ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಿಡುಗಡೆ/ಧೈರ್ಯದ ಮನುಷ್ಯ ೩೨೩
ಕೆಲಸವಂತೂ ಏನೂ ಇಲ್ಲ.ಊಟ ಮುಗಿಸಿ ಸಂಜೆ ಏಳೂವರೆ-ಎಂಟರೊಳಗಾಗಿ ನಮ್ಮ ನಮ್ಮ ತಂಬೂಗಳನ್ನು ಸೇರಬೇಕು.ಆದರೂ ಮನೆಗೆ ಹೋಗಲು ಕಾತರಿಸಿದ್ದ ಅನೇಕರಿಗೆ ಈ ಹಾಯಾದ ಜೀವನವೂ ಬೇಸರದ ಬಂಧನವೇ ಅನಿಸಿ,ಅವರು ಇಡೀ ದಿನವನ್ನು ತಮ್ಮ ಹಡಗು ಯಾವಾಗ ಬರಬಹುದೆಂದು ಅವರಿವರನ್ನು ವಿಚಾರಿಸುತ್ತ, ಸಮುದ್ರದಂಡೆಯ ಮೇಲೆ ನಿಂತು ದೂರದವರೆಗೆ ಆತಂಕದಿಂದ ನೋಡುತ್ತ, ಕಳೆಯುತ್ತಿದ್ದರು.ತಮ್ಮ ಹಡಗು ಬಂದವರು ಅತ್ಯುತ್ಸಾಹದಿಂದ ಅವಸರವಸರವಾಗಿ ಗಂಟುಮೂಟೆ ಸಹಿತ ಹಡಗನ್ನೇರಿ ತೀರದಲ್ಲಿರುವವರ ಕಡೆ ಮುಗುಳ್ನಕ್ಕು ಕೈಬೀಸುತ್ತ ಮರೆಯಾಗುತ್ತಿದ್ದರು.ತಮ್ಮ ಹಡಗಿನ್ನೂ ಬರದೇ ಇದ್ದವರು ನಿರಾಸೆಯಿಂದ ತಂಬೂ ಸೇರಿ ಮರುದಿನದ ನಿರೀಕ್ಷೆಯಲ್ಲಿಯೇ ನಿದ್ರಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ನಮ್ಮದೇ ತಂಬೂವಿನಲ್ಲಿದ್ದ ಪೆರುಮಾಳ್ ಈ ಎಲ್ಲ ಸಾಮಾನ್ಯ ಮಿಲಿಟರಿ ಮಂದಿಗಿಂತ ಭಿನ್ನನಾಗಿದ್ದ.ಯಾವಾಗಲೂ ಏನನ್ನಾದರೂ ಸುದ್ದಿ ಹೇಳಿ ಎಲ್ಲರನ್ನೂ ದಿಗ್ಭ್ರಮೆಗೊಳಿಸುವ ಆತ ತಂಬೂದಲ್ಲಿ ಎಲ್ಲರ ಲಕ್ಷ್ಯದ ಕೇಂದ್ರವಾಗಿದ್ದ.ನಾನಂತೂ ಆತನನ್ನು ತುಂಬ ಮೆಚ್ಚುತ್ತಿದ್ದೆ.ಯಾಕೆಂದರೆ ನಾನು ಆತನಿಗಿಂತ ಎಷ್ಟೋ ಕಿರಿಯನಾಗಿದ್ದರೂ ಆತ ಉಳಿದ ಆಫೀಸರರ ಹಾಗೆ ಜರ್ಬು ತೋರದೆ ನನ್ನೊಂದಿಗೆ ಆತ್ಮೀಯನಾಗಿ ವ್ಯವಹರಿಸುತ್ತಿದ್ದ.ಅಲ್ಲಿದ್ದ ಎಲ್ಲರಲ್ಲಿ ನಾವಿಬ್ಬರೇ ಇಂಗ್ಲಿಶ್ ಬಲ್ಲವರಾಗಿದ್ದು ಅನೇಕ ಸಲ ನಾವು ಯುದ್ಧದ ಬಗೆಗೊಂದೇ ಅಲ್ಲದೆ,ಮನುಷ್ಯ ಜೀವನದ ಅಳವಿನಲ್ಲಿ ಬರುವ ಅನೇಕ ಗಹನ ವಿಷಯಗಳ ಬಗ್ಗೆ ಗಂಭೀರವಾಗಿ ಸೈದ್ಧಾಂತಿಕವಾಗಿ ಚರ್ಚಿಸುತ್ತ ಮಧ್ಯರಾತ್ರಿಯವರೆಗೂ ಕುಳಿತಿರುತ್ತಿದ್ದೆವು. ಹೀಗೆ ಪೆರುಮಾಳನೊಂದಿಗೆ ಕಳೆದ ಹಲವಾರು ದಿನಗಳಲ್ಲಿ ನಾನು ಆತನ ಬಗ್ಗೆ ಗಮನಿಸಿದ ಕೆಲವು ಮುಖ್ಯ ಅಂಶಗಳೆಂದರೆ- ಮದ್ರಾಸಿನ ಉಪನಗರವೊಂದರಿಂದ ಬಂದ ಆತನಿಗೆ ಆತ ಅತ್ಯಂತ ಪ್ರೀತಿಸುವ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದರು. ಹಲವು ದಿನಗಳಿಂದ ಅದೇಕೋ ಆತನಿಗೆ ಮನೆಯಿಂದ ಪತ್ರ ಬಂದಿರಲಿಲ್ಲ.ಆದ್ದರಿಂದ ಆತನಿಗೆ ಯೋಚನೆಯಾಗಿತ್ತು.ಆದರೂ ಆತ ಎದೆಗುಂದಿರಲಿಲ್ಲ.ಯುದ್ಧರಂಗದಲ್ಲಿ ಬ್ರಿಟಿಶ್ ಆಫೀಸರರೂ ಮೆಚ್ಚಿ ಹೊಗಳುವಂಥ ಶೌರ್ಯ ತೋರಿದ ಧೀರಯೋಧ. ಅಂತಿಂಥ ಚಿಕ್ಕ ಪುಟ್ಟ ವಿಷಯಗಳಿಗೆ ಎದೆಗುಂದುವನೆ? -ಹಾಗೆಂದು ಪೆರುಮಾಳ್ ತನ್ನ ಸಾಹಸದ ಕತೆಗಳನ್ನು ಹೇಳಲು ಮೊದಲು ಮಾಡುತ್ತಿದ್ದ.ಸಿಂಗಾಪೂರದಾಚೆಯ ಸಮುದ್ರದಲ್ಲಿ ಆತನೊಬ್ಬನೇ ಜಪಾನೀ ಹಡಗೊಂದನ್ನು ಮುಳುಗಿಸಿದ್ದು; ಜಾವಾದಲ್ಲಿ ನಲ್ವತ್ತು ಜಪಾನೀ ಸೈನಿಕರಿದ್ದ ಟ್ರೂಪ್ಅನ್ನು ಕೇವಲ ಐದೇ ಸಂಗಾತಿಗಳೊಡಗೂಡಿ ಮಣ್ಣು ಮುಕ್ಕಿಸಿದ್ದು;ಎತ್ತರದ ಮರಗಳು ದಟ್ಟವಾಗಿ ಬೆಳೆದ