ಶಶಿಕಲಾ ಸಣ್ಣ ಧ್ವನಿಯಲ್ಲಿ ಹೇಳಿದಳು,"ಸರ್,ನಾನು ತಾರಾ ಮ್ಯಾಡಮ್ಗೆ ಆಪ್ಲಿಕೇಶನ್ ಕೊಟ್ಟಿದ್ದೇ,ಅವರು ಅದನ್ನ ಫಾರ್ವರ್ಡ್ ಮಾಡಲೇ ಇಲ್ಲ.ಅದಕ್ಕ ನಾನೂ ಒಂದು ಅಡ್ವ್ ನ್ಸ್ ಕಾಪಿ ಕಳಿಸಿದ್ದೆ...."-ಇದರಲ್ಲಿ ತನ್ನ ತಪ್ಪೇನೆಂದು ತಿಳಿಯದೆ ಅಕೆ ಒದ್ದಾಡುತ್ತಿದ್ದಂತಿತ್ತು. "ನೀವು ಅಪ್ಲಿಕೇಶನ್ ತಮಗ ಕೂಟ್ಟೇ ಇಲ್ಲಂತ ತಾರಾ ಮ್ಯಾಡಮ್ ಸುಳ್ಳು ಹೇಳ್ತಾರೇನು?" 'ಹಾಂಗಲ್ಲ ಸರ್-" "ಮತ್ತ ಹ್ಯಾಂಗ ? ತಪ್ಪು ಮಾಡ್ತೀರಿ,ಮತ್ತ ಆ ತಪ್ಪು ಬ್ಯಾರೆಯವ್ರ ಮ್ಯಾಲ ಹಾಕ್ತೀರಿ.ನಿಮ್ಮ ಸೆಕ್ಶ್ನಿನ್ಯಗ ಈ ಸಲ ಕೆಲಸ ಭಾಳ ಆದ. ಫೆಲೋಶಿಪ್ ನೀವು ತಗೊಂಡರ ಆಫೀಸಿನ ಕೆಲಸದ ಕಡೆ ನಿಮ್ಮ ಅಟೆನ್ ಶ್ ನ್ ಕಡಿಮೆ ಆಗ್ತದಂತ ಡಾ.ತಾರಾ ಹೇಳಾರ.ಶೀ ಈಜ್ ಯುವರ್ ಸೆಕ್ಶನ್ ಹೆಡ್.ಅವರ ರೆಕಮೆಂಡೇಷನ್ ಇಲ್ಲದೇ ನೀವು ಇದನ್ನ ಸ್ವೀಕಾರ ಮಾಡ್ಲಕ್ಕೆ ಬರೂದಿಲ್ಲ.ನೌ ಯೂ ಮೇ ಗೋ " ಪೆಚ್ಚುಮುಖ ಹಾಕಿಕೂಂಡ ಶಶೆಕಲಾ ಮೌನವಾಗಿ ಹೊರಬಂದಳು.ಆಫೀಸಿನ ಕೆಲಸವನ್ನು ಆಕೆ ಎಂಧು ನಿರ್ಲಕ್ಷಿಸಿರಲಿಲ.ಅದರೊಂದಿಗೇ ಹೆಚ್ಚಿನ ಕೆಲಸ ಮಾಡಬಲ್ಲೆನೆಂಬ ವಿಶ್ವಾಸವು ಆಕೆಗೆ ಯಿತು ಆಧರೆ ಯಾಕೆ ಹೀಗೆ ತನ್ನ ಪ್ರಗತಿಗೆ ಅಡಗಾಲ್ಲು ಹಾಕುತ್ತಿದ್ದೀ ಅಂತ ತಾರಾ ಮೇಡಂಗೆ ಕೇಳುವುದರಲ್ಲಿ ಅರ್ಥವಿಲ್ಲವೆಂಧು ಆಕೆಗೆ ತಿಳಿದಿತು.ಆಕೆ ಸುಮ್ನೆ ತನ್ನ ಕುರ್ಚಿಯಲ್ಲಿ ಬಂಧೂಕುತಳು.ತಾರಾ ಮ್ಯಾಡಮ್ ಬಾಸ್ ನ ಚೇಂಬರಿಗೆ ಹೋಗಿ ದೂಡ್ದದನಿಯಲ್ಲಿ ಮಾತನಾಡುತ್ತಿದ್ದುದಕ್ಕೆ ಉಳಿದವರೂಂದಿಗೆ ಆಸಹಾಯಳಾಗಿ ಕಿವಿಗೂಟ್ಟಳು.ಇವ್ರೆಲ್ಲ ಹಿಂಗೇ ಸರ್ ಆಫೀಸಿನ ಕೆಲಸ ಒಂದು ಬಿಟ್ಟು ಬೇರೆಲ್ಲ ಮಾಡ್ತೀವಿ ಅಂತಾರ.ಇಲ್ಲೆ ನಮ್ಮ ಸೆಕ್ಶ್ನಿನೂಳಗ ಕೆಲಸ ತುಂಬೇದ,ಇದನ್ನ ಬಿಟ್ಟು ಇನ್ನ ಆ ಪ್ರಾಜೆಕ್ಟ್ ಸರ್ವೆ ಹೆಂಗ ಮಾಡತಾಳ ? ಆಫೀಸಿನ ಕೆಲಸಕ್ಕೆ ಅಡೆತಡೆ ಬರಬಾರದು ನೋಡ್ರಿ,ಅದಕ್ಕ ನನ್ನ ತತ್ವದ ಪ್ರಕಾರ ನಾ ಅಂತೂ ಇದಕ್ಕ ಒಪ್ಪಿಗೀ ಕೂಡೂದಿಲ್ಲ,ನೀವೇನಂತೀರಿ ?.... ತಾರಾ ಮ್ಯಾಡ್ ಳ್ ಧ್ವನಿ ಎಷ್ಟು ಜೋರಾಗಿತ್ತೆಂದರೆ ಬಾಸ್ ಏನು ಹೇಳಿದರೋ ಹೂರಗಿದ್ದವರಿಗೆ ಕೇಳಿಸಲಿಲ್ಲ. ತತ್ವಪರಿಪಾಲಕಳಾದ ತಾನು ತತ್ವರಹಿತರೆಲ್ಲರ ಸೊಕ್ಕು ಮುರಿಯಲೇಬೇಕೆಂದು ನಿರ್ದರಿಸಿಧ ತಾರಾ ಮ್ಯಾಡಮ್ ಳ ಗಮನ ಒಂದು ಸಲ.
ಪುಟ:ನಡೆದದ್ದೇ ದಾರಿ.pdf/೩೦೬
ಗೋಚರ