ಆಫೀಸಿನ ಹಿರಿಯ ಮಹಿಳಾ ಆಧಿಕಾರಿಯಾಗಿದ್ದ ಶ್ರೀಮತಿ ಶ್ರೀವಾಸ್ತವಳ ಕಡೆ ಹರಿಹಿತು.ಹಿಂದಿನ ನಿರ್ದೇಶಕರ ಅವಧಿಯಲ್ಲಿ ಶ್ರಮವಹಿಸಿ ಕೆಲಸ ಮಾಡಿ ಒಳ್ಳೇ ಹೆಸರು ಪಡೆದಿದ್ದ ಶ್ರೀಮತಿ ಶ್ರೀವಾಸ್ತವಗೆ ದಕ್ಷ ಅಧಿಕಾರಿಯೆಂದು ರಾಜ್ಯಮಟ್ಟದ ಬಹುಮಾನವೂ ಬಂದಿತ್ತು. ಇನ್ನೋಂದೇ ವರ್ಷ ದಲ್ಲಿ ನಿವೃತ್ತ ಳಾಗಲ್ಲಿದ್ದ ಆಕೆಯ ಬಗ್ಗೆ ಎಲ್ಲರಿಗೂ ಗೌರವಾವಿತ್ತು . ತನ್ನನ್ನು ಯಾವಾಗಲೂ ಕಡೆಗಣಿದಸಿದ್ದ ಈಕೆಯನ್ನು ಒಂದು ಕೈ ನೋಡಿಯೇ ಬಿಡೋಣ ಅನಿಸಿತು ತಾರಾ ಮ್ಯಾಡಮ್ ಗೆ ಪರಿಣಾಮ ಸಾಹೇಬರಿಗೆ ಒಂದು ರಿಪೋರ್ಟ್ ಹೋಯಿತು ಅದರ ಪ್ರಕಾರ - ಶ್ರೀಮತಿ ಶ್ರೀವಾಸ್ತವ ನಾಲ್ಕು ಬಾರಿ ನ್ಯಾಶ್ನಲ್ ಸೆಮಿನಾರ್ ಮಾಡುತ್ತೇವೆಂದು ಐವತ್ತು ಸಾವಿರ ಹಣ ಅಡ್ವಾನ್ಸ್ ಪಡೆದರು ಆದರೆ ಯಾವ ಖರ್ಚುವೆಚ್ಚಿನ ಲೆಕ್ಕಪತ್ರವನ್ನೂ ಅವರು ಒಪ್ಪಿಸಿಲ್ಲ. ಅವರ ಈ ಹೊಣೆಗೇಡಿ ವರ್ತನೆಯಿಂದಾಗಿ ಇಲಾಖಾಗೆ ಪ್ರತಿವರ್ಷ ಸಿಗಬೇಕಾದ ಬಜೆಟ್ ನಲ್ಲಿ ಗಣನೀಯ ಖೋತಾ ಆಗಿದೆ. ಈ ಬಗ್ಗೆ ಕ್ರಮ ಕೈಕೊಳ್ಳುವುದು. ವಿಷಯ ಗಂಭೀರವಾದದ್ದು. ಸಹಜವಾಗಿ ಸಾಹೆಬರು ಅಪ್ ಸೆಟ್ ಅದರು ಶ್ರಿಮತಿ ಶ್ರಿವಾಸ್ತವಳನ್ನು ಕರೆಸಿ ಖಾರವಗಿ ವಿಚಾರಿಸಿದರು. ಲೆಕ್ಕಪತ್ರದ ವಿಭಾಗಾಧಿಕಾರಿಯನ್ನು ಕರೆಸಿದರು. ಸಂಬಂಧಿಸಿದ ಕಾರಕೂನರನ್ನು ಸಹ. ವಾರಗಟ್ಟಲೆ ನಡೆದ ವಾದ_ ಪ್ರತಿವಾದ, ಆಪಾದನೆ_ಸಮರ್ಥನೆ ಇತ್ಯಾದಿಯ ನಂತರ ಶ್ರಿಮತಿ ಶ್ರಿವಾಸ್ತವರು ಸರಿಯಾದ ಸಮಯದಲ್ಲೇ ಲೆಕ್ಕಪತ್ರ ಒಪ್ಪಿಸಿದ್ದರೆಂದೂ , ಅದರೆ ಅದನ್ನು ಪ್ರೋಸಿಸಿಂಗ್ ಮಾಡುವ ಕಾರಕೂನನು ಅಜಾರಿಯಿದ್ದು ದೀರ್ಘಾವಧಿ ರಜೆಯ ಮೇಲೆ ಹೋದುದರಿಂದ ಕೆಲವು ಏರುಪೇರುಗಳಾದವೆಂದೂ ತಿಳಿದು ಬಂದಿತು. ತನ್ನ ತಪ್ಪಿಲ್ಲವೆಂದು ಸಿದ್ಧದವಾಗಿದ್ದರೂ ಇಂಥದೊಂದು ಆಪದನೆಯನ್ನು ಈ ನಿನ್ನೆ_ ಮೊನ್ನೆಯ ಹೆಂಗಸು ತನ್ನ ಮೇಲೆ ಮಾಡಿದಳೆಲ್ಲ , ಅದು ವಿನಾಕಾರಣ ಹಾಗೂ ಹೊಟ್ಟೆಕಿಚ್ಚಿನಿಂದ,ಮತ್ತು ಆಕೆಯ ಮಾತನ್ನು ಈ ಸಾಹೇಬರು ಸಾರಾಸಗಟಾಗಿ ನಂಬುತ್ತರಲ್ಲ , ಅಂತ ಬೇಸರವಾಗಿ ಶ್ರಿವಾಸ್ತವ ತಾನಾಗಿ ಬಯಸಿ ಒಂದು ವರ್ಷ ಮುಂಚಿತವಾಗಿಯೆ ನಿವ್ರುತ್ತಿ ಪಡೆದುಕೊಂಡಳು. ಸಮಾಜ ಕಲ್ಯಾಣ ಇಲಾಖೆಯ ಆ ಕಚೇರಿಗೆ ಅಧೀನವಾಗಿ ಒಂದು ದೊಡ್ಡ ಲೈಬ್ರರಿಯಿತ್ತು.ಆನೇಕ ವರ್ಷಗಳಿಂದ ಹಿಂದಿನ ಅನೇಕ ಅಭ್ಯಾಸಾಸಕ್ತ ಅಧಿಕಾರಿಗಳು ಅಲ್ಲಿ ಸಮಾಜ ಕಲ್ಯಣಕ್ಕೆ ಸಂಬಂಧಿಸಿದ ಸಾವಿರಾರು ಒಳ್ಳೊಳ್ಳೆಯ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಸಾರ್ವಜನಿಕರಿಗೆ ಮುಕ್ತವಾಗಿದ್ದ ಆ ಲೈಬ್ರರಿಯ ಲಾಭಾವನ್ನು ಹಲವಾರು ಪಿಎಚ್.ಡಿ.ವಿದ್ಯಾರ್ಥಿಗಳು, ಸಮಾಜ ಕಾರ್ಯಕರ್ತರು , ಸಮಾಜ
ಪುಟ:ನಡೆದದ್ದೇ ದಾರಿ.pdf/೩೦೭
ಗೋಚರ