸ್. ನೀವು ಪೇಪರ್ಸ್ ಯಾವಾಗ ಕೊಡ್ತೀರಿ?" "ಈ ವಾರ ನಾ ಭಾಳ ಬಿಝಿ ಇದ್ದೀನಿ.ಮುಂದಿನ ವಾರ ನೋಡೋಣಂತ, ಈಗ ಹೋಗು, ನಿನ್ನ ಕೆಲಸಾ ಮಾಡು."ತಾರಾಳ ದನಿಯಲ್ಲೂ ಬಾಸ್ನ್ ದನಿಯ ಗಡಸು.ನರ್ಮದಾ ನಿಂತಲ್ಲೇ ಕುಸಿಯುವುದೊಂದು ಬಾಕಿ. ಮಹಿಳಾ ಕಲ್ಯಣ ವಿಭಾಗದಲ್ಲಿ ಹೊಸದಗಿ ಎಮ್.ಎ. ಮಾಡಿಕೊಂಡು ಸೇರಿದ್ದ ಶಶಿಕಲಾ ಪಾಟೀಲಳನ್ನು ಹಿಂದನ ದಿನ ಎಲ್ಲರೂ ಆಭಿನಂದಿಸಿದ್ದರು. ಯಾಕೆಂದರೆ ಕೇಂದ್ರ ಸಮಾಜ ಕಲ್ಯಣ ಇಲಾಖೆಯ ಸಂಶೋಧನಾ ವಿಭಗದಿಂದ ಆಕೆಗೆ ಒಂದು ಬಹುಮೂಲ್ಯ ಫ಼ೇಲೋಶಿಪ್ ಸಿಕ್ಕಿತ್ತು. ಅನಾಥ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಆಕೆ ಕೈಗೊಂಡಿದ್ದ ಒಂದು ಸರ್ವ್ಹೇ ಕೆಲಸವನ್ನು ಪುರಸ್ಕರಿಸಿ,ಅದನ್ನೇ ಇನೂವಿವರವಾಗಿ ಕೈಗೊಳ್ಳಬೇಕೆಂಬ ನಿರ್ದೇಶದೋದಿಂಗೆ ತಿಂಗಳಿಗೆ ಆಕೆಯಾಗಿದ್ದಳು. ಇದು ಇಡೀ ಗೌರವಕ್ಕೆ ಪಾತ್ರಳಾದ ಈ ವಿಭಾಗದ ಮೊದಲ ಮಹಿಳೆ ಆಕೆಯಾಗಿದ್ದಳು. ಇದು ಇಡೀ ವಿಭಾಗಕ್ಕೆ ದೊರೆತ ಗೌರವವೆಂದು ಶಶಿಕಲಾಗೆ ಸಹಜಬಾಗಿ ಸಂತೋಷವಾಗಿತ್ತು. ಆದರೆ ಕೊಡಲೇ ನಿರ್ದೆಶಕರ ಚೇಂಬರಿನಿಂದ ಆಕೆಗೆ ಕರೆ ಬಂದಾಗ ಆ ಸಂತೋಷ ಅರ್ಧದಷ್ಠು ಝರ್ರನೇ ಇಳಿದೇ ಹೋಹಿತು. "ಮಿಸ್ ಪಾತೀಲ ಅವರೆ ಈ ಫ಼ೆಲೋಶಿಪ್ಪು ನೀವು ತಗೋಬೆಕಂದ್ರ ಕೆಲವು ಪ್ರೊಸೀಜರ್ಸು ಫ಼ಾಲೋ ಮಾಡಬೇಕಾಗ್ತದ. ನೀವು ತಗೋಬೇಕಂದ್ರೆ ಮಾಡಿಲ್ಲ. ನೀವು ಇದಕ್ಕೆ ಅಪ್ಲಯ್ ಮಾಡೋವಾಗ ನಿಮ್ಮ ಸೆಕೈನ್ ಹ್ ಡ್ ಡಾ.ತಾರಾ ಅವ್ರ ಪರ್ಮಿಶನ್ ತಗೋಬೇಕಾಗಿತ್ತು.ಅವರ ಥ್ರೊ ಅಪ್ಲಿಕೇಶನ್ ಕಳಸಬೇಕಾಗಿತ್ತು. ಅದು ಬಿಟ್ಟು ಡೈರೆಕ್ಟಾಗಿ ಸೆಂಟ್ರಲ್ ಆಫ಼ೀಸಿಗೇ ಕಳಸೀರಿ. ಇದೆಲ್ಲಾ ರುಲ್ಸಿಗೆ ವಿರುದ್ಧ ಅಂತ ಡಾ.ತಾರಾ ಹೇಳ್ತಾರ.ಮತ್ತ ಅವರು ಅನ್ನೋದು ಖರೇ ಅದ."