ಬಿಡುಗಡೆ/ಧೈರ್ಯದ ಮನುಸಷ್ಯ ೩೨೭
ಸಂಗಾತಿಯೊಬ್ಬ ಒಂದು ವಿಷಯ ಹೇಳಿದ. ಪೆರುಮಾಳನ ಹೆಸರಿಗೆ ಆತನ ರೆಜಿಮೆಂಟಿನ ಆಡ್ರೆಸಿಗೆ ನಾಲ್ಕಾರು ದಿನಗಳ ಹಿಂದೆ ಮನೆಯಿಂದ ಪತ್ರವೊಂದು ಬಂದಿತ್ತು. ಅದನ್ನು ತಂದು ಆತ ಹಿಂದಿನ ದಿನವೇ ಪೆರುಮಾಳನಿಗೆ ಕೊಟ್ಟಿದ್ದ. ಆದರಲ್ಲೇನಾದರೂ... ಹೌದು, ಆತನ ಹೇಳಿಕೆಯಂತೆ ಪತ್ರ ಕಿಟ್ ಬ್ಯಾಗಿನ ಮೇಲ್ಭಾಗದಲ್ಲೇ ಇತ್ತು. ಆದರಲ್ಲಿನ ವಿಷಯ: ಕಳೆದ ಒಂದೂವರೆ ವರ್ಷಗಳಿಂದಲೂ ಕುಟುಂಬ ಪರಿಚಿತನೊಬ್ಬನೊಡನೆ ಆನೈತಿಕ ಸಂಬಂಧ ಹೊಂದಿದ್ದ ಪೆರುಮಾಳನ ಹೆಂಡತಿ ಈತ ಊರಿಗೆ ಬರುವ ವಿಷಯ ತಿಳಿದೊಡನೆ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿಬಿಟ್ಟಿದ್ದಳು. ಹಾಗೆಂದು ಪೆರುಮಾಳನಿಗೆ ಆತನ ತಮ್ಮ ಬರೆದು ತಿಳಿಸಿದ್ದ. ಬಹುಶಃ ಪೆರುಮಾಳನಿಗೆ ಹೆಂಡತಿಯ ಈ ವ್ಯವಹಾರದ ವಾಸನೆ ಕೆಲದಿನಗಳ ಹಿಂದೆಯೇ ಬಡಿದಿರಬಹುದು. ಆಂತೆಯೇ ಆಕೆಯ ಪ್ರಿಯಕರನ್ನು ಬಹುಶಃ ಮುಗಿಸಿಬಿಡಲೆಂದೋ ಏನೋ ಆತ ಹ್ಯಾಂಡ್ ಗ್ರೆನೇಡುಗಳನ್ನು ಆದು ಹೇಗೋ ಕಣ್ತಪ್ಪಿಸಿ ಕಿಟ್ ಬ್ಯಾಗಿನಲ್ಲಿ ರಿಸಿಕೊಂಡಿರಬಹುದು. ಆದರೆ ಹೆಂಡತಿಯೇ ಓಡಿಹೋಗಿರುವಳೆಂದ ಮೇಲೆ ಯಾವುದರಲ್ಲೂ ಏನು ಅರ್ಥವಿಲ್ಲವೆನಿಸಿ, ನಾಚಿಕೆ-ನೋವು-ಅವಮಾನದಿದ ಆತ ತಾನೇ ಸಾವನ್ನಪ್ಪಿರಬಹುದು... ಬಹುದು...
-ಯೋಚನೆ-ತರ್ಕಗಳಿಂದ ನನ್ನ ತಲೆ ಸಿಡಿಯುತ್ತಿತ್ತು. 'ಮನುಷ್ಯನಿಗೆ ಧೈರ್ಯವಿರಬೇಕು... ನಿಜವಾದ ಧೈರ್ಯವೆಂದರೆ ಹೋರಾಟದಲ್ಲಿ ವಿಜಯಿಯಾಗಿಯೇ ತೃಪ್ತಿ ಹೊಂದುವ ಮನೋಭಾವ. ಇಂತಹ ಧೈರ್ಯವಿಲ್ಲದ ಮನುಷ್ಯನ ಬಾಳು...' ಪೆರುಮಾಳನ ಗಡಸು ಗಂಭಿರ ಧ್ವನಿ, ಧೈರ್ಯದ ಬಗೆಗಿನ ಆತನ ಹಲವಾರು ವ್ಯಾಖ್ಯೆಗಳು, ಆತನ ಕೊನೆ-ಮೊದಲಿಲ್ಲದ ಸಾಹಸ ಕತೆಗಳು- ಈ ಎಲ್ಲವನ್ನೂ ಆ ನಾಲ್ಕು ಸಾಲಿನ ಪತ್ರ ಅಣಕಿಸುತ್ತಿತ್ತು... ಮನುಷ್ಯ ಜೀವನದ ಈ ಆಗಾಧ ವ್ಯಂಗ್ಯದ ಬಗೆಗೆ ವಿಭ್ರಮ ಪಡುತ್ತಲೆ ಮರುದಿನ ನಾನು ಕಲಕತ್ತೆಯ ಹಡಗನ್ನೇರಿದೆ.
(೧೯೮೩)