ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೬
ನಡೆದದ್ದೇ ದಾರಿ
     ನಸುಕು.ಸಮೀಪದಲ್ಲೇ ಪುಣೆ ಸಿಟಿ ಕಾಣುತ್ತಿದೆ.ಆಕೆಯ ಮನಸ್ಸು ಒಮ್ಮೆಲೆ
ಅಸ್ವಸ್ಥವಾಯಿತು.ಏನು ಹೇಳಬಹುದು ಆತ? ತಾನು ಏನೆಂದು ಉತ್ತರಿಸುವುದು
ಅದಕ್ಕೆ?ಛೆ,ಇಷ್ಟು ದಿನ ಎಂದೂ ಈ ಬಗ್ಗೆ ವಿಚಾರ ಮಾಡಿಯೇ ಇಲ್ಲವಲ್ಲ ತಾನು?
ಇದ್ದಕ್ಕಿದ್ದಂತೆ ಆತ ಕೇಳಿದ:"ನನ್ನ ನೆನಪಿಡುತ್ತೀರಲ್ಲ?"
ನೇರವಾಗಿ ಉತ್ತರಿಸದೆ ಆಕೆ ಮರುಪ್ರಶ್ನೆ ಹಾಕಿದಳು:"ನೀವು?"
"ನಾನು ಸುಂದರವಾದದ್ದನ್ನು ಯಾವಾಗಲೂ ನೆನಪಿಡ್ತೀನಿ.
"ಓ,ಥ್ಯಾಂಕ್ಸ್."
ಆಕೆಯ ಮನಸ್ಸು ಹಕ್ಕಿಯಂತೆ ಹಾರಿತು.ಕತೆಯ ಅಂತ್ಯದ ಬಗ್ಗೆ ಆಕೆಗೆ ಸಂಶಯ
ಉಳಿಯಲಿಲ್ಲ.
"waiting For Godot ಅಧಾ೯ಕ್ಕೇ ಉಳೀತು"ಅಂದ ಆತ.
ಅಂದರೆ-
ಪುಣೆ ಬಂದೇಬಿಟ್ಟಿತು.
"ನೀವು ಇದ್ದೀರಿ ಅಂತ ಹೊತ್ತು ಹೋದದ್ದೇ ಗೊತ್ತಾಗ್ಲಿಲ್ಲ.ಥ್ಯಾಂಕ್ಸ್-
ಸುಂದರವಾದ ಈ ರಾತ್ರಿಗೆ-ಅಂದರೆ ನಿಮ್ಮ ಸುಂದರ company ಗೆ-"ಆತ
ಸಾಮಾನು ಸರಿಪಡಿಸಿಕೊಳ್ಳುತ್ತ ಮಾತಾಡಿದ.
ಆಕೆ ಬಹಳವಾಗಿ ಗಲಿಬಿಲಿಗೊಂಡಿದ್ದಳು.ಏನಾದೀತು ಈ ಕತೆಯ climax?
ಬಹುಶಃ ಆತ ತನ್ನ ಮನಃಸ್ಥಿತಿ ಸರಿಯಾಗಿ ತಿಳಿದಿಲ್ಲ.ಅಂತೆಯೇ ಮುಂದುವರಿಯಲು.
ಹಿಂದೆ ಮುಂದೆ ನೋಡುತ್ತಿದ್ದಾನೆ,ಸಂಕೋಚಪಡುತ್ತಿದ್ದಾನೆ.ಯಾರು ಮೊದಲು.
ಮುಂದುವರಿದರೇನು ? ತಾನೇ ಮಾಡಿದರೆ ಆ ಕೆಲಸ?.
ಕೂಲಿಗಳ ಕಿರುಚಾಟ, ಪ್ರಯಾಣಿಕರು ಇಳಿಯುವ ಗಡಿಬಿಡಿ, ಸುತ್ತೆಲ್ಲ .
ಜನಸಾಗರ. .
ಆತ ಬಸ್ಸಿನ ಹಿಂದೆ ಹೋಗಿ ನಿಂತು ಮೇಲಿನಿಂದ ಸಾಮಾನು .
ಇಳಿಸಿಕೊಳ್ಳುತ್ತಿದ್ದಾನೆ..
-ದೂರದಲ್ಲಿ -ಪ್ರಕಾಶ ಬಂದಿದ್ದಾನೆ,ಕಾರು ತಗೊಂಡು.ತನ್ನನ್ನು.
ಹುಡುಕುತ್ತಿದ್ದಾನೆ, ಇನ್ನೇನು ಇಲ್ಲಿಗೆ ಬಂದೇಬಿಡುತ್ತಾನೆ...ಆಕೆಯ ತಲೆ ಚುರುಕಾಗಿ.
ಕೆಲಸ ಮಾಡಿತು.ಪಸಿ೯ನಿಂದ ಆಕೆ ನೀಲಿ ಬಣ್ಣದ ಕಾಗದ-ಪೆನ್ನು ತೆಗೆದಳು.ದುಂಡಾದ.
ಅಕ್ಷರಗಳಲ್ಲಿ ಇಂಗ್ಲೀಶ್ ನಲ್ಲಿ ಬರೆದಳು-ತನ್ನ ಫೋನ್ ನಂಬರು,ಅಡ್ರೆಸ್,"ಸಂಜೆ .
ನಾಲ್ಕಕ್ಕೆ ಫೋನ್ ಮಾಡಿ ನಿನ್ನನ್ನು ಎಲ್ಲಿ ಭೆಟ್ಟಿಯಾಗುವುದೆಂದು ತಿಳಿಸು..
ಕಾಯುತ್ತಿರುತ್ತೇನೆ."ಕಾಗದ ಮಡಿಚಿ "waiting For Godot"ದ ಮೊದಲ