ಈ ಪುಟವನ್ನು ಪರಿಶೀಲಿಸಲಾಗಿದೆ
೩೦೨ ನಡೆದದ್ದೇ ದಾರಿ
ಅಧಿಕಾರದ ದುರುಪಯೋಗ, ಸರಕಾರಿ ಹಣದ ಆಘರಾತಫರಾ, ಇಲಾಖೆಯ
ಒಡೆತನದಲ್ಲಿ ರುವ ಮಾಲಿನ ಬೇಕಾಯ್ದೇಶಿರ ವಿಲೇವಾರಿ, ಭ್ರಷ್ಟಾಚಾರ - ಈ
ಆರೋಪಗಳನ್ನು ಮೇಲುನೋಟಕ್ಕೆ ಸಾಬೀತು ಪಡಿಸಿ, ನ್ಯಾಯಾಂಗ
ವಿಚಾರಣೆಯಾಗುವ ತನಕ ಡಾ. ತಾರಾ ಪೋಕಳೆಯನ್ನು ಸೇವೆಯಿಂದ
ಅಮಾನತ್ತುಗೊಳಿಸಲಾಯಿತು.
* * *
ಆ ರಾತ್ರಿ ತಡವಾಗಿ ಮನೆ ಸೇರಿದ ಆಕೆ ದಾರಿ ಕಾಯ್ದು ಊಟವಿಲ್ಲದೆ
ಉಪವಾಸ ಹಾಸಿಗೆ ಸೇರಿದ್ದ ಗಂಡನನ್ನುದ್ದೇಶಿಸಿ, ಗಟ್ಟಿಯಾಗಿ ಹೇಳತೊಡಗಿದಳು,
" ಈ ದೇಶದಾಗ ಪ್ರಾಮಾಣಿಕರಾಗಿ, ತತ್ವನಿಷ್ಠರಾಗಿ ಕೆಲಸಾ ಮಾಡವ್ರಿಹೆ ಅವಕಾಶನೇ
ಇಲ್ಲ. ಎಲ್ಲರೂ ದುಷ್ಟರು, ಆಪ್ರಾಮಾಣಿಕರು, ಅಯೋಗ್ಯರು..."ಆಕೆಯ ತತ್ವಪಾಠ
ಕೇಳಲು ಆತ ಎಚ್ಚರವಿರಲಿಲ್ಲ,ಎಂದಿನಂತೆ ಆಕೆ ಬರುವ ಮೊದಲೇ ಅಕೆಯ ಲೆಕ್ಚರಿನಿಂದ
ತಪ್ಪಿಸಿಕೊಳ್ಳಲೆಂದು ನಿದ್ದೆಗುಳಿಗೆ ಸೇವಿಸಿ ಮರೆವಿನ ಲೋಕಕ್ಕೆ ಜಾರಿಬಿಟ್ಟಿದ್ದ.
(೧೯೯೦)
* * *