ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೦ ನಡೆದದ್ದೇ ದಾರಿ

ವಿನಯದಿಂದ ಬಾಗಿ ಕೈಯಲ್ಲಿನ ಪ್ಯಾಕೆಟ್ಟನ್ನು ಮುಂದೆ ಚಾಚಿದ,"ಬಾಯಿಯವರು
ತಮಗ ಕೊಟ್ಟು ಬಾ ಅಂದರು."
      ಆಕೆ ಅದನ್ನು ಸ್ವೀಕರಿಸಿದಾಗ ಆತ ಬಗ್ಗಿ ಸಲಾಮ್ ಮಾಡಿ ಎರಡು ಹೆಜ್ಜೆ ಹಾಗೇ
ಹಿಂದೆ ಸರಿದು ನಂತರ ತಿರುಗಿ ಹೊರಟುಹೋದ. ಪ್ರಕಾಶ ಅಲ್ಲೇ ಪೇಪರೋದುತ್ತ
ಕುಳಿತವನು ತಲೆ ಎತ್ತದೆಯೇ ಮಾತಾಡಿದ,"ನಿನ್ನ ಫ್ರೆಂಡ್ ಶಶಿಕಲಾ ಕಳಿಸಿರಬೇಕು-
ಏನಾದರೂ ಹೊಸಾ ನಮೂನೆ ಹಲ್ವಾ.ಮತ್ತೇನ ಕೆಲ್ಸ ನಿಮಗ ಹೆಂಗಸರಿಗೆ-"
      ಆಕೆ ಉತ್ತರಿಸದೆಯೆ ವೇಗವಾಗಿ ಒಳಗೆ ಬಂದಳು. ಬೆಡ್ರೂಮಿನ ಬಾಗಿಲು
ಹಾಕಿಕೊಂಡು ಹಾಸಿಗೆ ಮೇಲೆ ಕುಳಿತಳು. ಅವಳ ಕೈ ನಡುಗುತ್ತಿದ್ದವು. ಗುಲಾಬಿ ಬಣ್ಣದ
ರ್ಯಾಪರ್, ರೇಶಿಮೆಯ ದಾರ- Waiting For Godot,ತಿಳಿ ನೀಲಿ ಬಣ್ಣದ ಕಾಗದ,
ತಾನೇ ಬರೆದ ಚೀಟಿ. ಎಲ್ಲ ಸುರಕ್ಷಿತ ವಾಪಸ್.
      ಆ ಫ್ರೆಂಚ್ ಕತೆ, ರಾತ್ರಿ ಬಸ್ಸಿನಲ್ಲಿ ಅಕಸ್ಮಾತ್ ಭೆಟ್ಟಿಯಾದ ಅಪರಿಚಿತ, ಅವನು
ತಿರುಗಿ ಕಳಿಸಿದ ಪುಸ್ತಕ-ಚೀಟಿ; ಈ ಮನೆ ಸಂಸಾರ, ಬಿಡುಗಡೆಗಾಗಿ ಕಾದಿದ್ದು...
ಸಾಹಸ... ? ಛಿ, ಈ ಎಲ್ಲಕ್ಕೂ ಸೀಮೆಎಣ್ಣೆ ಸುರಿದು ಬೆಂಕಿಯಿಡಬೇಕು...
      ಎದ್ದು ಪಡಶಾಲೆಗೆ ಬರುತ್ತ ಗಟ್ಟಿಯಾಗಿ ಹೇಳಿದಳು, "ನಡೀ ಪ್ರಕಾಶ್,
ಸಿನೆಮಾಕ್ಕೆ ಹೋಗೋಣ."
               (ಒಂದು ಹಳೆಯ ಮರಾಠಿ ಕತೆಯ ಆಧಾರ)
                                                        (೧೯೭೩)
           
                             *  *  *