ಪುಟ:ನಡೆದದ್ದೇ ದಾರಿ.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇರದಿದ್ದರೂ, ರಮಾಗೆ ಕೆಲಸ ಸಿಕ್ಕಿರಲಿಲ್ಲ. ಹುಡುಗಿಯರ ಹಾಯ್ ಸ್ಕೂಲಿಗೆ ಶಿಕ್ಷಕಿಯೇ ಬೇಕೆಂದು ಹಜಾಹೀರಾತಿನಲ್ಲಿ ತಿಳಿಸಿದ್ದರಿಂದ ಅರ್ಜಿ ಹಾಕಿದವರೂ, ಸಂದರ್ಶನ್ಕ್ಕೆ ಬಂದವರೂ ಹೆಂಗಸರೇ ಆಗಿದ್ದರು. ಅವರಲ್ಲಿ ಯಾರಿಗೂ ಆ ಕೆಲಸ ಸಿಕ್ಕಿರಲಿಲ್ಲ. ಕೆಲಸಕ್ಕೆ ಅರ್ಜಿಯನ್ನೇ ಹಾಕಿರಸದ, ಸಂಬಂಧಿಸಿದ ವಿಷಯಗಳನ್ನು ಅಭ್ಯಸೈಸಿರದೇ ಇದ್ದ, ಬಿ.ಎಡ್. ಮಾಡದೇ ಇದ್ದ ಗಂದಡಸು ಅಭ್ಯರ್ಥಿಯೊಬ್ಬನನ್ನು ನಂತರ ಸಂಪರ್ಕಿಸಿ ಆ ಹುದ್ದೆ ಕೊಡಲಾಗಿತ್ತು. ಆತ ಸಾಹುಕಾರ ಕಲ್ಲಪ್ಪನವರ ಅಣ್ಣನ ಮಗನಾಗಿದ್ದುದು ಆರತನ ಎಕಮೇವ ಅರ್ಹತೆ.

        ಸರಕಾರಿ ರೂಲ್ಸ್ ಪ್ರಕಾರ ವಿಶೇಸಷ ವರ್ಗಕ್ಕೆ ಸೇರಿದ್ದ ಆತನ ನೇಮಕಾತಿಯಗಿದ್ದು ಸರಿಯಾಗಿಯೇ ಇತ್ತು. ಆತ ಅರ್ಜಿ ಹಾಕಿದ್ದನೋ ಇಲ್ಲವೋ, ಡಿಗ್ರಿಯಲ್ಲಿ ಕ್ಲಾಸ್ ಪಡೆದಿದ್ದನೋ ಇಲ್ಲವೀ, ಬಿ.ಎಡ್.ಏಕೆ ಮಾಡಿಲ್ಲ, ಯಾವ ವಿಷಯ ಅಭ್ಯಾಸ ಮಾಡಿದ್ದಾನೆ, ಈದಗ ಯಾವ ವಿಷಯ ಹೇಗೆಕಲಿಸುತ್ತಾನೆ, ಇವೆಲ್ಲ ಪ್ರಶ್ನೆಗಳು ಅಪ್ರಸ್ತುತ.
       ಕ್ರಿಷ್ಟಪ್ಪನಿಗೇಗ ವಯಸ್ಸಗಿದೆ. ದಿನದ ಬಹುಪಾಲು ಬಿಡುವಿನ ಹೊತ್ತನ್ನು ಆರತ ಊತರಾಛೆಯ ನದೀದಂಡೆಯಲ್ಲಿರುವ ಅಂಜನೇಯನ ಗುಡಿಯ ಕ್ಟ್ಟೆಯ ಮೇಲೆ ಒಬ್ಬನೇ ಸುಮ್ಮನೇ ಕೂತು ಕಳಎಯುತ್ತಾನೆ. ನಡುನಡುವೆ ತನ್ನಷ್ಟಕ್ಕೆ ತಾನೇ ಕಾಲ ಕೆಟ್ಟು ಹೋಯಿತು' ಅಂತ ಹೇಳಿಕೊಳ್ಳುತ್ತ ಇರುತ್ತನೆ. 
    ಒಮ್ಮೊಮ್ಮೆ ಆತ ಯೋಛಿಸುತ್ತಾನೆ - ಕಲ್ಲಪ್ಪ ಸಾಹುಕಾರರಿಗೆ ಅವರ ಅಜ್ಜನ ಹೆಸರು ಇಟ್ಟಿದ್ದರು. ಹಾಗೆಯೇ ತನಗೂ ಅಜ್ಜನ ಹೆಸರೇ ಇಡಲಾಗಿತ್ತು. ಕಲ್ಲಪ್ಪ ಸಾಹುಕಾರರ ಅಜ್ಜ ಕಲ್ಲ್ಯಾ ತನ್ನ ಅಜ್ಜ ವೇದಾಂತ ಕೇಸರಿ ಕ್ರುಷ್ಣ ಮೂರ್ತಿ ಆಛಾರ್ಯರಲ್ಲಿ ಜೀವತದಾಳಾಗಿದ್ದನಂತೆ. ಕಾಲ ಬದಲಾಯಿತು. ಪರಿಸ್ಥಿತಿ ಬದಲಾಯಿತು. ಕಲ್ಲ್ಯಾನ ಮೊಮ್ಮಗ ಸಾಹುಕಾರ ಕಲ್ಲಪ್ಪನಾದ. ಅವನ ಅಳಿಯನಿಗೆ ಬೇಕಾದಾರಗ ಸೈಟು-ಮನೆ ಎಲ್ಲ ಸಿತಗುತ್ತದೆ; ಅವನ ಅಣ್ಣನ ಮಗನಿಗೆ ಕನಿಷ್ಠ ಅರ್ಹತೆ ಇಲ್ಲದಿದ್ದರೂ ನೊಕರಿ ಸಿತಗುತ್ತದೆ. ಆದರೆ ವೇದಾಂತ ಕೇಸರಿ ಕ್ರುಷ್ಣಮೂರ್ತಿ ಆಛಾಯರ ಮೊಮ್ಮಗ ದರಿದ್ರ ಬ್ರಾಹ್ಮಣ ಕ್ರೈಷ್ಣಪ್ಪನಾದ. ಅನವನಿಗೆ ಹಣ ಕಟ್ಟಿದರೂ ಸೈಟು ಸಿಗುವುದಿಲ್ಲ; ಮಗನಿಗೆ ಎಂಬತ್ತೇಂಟು ಪರ್ಸೆಂತಟಾದರು ಬೇಕಾದ ಕೋರ್ಸಿಗೆ ಸೀಟು ಸಿಗುವುದಿಲ್ಲ; ಮಗಳಿಗೆ ಕೆಲಸ ಸಿಗುವುದಿಲ್ಲ. ಈ ಬಗ್ಗೆ ಆತನೇನಾದರೂ ಅಂದರೆ ಪೇಪರಿನಲ್ಲೆಲ್ಲ ಗಲಾಟೆ ಏಳುತ್ತದೆ. 
       ಹಾಗಿದ್ದರೆ ಸರಿ. ಕಾಯೋಣ. ಇದೆಲ್ಲಾ ಸರಿ ಅಂತಾದರೆ ಕ್ರಿಷ್ಟಪ್ಪನ