ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೦೮ ನಡೆದದೇ ದಾರಿ ಮೊಮ್ಮಗನ ಕಾಲದಲ್ಲಿ ಪರಿಸ್ಥಿತಿ ಮತ್ತೆ ತಿರುವು ಮುರುವಾಗಬಹುದಲ್ಲವೆ? ಆಗ ಅದೂ ಸರಿ ಅಂತಾಗಬಹುದಲ್ಲವೆ? ಕಾಲ ಮತ್ತೆ ಬದಲಾಗಬಹುದಲ್ಲವೆ? ಬದಲಾಗುತ್ತಿರುವುದೇ ಕಾಲವಲ್ಲವೆ?
ಒಣಗಿ ಹೋಗಿದ್ದ ದರಿದ್ರ ಬ್ರಾಹ್ಮಣ ಕ್ರಿಷ್ಟಪ್ಪನ ಮನದಾಸೆಗಳು ಮೊಮ್ಮಗನ ಕಾಲವನ್ನು ನೆನೆಯುತ್ತ ಮತ್ತೆ ಚಿಗುರತೊಡಗುತ್ತವೆ...