ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಿಡುಗಡೆ/ ಧೈರ್ಯದ ಮನುಷ್ಯ ೩೨೫
"ಮನುಷ್ಯನ ಜೀವನದಲ್ಲಿ ಎಲ್ಲ ಬಗೆಯ ಕಷ್ತಗಳು ಬರುತ್ತದೆ. ಆ ಕಷ್ತಗಳನ್ನು ಎದುರಿಸುವ ಶಕ್ತಿಯನ್ನು ನಾವು ಪ್ರಯತ್ನಪಪೂರ್ವಕವಾಗಿ ಮೈಗೂಡಿಸಿಕೊಳ್ಲಬೇಕು. ಅದು ಸಾಧ್ಯವಾಗದ ಮನುಷ್ಯನ ಬಾಳು ನಾಚಿಕೆಗೇಡು. ಕಷ್ಟಗಳು ಸಾಂಸಾರಿಕವಾಗಿರಬಹುದು ಅಥವಾ ಬಾಂಬು ದಾಳಿಯ ರೂಪದಲ್ಲಿರಬಹುದು ; ಕಷ್ಟಗಳ ಸ್ವರೂಪ ಯವುದೇ ಇರಲಿ, ಮನುಷ್ಯ ಮನಸ್ಸು ಮಾಡಿದರೆ, ಧೈರ್ಯ ಮಡಿದರೆ, ಎಲ್ಲ ಕಷ್ಟಗಳ ಮಧ್ಯದಲ್ಲೂ ಪಾರಾಗುವ ದಾರಿಯೊಂದು ಆತನಿಗೆ ಕಾಣುತ್ತದೆ. ಧೈರ್ಯವೆಂದರೆ 'ಬಂದದ್ದು ಬರಲಿ, ಅನುಭವಿಸೋಣ, ಇನ್ನೇನು ಮಾಡಲಿಕ್ಕಾಗುತ್ತದೆ ?' ಎಂಬ ಅನುರಕ್ತಿಯಲ್ಲ ; ಧೈರ್ಯವೆಂದರೆ 'ಆದದ್ದಾಗಲಿ, ನಶ್ವರವಾದ ಈ ಜೀವನದ ಬಗ್ಗ ಹೆದರಿಕೆ ಯಾಕೆ?' ಎಂಬ ವೈರಾಗ್ಯಭಾವವಲ್ಲ ; ಧೈರ್ಯವೆಂದರೆ 'ಇನೇನಪ್ಪಾ ಗತಿ ? ಈ ಸಂಕಷ್ಟಗಳಿಂದ ಹೇಗಾದರೂ ಮಾಡಿ ಪಾರಾಗಲೇಬೇಕು' ಎಂದು ಅರ್ಧ ಭಯದಿಂದಲೂ ಅರ್ಧ ಪಲಾಯನದ ಆಸೆಯಿಂದಲೂ ಕೂಡಿದ ಪ್ರಯತ್ನವಲ್ಲ. ನಿಜವಾದ ಧೈರ್ಯವೆಂದರೆ ಚಿತ್ತಚಾಂಚಲ್ಯವಿಲ್ಲದೆ ಬಂದುದನ್ನು ಎದುರಿಸಿ ಕಷ್ಟಗಳೋಡನೆ ಹೋರಾಡಿ ವಿಜಯಿಯಾಗಿಯೇ ತ್ರುಪ್ತಿ ಹೊಂದುವ ಮನೊಭಾವ. ಇಂಥ ಧೈರ್ಯ ಮನುಷ್ಯನಿಗೆ ಬೇಕು...
ಮಕ್ಕಳ ಲಗ್ನವಾಗದಿದ್ದರೇನು? ಹೊಲಮನೆ ಬೇಳು ಬಿದ್ದರೇನು? ಹೆಂಡತಿ ಸತ್ತರೇನು? ರಾಜಕೀಯ ಪಾರ್ಟಿಗಲಳು ಸತ್ಯಾನಾಷವಾದರೇನು? ಜಪಾನೀಯರು ಮತ್ತೆ ದುಪ್ಪಟ್ಟು ಶಕ್ತಿಯಿಂದ ಆಕ್ರಮಣ ಮಾಡಿದರೇನು? ಮೂರನೆಯ ಮಹಾಯುದ್ಧ ಈಗಲೇ ಸುರುವಾದರೇನು? ಈಗಿಂದೀಗ ಬಾಂಬು ದಾಳಿಯಾಗಿ ನಮ್ಮ ಇಡಿಯ ಕ್ಯಾಂಪೇ ಸುಟ್ಟು ಹೋದರೇನು? ಮನುಷ್ಯನಿಗೆ ಮುಖ್ಯವಾಗಿ ಧೈರ್ಯವಿರಬೇಕು, ಜೋಗಿಂದರಾಭಾಯೀ, ಧೈರ್ಯವಿರಬೇಕು..."
- ಪೆರುಮಾಳ್ನ ಮಾತುಗಳಲ್ಲಿ ಅಡಕವಾಗಿದ್ದ ಅಮೂಲ್ಯ ಸತ್ಯವನ್ನು ನನ್ನಷ್ಟಕ್ಕೆ ನಾನೇ ಮೆಲುಕು ಹಾಕುತ್ತ ನಾನು ಆ ದಿನವಿಡೀ ಕಳೆದೆ. * * *
ಆ ರಾತ್ರಿ ಎಂದಿನಂತೆ ಪೆರುಮಾಳನ ಸಾಹಸ ಕತೆಗಳನ್ನು ಕೇಳುವ ಕರ್ಯಕ್ರಮ ನಡೆಯಲಿಲ್ಲ. ಯಾಕೆಂದರೆ ಮೊದಲನೆಯದಾಗಿ ಎಲ್ಲರಿಗೂ ಊರಿಗೆ ಹೋಗುವ ಆತುರ, ಮನೆಯ ನೆನಪುಗಳು. ಎರಡನೆಯದಾಗಿ ಆ ಸಾಯಂಕಾಲ ಹೊರಗೆಲ್ಲೋ ಹೋಗಿದ್ದ ಪೆರುಮಾಳ್ ರಾತ್ರಿ ಹತ್ತು ಗಂಟೆಯಾದರೂ ತಂಬೂಕ್ಕೆ ಬಂದಿರಲಿಲ್ಲ. ಸಂಜೆ ಎಂಟರೊಳಗಾಗಿಯೇ ಎಲ್ಲರೂ ಊಟ ಮಾಡಬೇಕಿತ್ತಾದರೂ ಆತ ಊಟಕ್ಕೂ ಬಂದಿರಲಿಲ್ಲ. ಎಲ್ಲರೂ ಎಂಟುವರೆಯೊಳಗಾಗಿ ತಂಬೂ ಸೇರಬೇಕಿತ್ತಾದರೂ ಆತನ