ಪುಟ:ನಡೆದದ್ದೇ ದಾರಿ.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_ಲಗ್ಝರಿ ಬಸ್ಸು. ಸಕಷ್ಟು ಸ್ಟೀಡಿನಿಂದಲೇ ಓಡುತ್ತಿದೆ. ಬಸ್ ಟರ್ನ್ ತೆಗೆದುಕೊಳ್ಳುವಾಗಲೆಲ್ಲ ಟಿಕೆಟ್ಸ್ ಕೊಡುತ್ತಿರುವ ಕಂಡಕ್ಟರನ ತಪ್ಪದೇ ಹೆಂಗಸರಿದ್ದ ಸೀಟಿನ ಕಡೆಗೆ ಹೋಗುತ್ತಿದೆ.... "Excuse me_" _ಬದಿಯಿಂದಲೇ ಬಂದ ಗಡಸು ಧ್ವನಿ ಕೇಳಿ ಆಕೆ ಒಮ್ಮೆಲೆ ಬಲಕ್ಕೆ ಹೊರಳಿ ನೋಡಿದಳು. ಅಕೆಯ ಮಗ್ಗುಲು ಸೀಟಿಗೆ ಕೂತ ಮನುಷ್ಯ ಗಂಭೀರವಾಗಿ ಆಕೆಯನ್ನೇ ನೋಡುತ್ತ ಹೇಳಿದ: "Excuse me madm." ಏನು ಯಾಕೆ ಅಂತ ತಿಳಿಯದೆ ಅಕೆ ಅವನನ್ನೆ ನೋಡಿದಳು. ಹಿತವೆನ್ನಿಸಿತು. ಆತ ಮಾತಾಡಿಸಿದ್ದೇಕೆ ಅಂತ ಕೇಳುವುದು ಬಿಟ್ಟು ನೋಡುತ್ತಲೇ ಇದ್ದಳು. ಅಕೆಯ ಕಾಲ ಕೆಳಗೆ ಏನೋ ಅಲುಗಾಡಿತು. ಒಮ್ಮೆಲೇ ಹೊಳೆಯಿತು ಅಕೆಗೆ_ ತಾನು ಚಪ್ಪಲುಗಾಲಿನಿಂದ ಆತನ ಪಾದ ಮೆಟ್ಟಿದ್ದು."Oh Sorry,"ಅಂತ ಕಾಲು ಈಚೆಗೆ ಎಳೆದುಕೊಂಡಳು. ಮತ್ತೆ ಮತ್ತೆ ವ್ಯಥೆ ವ್ಯಕ್ತಪಡಿಸಿದಳು."ಅಡ್ಡಿಯಿಲ್ಲ ,"ಅಂದ ಆತ ನಸುನಗುತ್ತ. ಅಲ್ಲ ತಾನೆಂಥ ಪೆದ್ದಿ!ಇಷ್ಟು ಹೊತ್ತಿನಿಂದಲೂ ಈತನನ್ನು ಗಮನಿಸಿಯೇ ಇಲ್ಲವಲ್ಲ ಅಂತನಿಸಿತು.ಈ ಧ್ವನಿ ಎಷ್ಟು ಗಡುತರವಾಗಿದೆ ಸಿನೀಮಾದಲ್ಲಿನ ಮಹಾರಾಜನ ಧ್ವನಿಯ ಹಾಗೆ. ಒಂದು ಬದಿಯಿಂದ ನೋಡಿದರೆ ಗ್ರೀಕಯೋಧನ ಹಾಗೆ ಕಾಣುತ್ತಾನೆ....ಅಕೆ ತನ್ನ ಕಣ್ಣ ಕೊನೆಯಿಂದ ಹಲವು ಬಾರಿ ಅತನನ್ನು ನೋಡಿದಳು. ಸಮಾಧಾನವಾಗದೆ ಪೂರಾ ತಿರುಗಿ ನೋಡಿದಳು. ಅಕಸ್ಮಾತ್ ಅವನೂ ನೋಡಿದ _ ಹೀಗಾದಾಗ ಬೆಚ್ಚೀಬೀಳಲು ತಾನೇನು ಸಣ್ಣ ಹುಡುಗಿಯಲ್ಲ ಅಂತ ಅಕೆ ಮುಗುಳ್ನಕ್ಕಳು.ಅತನೂ ನಕ್ಕ, ಸುಂದರವಾಗಿ ನಕ್ಕ. ಕತೆ ಸುರುವಾಗುತ್ತಿದೆಯೋ ಏನೋ ಅನಿಸಿತು. ಅಕೆ ತನ್ನ ದ್ರುಷ್ಟಿ ಬೇರೆಡೆ ಹೊರಳಿಸಲಿಲ್ಲ. ಹೌದು, ಅತ ಮಾತಾಡುತ್ತಾನೆ ಈಗ: "ನೀವು ಪುಣೇಕ್ಕ ಹೋಗ್ಬೇಕೋ ಅಥವಾ_" " ಹೌದು ಪುಣೇಕ್ಕ ;ನೀವು?" ನಾನೂ ಅಲ್ಲಿಗೇ. ಬಸ್ಸಿನೊಳಗೆ ಕೂತು ರತ್ರಿ ಕಳೀಲಿಕ್ಕೆ ಬ್ಯಾಸರ ಅಲ್ಲs?" " ಹೌದು." "ಅದರೆ ಹೀಂಗ ಛಲೋ ಕಂಪನಿ ಸಿಕ್ಕರೆ ಬ್ಯಾಸರಾಗೂದಿಲ್ಲ." ಅಕೆ ನಕ್ಕಳು ಮಾತ್ರ. "ನೀವು ಪುಣೇದಾಗ ಕಲೀತೀರೇನು?"