ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೧

                                                              ಗಂಡಸರು
                                                                   ೧
                         ಸಂಜೆ ಎಂದಿನಂತೆ ಶಾಲೆಯಿಂದ ಬಂದು ಕೈಕಾಲು ಮುಖ ತೊಳಕೊಂಡು ತಿಂಡಿ
                 ತಿಂದು ಕುಣಿತದ ನಡಿಗೆಯಲ್ಲಿ ಆಕೆ ಅಟ್ಟದ ಮೇಲಿನ ತನ್ನ ರೂಮಿಗೆ ಬರುತ್ತಿದ್ದಾಗ,
                 ರೂಮಿನಲ್ಲಿ ಯಾರೋ ಪುಸ್ತಕಗಳನ್ನು ಕಿತ್ತಾ ಡುತ್ತಿದ್ದ ಸದ್ದು ಕೇಳಿಸಿ ಆಕೆಗೆ ವಿಪರೀತ
                 ಸಿಟ್ಟು ಬಂತು. ಗೋಪೀನೇ ಇರಬೇಕು. ಎಷ್ಹು ಸಲ ಹೇಳಿಲ್ಲ ಅವನಿಗೆ ತನ್ನ
                 ಕಪಾಟಿನಲ್ಲಿನ ಪುಸ್ತಕ ಮುಟ್ಟಬೇಡ, ನಿನಗೆ ಸ್ಪ್ಯಾಂಪ್ ಅಥವಾ ಪುಸ್ತಕದ
                ಹಾಳೆಯಲ್ಲಿಟ್ಟ ನವಿಲುಗರಿ ಬೇಕಾಗಿದ್ದರೆ ನನ್ನನ್ನು ಕೇಳು, ಕೊಡುತ್ತೇನೆ ಆಂತ?
               ಇವತ್ತು ಚೆನ್ನಾಗಿ ಎರಡೇಟು ಹಾಕಿಯೇ ಬಡಬೇಕು. ಹೋಗಿ ಅಮ್ಮನಿಗೆ ಹೇಳಲಿ
               ಬೇಕಾದರೆ. ಆಮ್ಮನೇನೂ ನನಗೆ ಬೈಯುವುದಿಲ್ಲ.
                         ಹಾಗೆಂದುಕೊಳ್ಳುತ್ತಾ ಆಕೆ ಸದ್ದಾಗದಂತೆ ರೂಮು ಪ್ರವೆಶಿಸಿ ಅಲ್ಲೇ ಇದ್ದ
               ರೂಲು ಕಟ್ಟಿಗೆ ತೆಗೆದುಕೊಂಡು ಮೆಲ್ಲನೆ ಹೆಜ್ಜೆಯಿಡುತ್ತ ಹೋಗಿ ಕಪಾಟಿನ ಬಾಗಿಲ
               ಹಿಂದೆ ಅರೆಮರೆಯಾಗಿ ಕೂತಿದ್ದ ನೀಲಿ ಶರ್ಟಿನ ಬೆನ್ನಮೇಲೆ ರಪ್ ಎಂದು
               ಬಾರಿಸಿಬಿಡಲು ಕೈ ಎತ್ತುತ್ತಿರುವಂತೆಯೇ- ಸರ್ರನೆ ಹೊರಳಿ ನೋಡಿ 
               ರೂಲುಕಟ್ಟಿಗೆಯೊಂದಿಗೆ ಅವಳ ಕೈಯನ್ನೂ ಬಿಗಿಯಾಗಿ ಹಿಡಿದುಕೊಂಡು ಎದ್ದು ನಿಂತ
               ಶಂಕರ.
                   "ಓಹ್ ನೀನು? ನೀ ಯಾಕ ನನ್ನ ಕಪಾಟು ತಗದೀ? ನೀ ಯಾವಾಗ ಬಂದಿ
               ಇಲ್ಲೆ ಕಳ್ಲನ್ಹಾಂಗ? ನಾ ಗೋಪಿ ಆಂತ ತಿಳಿದಿದ್ದೆ."- ಕೈ ಬಿಡಿಸಿಕೊಳ್ಳಲು 
               ಪ್ರಯತ್ನಿಸುತಾ ಆಕೆ ಅಂದಳು, ಗೋಪಿ ಅಲ್ಲವಲ್ಲ ಸದ್ಯ, ಸಾಮಾನಿಗೇನೂ
               ಧಕ್ಕೆಯಿಲ್ಲ, ಅಂತ ಸಮಧಾನದೊಂದಿಗೆ. ಅವಳ ಕೈ ಬಿಡದೆಯೇ ಬಾಗಿ ಅವಳ
               ಕಣ್ಣುಗಳನೇ ನೋಡುತ್ತ ನಗುತ್ತ ಅಂದ ಶಂಕರ,"ಕಳ್ಲ ಯಾಕ? ನಾಯೇನ 
               ಹೊರಗಿನಾಂವೇನು? ಕಳ್ಳತನ್ನ ಮಾಡೂವಂಥಾ ಕಿಮ್ಮತ್ತಿನ ಸಾಮಾನು ಬ್ಯಾರೇ ಅವು
               ಅಂಧಾಂಗಾತು ನಿನ್ನ ಹತ್ತರ."
                      "ಕೈಬಿಡು, ನೀ ಹೊರಗಿನಂವಾ ಅರೇ ಇರ್ಲಿ, ಒಳಗಿನಂವಾ ಅರೇ ಇರ್ಲಿ, ನನ್ನ
              ಕಪಾಟು- ನನ್ನ ಸಾಮಾನು ಮುಟ್ಟಬ್ಯಾಡ ನೋಡು."ಅಸಮಾಧಾನದಿಂದ