ಪುಟ:ನಡೆದದ್ದೇ ದಾರಿ.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೪

ನಡೆದದ್ದೇ ದಾರಿ

ಸುಮಾತ್ರದ ಒಳತೀರದಗುಂಟ ಶತ್ರುಸೈನಿಕರನ್ನು ಹಲವಾರು ಮೈಲು ಬೆನ್ನಟ್ಟ
ಓಡಿಸಿದ್ದು ; ಕಲ್ಕತ್ತೆಯಿಂದ ಉನ್ನತ ಬ್ರಿಟಿಶ್ ಆಧಿಕಾರಿಗಳಿದ್ದ ಹಡಗೊ೦ದು ರಂಗೂನಿನ ಕಡೆ ಬರುತ್ತಿದ್ದಾಗ ಅದನ್ನು ಹೊಡೆದುರುಳಿಸಲಿದ್ದ ಜಪಾನೀಯರ ತಂತ್ರವನ್ನು ಕಂಡು ಹಿಡಿದು ಸಕಾಲದಲ್ಲಿ ವಿ‌‍ಫಲಗೊಳಿಸಿ ಬ್ರಿಟಿಶ್ ಅಧಿಕಾರಿಗಳ ಜೀವ ಉಳಿಸಿದ್ದು ; ಹಲವಾರು ಪ್ರಸಂಗಗಳಲ್ಲಿ ಕಡಿದಾದ ದುರ್ಗಮವಾದ ಬೆಟ್ಟಕೊಳ್ಳಗಳ ಪ್ರದೇಶದಲ್ಲಿ ಒಬ್ಬನೇ ಹೋಗಿ ತುರ್ತು ಸ೦ದೇಶಗಳನ್ನು ಸಂಬಂಧಿಸಿದವರಿಗೆ ತಲುಪಿಸಿದ್ದು; ಹೀಗೆ ಹಲವಾರು ವೀರಗಾಥೆಗಳು. ಪೆರುಮಾಳನ ಗಂಡೆದೆಯ ಕತೆಗಳಿಗೆ ಕೊನೆಯೇ ಇರಲಿಲ್ಲ. ಅವನ್ನೆಲ್ಲ ಆತ ರಸವತ್ತಾಗಿ ಬಣ್ಣಿಸುತ್ತಿದ್ದರೆ ಕಿರಿಯನಾದ }ನಾನು ಬಾಯಿತೆರೆದು ಕಣ್ಣುಪಿಳುಕಿಸದೆ ಕೇಳುತ್ತ ಕೂಡುತ್ತಿದ್ದೆ. ಆತ }ಹೇಳುತ್ತಿದ್ದುದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ ವೆಂದು ನಮಗೆಲ್ಲ ಗೊತ್ತಿತ್ತುಶೀಘ್ರವೇ ಆತನಿಗೆ ಬಡ್ತಿ ಸಿಗುವುದೆಂದೂ ಎಲ್ಲರಿಗೆ ಗೊತ್ತಿತ್ತು. ದಕ್ಷಿಣ ಹಿಂದೂಸ್ತಾನದವರೇ ಆದ ಐದಾರು ಜನರಿದ್ದ ನಮ್ಮ ತಂಬೂವಿನಲ್ಲಿ ಹೀಗೆ ದಿನಾ ರಾತ್ರಿ ಪೆರುಮಾಳನ ಸುತ್ತ ಕೂತು ರೋಮಾಂಜಕರವಾದ ಆತನ ಸಾಹಸಗಳ ಅನುಭವಗಳನ್ನು ಕೇಳುವುದು, ನಂತರ 'ಎಂಟೆದೆಯ ಬಂಟ'ನೆಂದು ಆತನನ್ನು ಹೊಗಳುವುದು, ಈ ಕಾರ್ಯಕ್ರಮ ಮುಗಿದ ನಂತರವೇ ಮಲಗಲೆಂದು ನಮ್ಮ ನಮ್ಮ ಹೊರಸುಗಳನ್ನು ಸೇರುವುದು- ಇದು ನಮ್ಮ ನಿತ್ಯದ ರೂಢಿಯಾಗಿ ಬಿಟ್ಟಿತ್ತು. ಆಂತೂ ಕೊನೆಗೊಮ್ಮೆ ಒಂದು ರವಿವಾರ ಕಲ್ಕತ್ತೆಯ ಹಡಗು ಬರಲಿರುವುದೆಂದು ಎರಡುದಿನ ಮುಂಚಿತವಾಗಿ ಅಂದರೆ ಶುಕ್ರವಾರವೇ ನಮಗೆ ಸುದ್ದಿ ಬಂದಿತು. ಆ ಮಧ್ಯಾಹ್ನ ಊಟದ ನಂತರ ಎಲ್ಲರೂ ಪ್ಯಾಕಿಂಗ್ ಮಾಡಲು ತಂಬೂವಿನಲ್ಲಿ ಸೇರಿದಾಗ ನಮ್ಮಲ್ಲಿ ಎಲ್ಲರಿಗಿಂತ ವಯಸ್ಸಾದವನಾಗಿದ್ದ ಜಮಾದಾರ ಜೋಗಿಂದರ್ ಸಿಂಗ್ ಎಲ್ಲರೂ ಗಮನಿಸುವಷ್ಟು ವ್ಯಥಿತನಾಗಿ ಕಾಣಿಸಿದ. 'ಕ್ಯಾಹುವಾ ಜೋಗಿಂದರ‍್ ಭಾಯೀ ?' ಅಂತ ಕೇಳಿದಾಗ ಸದಾ ಮೌನಿಯಾಗಿರುತ್ತಿದ್ದ ಆತ ತನ್ನ ಸಂಸಾರದ ಗೋಳಿನ ಕತೆ ಹೇಳಿದ : ಮದುವೆಗೆ ಬಂದ ಮೂವರು ಹೆಣ್ಣುಮಕ್ಕಳು, ಹೊಳಗದ್ದೆಗಾಗಿ ಗಂಡು ಮಕ್ಕಳಲ್ಲಿ ಬಡಿದಾಟ, ಹೆಂಡತಿಗೆ ಸದಾ ಅದೇನೋ ಗುಣವಾಗದ ರೋಗ, ಪಂಜಾಬಿನ ಪೂರ್ವದ ಒಂದು ಮೂಲೆಯಲ್ಲಿರುವ ಆತನ ಹಳ್ಳಿಯಲ್ಲಿ ಸದಾ ರಾಜಕೀಯ ಒಳಜಗಳಗಳು, ಒಟ್ಟು ಮನ:ಶಾಂತಿಯಿಲ್ಲ... ಒಂದು ರೀತಿಯಿಂದ ಸೈನ್ಯದಲ್ಲಿನ ಅಸ್ಧಿರ ಬದುಕೇ ಹಾಯಾಗಿತ್ತು... ನಮಗೆಲ್ಲ ಆತನ ಬಗ್ಗೆ ಪಾಪ ಆನಿಸಿ ಮೌನವಾಗಿ ಸಹಾನುಭೂತಿ ಸೂಚಿಸಿ ಸುಮ್ಮನೆ ಕೂತೆವು . ಆಗ ಪೆರುಮಾಳ್ ಆತನಿಗೆ ಕೆಲವು ಮಾತು ಹೇಳಿದ. ಎಂತಹ ಮಾತುಗಳವು !