ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೯


                      ಮರೀಚಿಕೆ
       "ಟಾಟಾ ಆಂಟಿ", "ಸೂಟಿ ಆದ ಕೂಡ್ಲೆ ಪಿಲೂ-ಸತೀಶ ಇಬ್ರನ್ನೂ ಕಳಿಸಬೇಕು. ಹಾಂ","ಆಂಟಿ ಟಾಟಾ" -ಅಕ್ಕನ ಮೂರು ಮಕ್ಕಳು ಮರಾಠಿಯಲ್ಲಿ ಒಂದೇ ಸಮನೆ ಕಿರುಚುತ್ತಿರುವಾಗ ಈ ಬಸ್ಸು ಒಮ್ಮೆ ಬಿಟ್ಟರೆ ಸಾಕು ಅನಿಸಿತು ಆಕೆಗೆ. ಅಲ್ಲ, ರಾತ್ರಿ ಹನ್ನೊಂದಾಗಲು ಬಂದಿರಬೇಕು. ಸುಮ್ಮನೆ ಮನೆಯಲ್ಲಿ ಮಲಗುವುದು ಬಿಟ್ಟು 'ಆಂಟೀನ್ನ ಕಳಿಸ್ಲಿಕ್ಕೆ ನಾವೂ ಬರ್ತೀವಿ'ಅಂತ ಹಟ ಹಿಡಿದು ತಾವೂ ಬಂದಿವೆ; ಅಕ್ಕನಿಗಾದರೂ ಕಂಡಲ್ಲಿ ಹೀಗೆ ಹುಡುಗರನ್ನು ಕರಕೊಂಡು ಹೋಗುವುದರಲ್ಲಿ ಎಂತಹ ಹುರುಪೋ ಏನೋ. ಅವಳಿಗೆ ಯಾತರಲ್ಲೂ ಬೇಸರವಿಲ್ಲ. ಬಸ್ ಸ್ಟ್ಯಾಂಡಿಗೆ ಹೋಗುವುದೆಂದು ರಾತ್ರಿ ಎಷ್ಟು ಉತ್ಸಾಹದಿಂದ ಅಡಿಗೆ ಮಾಡಿದಳು! ಎಲ್ಲರಿಗೂ ಬಡಿಸಿದಳು. ಗಂಡನ ಕೂಡ ಎಷ್ಟು ನಗುನಗುತ್ತ ಮಾತಾಡುತ್ತಾಳೆ ಅಕ್ಕ- ಲಗ್ನವಾಗಿ ಹನ್ನೆರಡು ವರ್ಷಗಳ ನಂತರ ಸಹ. ಅದೇ ಗಂಡ, ಅದೇ ಮಕ್ಕಳು,ಅದೇ ಮನೆ, ಅದೇ ಕೆಲಸ- ದಿನಾ ಅದೇ ಅದೇ. ಆದರೂ ಇನ್ನೂ ನಿನ್ನೆ ಲಗ್ನವಾದ ಹುಡುಗಿಯ ಹಾಗೆ ಆಡುತ್ತಾಳೆ ಅಕ್ಕ. ಈ ಎಲ್ಲದರಿಂದ ಓಡಿಹೋಗಬೇಕು ಒಮ್ಮೆಯಾದರೂ, ತುಸು ಹೋತ್ತಾದರೂ- ಅಂತ ಅವಳಿಗೆಂದೂ ಅನಿಸಿರಲಿಕ್ಕೇ ಇಲ್ಲವೆ ?
       "ಮಿನೀ, ಇನ್ನೊಮ್ಮೆ ಕೊಲ್ಹಾಪುರಕ್ಕ ಬರುವಾಗ ಹೀಂಗ ಒಬ್ಬಾಕಿನೇ ಬರಬ್ಯಾಡ ಹ್ಞಾ, ನಿನ್ನ ಯಜಮಾನರನ್ನ ಹುಡುಗರನ್ನ ಕರಕೊಂಡ ಬಾ"-ಅಕ್ಕ,"ಅಲ್ಲೇನ್ರಿ ?"-"ಹ್ಞಾ, ಹೌದು,ಹೌದು" ಅಂತ ಸೋ ಹಾಕಿದ ಅಕ್ಕನ ಗಂಡ.
       ಒತ್ತರಿಸಿ ಬರುತ್ತಿರುವ ಬೇಸರ ಮುಚ್ಚಿಡಲು ಅಷ್ಟೇನೂ ಪ್ರಯತ್ನಪಡದೆ ಆಕೆ ಮಾತಾಡಿದಳು, "ನೀವಿನ್ನ ಮನಿಗೆ ಹೋಗ್ರಿ ಅಕ್ಕಾ, ಹುಡುಗರಿಗೆ ನಿದ್ದೆಯ ಹೊತ್ತು."
       "ಹ್ಞಾ ಹ್ಞಾ ಹೋಗ್ತೀವಿ. ನಿನಗೇನ ಬಸ್ಸಿನೊಳಗ ತ್ರಾಸಾಗಲಿಕ್ಕಿಲ್ಲಲ್ಲ ಮಿನೀ, ಪುಶ್ ಬ್ಯಾಕ್ ಸೀಟ್ಸ್ ಅವ. ಮಲಕೊಂಡಬಿಡು. ನೀ ಕಣ್ಣ ತಗಿಯೂದ್ರಾಗ ಪುಣೆ ಬಂದಿರ್ತದ." -ಅಷ್ಟಂದು ಅಕ್ಕ ಒಮ್ಮೆಲೆ ಗಂಡನ ಕಡೆಗೆ ಹೊರಳಿ ಬಹಳ ಕಾಳಜಿಯ ಧ್ವನಿಯಲ್ಲಿ ಹೇಳಿದಳು, "ಮರೆತು ಬಿಟ್ಟೆ. ಹಾಲಿನ ಭಾಂಡಿಯ ಮ್ಯಾಲ ಮುಚ್ಚಲೇ ಇಲ್ಲ. ಹಾಳು ಬೆಕ್ಕು-"