ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೬
ನಡೆದದ್ದೇ ದಾರಿ

ಆತನೂ ಗಂಡಸೇ.ತಾನಾತನನ್ನು ದ್ವೇಷಿಸಿದ್ದೆನೇ?

-ಎದ್ದು ರೂಮಿನ ಬಾಗಿಲು ಮುಚ್ಚಿ ಪ್ರೊ.ಲೀಲಾವತಿ ಅಂದಿನ ಪತ್ರಗಳಿಗೆ
ಉತ್ತರ ಬರೆಯಲೆಂದು ಕಾಗದ-ಪೆನ್ನು ಹಿಡಿದು ಕುಳಿತಳು.
ಕಳೆದ ಕೆಲ ತಿಂಗಳುಗಳಿಂದ ಹಲವಾರು ಕಡೆ ಅತಿಥಿಯಾಗಿ ಹೋಗಿ-ಹೋಗಿ
ಬೇಸರ ಬಂದದೆ.ಇನ್ನು ಕೆಲವು ದಿವಸವಾದರೂ ಯಾವ ಆಮಂತ್ರಣವನ್ನೂ
ಸ್ವೀಕರಿಸಬಾರದು."ಇಲ್ಲ,ಆಗುವುದಿಲ್ಲ"ಎಂದು ಉತ್ತರಿಸಿಬಿಟ್ಟರೆ ತೀರಿತು. ತೊಂದರೆ
ತಪ್ಪಿತು;ಕಾಟ ಕಳೆಯಿತು.
ಅಂದೊಮ್ಮೆ ಸದಾನಂದನ ಪ್ರಶ್ನೆಗೆ "ಇಲ್ಲ,ಆಗುವುದಿಲ್ಲ"ಎಂದುತ್ತರಿಸಿದ್ದೆ
ತಾನು.ಯಾಕೆ? ಈ ಇಪ್ಪತ್ತು ವರ್ಷ್ಗಳಲ್ಲಿ ಲೆಕ್ಕವಿಲ್ಲದಷ್ಟು ಸಲ "ಯಾಕೆ"? ಎಂದು
ತನ್ನನ್ನು ತಾನೇ ಕೇಳಿಕೊಂಡುದುಂಟು.ಯಾಕೆ?ತಂದೆ ಬೇಡವೆಂದರೆಂದೇ? ಸ್ವಲ್ಪ
ಮಟ್ಟಿಗೆ ಹೌದು;ತನಗೆ ಮದುವೆಯಾಗದೆ ಒಂಟಿಯಾಗಿದ್ದು
ಜೀವನವನ್ನೆದುರಿಸಬೇಕೆಂಬ ಉತ್ಸಾಹವಿತ್ತೆಂದೆ? ಇತ್ತೇನೋ! ಈಗಿಲ್ಲ;
ಸದಾನಂದನನ್ನು ತಾನು ಪ್ರೀತಿಸುತ್ತಿರಲಿಲ್ಲವೆಂದೆ?-ಛೇ,ಇದೇನು ಹುಚ್ಚುಚ್ಚಾರ
ವಿಚಾರ ಈ ರಾತ್ರಿ ಹೊತ್ತಿನಲ್ಲಿ! ಮಾಡಬೇಕಾದ ಕೆಲಸ ಗುಡ್ಡದೃಷ್ಟಿಗೆ ಎಲ್ಲಾ ಬಿಟ್ಟು
ಎಂದೋ ಒಮ್ಮೆ ಆಗಿ ಹೋದ ಏನೋ ಒಂದನ್ನು ನಡೆಯುತ್ತ ಕೂಡಲು ತಾನೇನು
ಈ ತನ್ನ ವಾರ್ಡಗಳ ಪೈಕಿ ಒಬ್ಬಳಾದೆನೇ!
ಭರಾ ಭರಾ ಪತ್ರ ಗೀಚಿ ಮುಗಿಸಿದಳು ಪ್ರೊ.ಲೀಲಾವತಿ. ನಂತರ ಎದ್ದು
ಡೈನಿಂಗ್ ಹಾಲಿಗೆ ನಡೆದಳು.
ಇವತ್ತೇಕೋ ಹಸಿವೆಯಾಗಿದೆ. ಈ ಹುಡುಗಿಯರೆಲ್ಲ ಎಷ್ಟು ಮಜವಾಗಿ
ಕೂಳು ಬಕ್ಕರಿಸುತ್ತಿದ್ದಾರಲ್ಲ, ಇವರ ಹೊಟ್ಟೆಯಲ್ಲಿ ಬಕಾಸುರನೇ ಇರಬೇಕು. ತನಗೆ
ಮಾತ್ರ ಹೊಟ್ಟೆತುಂಬ ತಿನ್ನಲಿಕ್ಕೂ ಸ್ವಾತಂತ್ರ್ಯವಿಲ್ಲ. ಈಗಲೇ ತನ್ನ ತೂಕ
ನೂರಾಎಂಬತ್ತು ಪೌಂಡುಗಳಾಗಿ ಹೋಗಿದೆ.ಇನ್ನು ಹೆಚ್ಚಾದರೆ ತೀರ ನಾಚಿಕೆಗೇಡು........
ಆರಾಮಾಗಿ ಕೂತು ಚಪಾತಿ ತಿನ್ನುತ್ತಿದ್ದಾಳೆ ಸರೋಜಿನಿ. ತಾನವಳಿಗೆ
ಬೈಯುವುದು ಆಗಲೇ ಮುಗಿದಿದೆ. ಆದರೂ ಅವಳಿಷ್ಟು ನಿಶ್ಚಿಂತೆಯಾಗಿ ಕೂತು ಊಟ
ಮಾಡುವದು ನೋಡಿದರೆ ಇನ್ನೊಂದಿಷ್ಟು ಏನಾದರೂ ಅಂದು ಹೋಗಬೇಕೆಂಬ
ಆಸೆಯುಂಟಾಗುತ್ತದೆ. ಸ್ವಲ್ಪವೂ ತೂಕದ ಸಮಸ್ಯೆಯಿಲ್ಲವಲ್ಲ ಈ ಹಾಳಾದವಳಿಗೆ!
"ಏನs ಸರೋಜಿನಿ,ರಾತ್ರಿ ನಿದ್ದೀ ಮಾಡತೀಯೋ ಏನು ಬರೇ ಕನಸು
ಕಾಣತಿರತೀಯೋ?"
ಹುಡುಗಿಯರೆಲ್ಲ ನಕ್ಕರು. ತಾನೂ ಅದನ್ನು ನಗುತ್ತಲೇ ಹೇಳಿದ್ದರೂ ಆ