ಪುಟ:ನಡೆದದ್ದೇ ದಾರಿ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು / ಅತಿಥಿ

೨೭

ನಗೆಯ ಕಹಿ ಸರೋಜಿನಿಯ ಗಮನಕ್ಕೆ ಬಂದಿದೆ. ಅವಳ ಮುಖ ಚಿಕ್ಕದಾಗಿದೆ.
ಅಡ್ದಿಯಿಲ್ಲ,ಹಸಿವು ಎಷ್ಟೋ ಕಡಿಮೆಯಾದಹಾಗಾಯಿತು ಎರಡು ನಿಮಿಷದ ಕೆಲಸ ಊಟ.ಈ ಹುಡುಗಿಯರು ಎರಡು ತಾಸು ಡೈನಿಂಗ್
ಹಾಲಿನಲ್ಲಿ ಕೂತಿರುತ್ತಾರಲ್ಲ,ಏನು ಕತ್ತೆ ಕಾಯುತ್ತಾರೋ!
ಎರಡು ನಿಮಿಷದ ಕೆಲಸ ಮುಗಿದಾದ ನಂತರ ಮಲಗುವ ಮೊದಲು
ಮಾಡಿ ಮುಗಿಸಬೇಕಾಗಿರುವುದು ಇನ್ನೊಂದು ಮಹತ್ವದ ಕೆಲಸ-ರಾತ್ರಿಯ ರೌಂಡ
ಹಾಕಿ ಬರವುದು ಹಾಸ್ಟೆಲಿನಲ್ಲಿ.ಅಲ್ಲಷ್ಟು-ಇಲ್ಲಷ್ಟು ನಿಂತು,ಅವಳ ಸುದ್ದಿ ಇವಳಿಂದ
ಕೇಳಿ,ಇವಳ ಸುದ್ದಿ ಅವಳಿಗೆ ಹೇಳಿ,ಯಾರ್ಯಾರಿಗೆ ಬಾಯ್ ಫ್ರೆಂಡ್ಸ್ ಇರುತ್ತಾರೋ
ಅವರನ್ನೆಲ್ಲ ಕಾಳಜೀಪೂರ್ವಕವಾಗಿ ಒಂದು ನೆವ ಹುಡುಕಿ ತೃಪ್ತಿಯಾಗುವಂತೆ
ಬೈಯ್ದು,ತನ್ನ ರೂಮು ಸೇರುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆಯಾಗಿರುತ್ತದೆ.
ಆಗಲೇ ತನಗೆ ಸುಖನಿದ್ರೆ ಬರುವುದು.ಇದರಲ್ಲೆಂದೂ ಏನೂ ಕಡಿಮೆಯಾಗಕೂಡದು
ಸಾಲಾಗಿದ್ದ ಬಾಗಿಲುಗಳು-ಕೆಲವು ಮುಚ್ಚಿವೆ,ಕೆಲವು ತರೆದಿವೆ,ಕೆಲವು
ಅರ್ಧಮರ್ಧ ಮುಚ್ಚಿ ತೆರೆದಿವೆ.ಯಾವಯಾವವೋ ಇಂಗ್ಲಿಷ್,ಹಿಂದಿ,ನಡುನಡುವೆ
ಕನ್ನಡ ಸಿನೆಮಾ ಹಾಡಿನ ಧ್ವನಿ ಕೇಳಿಬರುತ್ತವೆ.ಕಲಲ್ಲಿಯ ಸ್ಲಿಪರ್ಸ್ ಸದ್ದಾಗದ
ಹಾಗೆ,ಒಳಗಿನಿಂದ ಕೇಳಿಬರುವ ಹುಡುಗಿಯರು ಪಿಸುಧ್ವನಿಗಳನ್ನು ಕದ್ದು ಆಲಿಸುತ್ತ,
ಆ ಕಾರಿಡಾರ್ನೊಳಗಿನಿಂದ ನಡೆದು ಬರುವುದೆಂದರೆ ಫ್ರೊ.ಲೀಲಾವತಿಗೆ ಬಹಳ ಪ್ರೀತಿ.
ಸುತ್ತಲೂ ಯಾರೂ ಇಲ್ಲವೆಂದು ಖಚಿತವಾದರೆ ಆಕೆ ಬಳುಕಿ ನಡೆಯುವ
ಪ್ರಯತ್ನವನ್ನೂ ಮಾಡುತ್ತಾಳೆ.
ಅಲ್ಲ,ತನಗೇನು ಅಂಥ ಆಗಬಾರದ ವಯಸ್ಸಾಗಿದೆ?ಮದುವೆಯಾದರೆ,
ಹನ್ನೆರಡು ಮಕ್ಕಳಾದರೆ ಮಾತ್ರ ಹೆಂಗಸರು ಸೌಂದರ್ಯವನ್ನು ಕಳೆದುಕೊಂಡು
ಮುದುಕಿಯರ ಹಾಗೆ ಕಾಣುವುದು.ತನಗೆ ಆ ಯಾವ ತಾಪತ್ರಯವೂ ಇಲ್ಲ.ತನ್ನ
'ಫಾರ್ಮು' ಕೆಡಲು ಕಾರಣವೇ ಇಲ್ಲ.ತಾನಿನ್ನೂ ಸಣ್ಣ ಹುಡುಗಿಯ ಹಾಗೆ
ಕಾಣುವೆನೆಂದು ಮೊನ್ನೆ ಪ್ರಿನ್ಸಿಪಾಲರೇ ಹೇಳಲಿಲ್ಲವೆ?ಹಾಗೆ ನೋಡಿದರೆ ತಾನೇನು
ಅಂಥಾ ಪರಿ ದಪ್ಪಗೂ ಇಲ್ಲ.....
ಕುಣಿತದ ನಡಿಗೆಯಲ್ಲ ಮುಂದುವರಿದಿದ್ದ ಫ್ರೊ.ಲೀಲಾನನ್ನು ಇಪ್ಪತ್ತನೇ
ನಂಬರು ರೂಮಿನಲ್ಲಿಂದ ಕೇಳಿಬಂದ ಮಾತು ಹೊಡೆದು ನಿಲ್ಲಿ ಸಿದಂತಾಯಿತು.
'ಹಂಗಾರ ನಾಳೆ ಸಂಜೀನ್ಯಾಗ ಪಿಕ್ಚರಿಗೆ ಹೋಗೋದು ಡೆಫಿನಿಟ್ ಹೌದಲ್ಲೊ ?
ದಾದೀಮಾ ಆಂತೂ ಲೇಟಾಗಿ ಬರತಾಳ'.
ಯಾರದು ಈ ಧ್ವನಿ?ಇಂಗ್ಲೇಷ ಬಿ.ಎ.ಮಾಡುತ್ತಿರುವ ಲೂಸಿಯದೆ?