ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಗಂಡಸರು ೩೩೭

      "ಶಾಂತೀ,ನಿನಗ ನೆನಪದ ಏನು ನೀ ನನಗ ಬರದ ಮೊಟ್ಟ ಮೊದಲನೇ ಪತ್ರ ?" -ಸ್ಟೇಶನ್ ರೋಡಿನ ಗುಂಟ ಸಂಜೆ ತಿರುಗಾಡಿ ಮರಳಿ ಬರುತ್ತಿದ್ದಾಗ ಕೇಳಿದ್ದ ಶಂಕರ.
      "ಹ್ಞೂ" ಅನ್ನುತ್ತಿದ್ದಂತೆ ಶಾಂತಿಗೆ ನಗು ಬಂತು.
      "ಏನು ನಿನ್ನ ಸ್ಪೆಲಿಂಗು. ಏನು ನಿನ್ನ ಗ್ರ್ಯಾಮರ್.... ರಾಮ ರಾಮ ! ಆದರ ಶಾಂತೀ, ಎರಡೇ ವರ್ಷದಾಗ ನೀ ಭಾಳ ಸುಧಾರಿಸಿದೀ ನೋಡು. ಈಗ ಅಗದೀ ಫಸ್ಟ್ ಕ್ಲಾಸ್ ಪತ್ರಾ ಬರೀತಿ. ಓದಿಕೋತ ಕೂತರ ನನಗೆ ನಿದ್ದಿ-ನೀರಡಕೀನ ಮರ್ತ ಹೋಗ್ತದ"ಶಂಕರನ ಧ್ವನಿಯಲ್ಲಿ, ಕಣ್ಣಲ್ಲಿ, ಇಡೀ ಮೈಯಲ್ಲಿ ತುಂಟ ನಗು.
      "ಎಲ್ಲಾ ಮರ್ತು ಹಂಗs ಕೂತಿ ಅಂದ್ರೆ ಪರೀಕ್ಷಾ ಹ್ಯಾಂಗ ಪಾಸಾಗ್ತೀ ? ಈಸರೆ ನಿಂದು ಫೈನಲ್, ಅದರಾಗ ಢಂ ಅಂದೀ ಅಂದರ ನಿನ್ನ ಮಾತಾಡ್ಸೂದೇ ಇಲ್ಲ ನಾನು. ಫಸ್ಟ್ ಕ್ಲಾಸ್ ಬರ್ಬೇಕು ನೀನು."
      "ನೀ ನನ್ನನ್ನ ಪ್ರೀತಿ ಮಾಡ್ತೀಯೋ ಏನು ನನ್ನ ಫಸ್ಟ್ ಕ್ಲಾಸು ಪ್ರೀತಿ ಮಾಡ್ತಿಯೋ?"
      "ನಿನ್ನನ್ನ ಪ್ರೀತಿ ಮಾಡ್ತೀನಿ ಮಾರಾಯಾ, ಅದಕ್ಕs ನೀ ಫಸ್ಟ್ ಕ್ಲಾಸ್ ಬರಬೇಕೂ ಅಂತೀನಿ."
      "ಶಾಣ್ಯಾಕಿ ಇದ್ದೀ ಹ್ಞಾ ಮಾತಿನ್ಯಾಗ. ಲಗ್ನಾ ಮಾಡಿಕೊಂಡ ಮ್ಯಾಲೆ ನನ್ನ ಬುಟ್ಟೀಯೊಳಗೆ ಇಟಗೊಂಡು ಮಾರಿಕೊಂಡು ಬರ್ತೀ ನೋಡು" -ಹಾಗನ್ನುತ್ತ ಆತ ತನ್ನ ಬಲಗೈಯನ್ನು ಅಕೆಗೆ ಬೆನ್ನು ಬಳಸಿ ಭುಜದ ಮೇಲಿಡಲು ಯತ್ನಿಸುತ್ತಿರುವಂತೆ ತಟ್ಟನೆ ದೂರ ಸರಿದು ಆಕೆ ಸಿಡುಕಿನಿಂದ ಅಂದಳು.
      "ಶಂಕರ, ನಿನಗ ಹಜಾರಬ್ಯಾರೆ ಹೇಳೀನಿ, ನನ್ನ ಮುಟ್ಟೂದು-ಗಿಟ್ಟೂದು ನನಗೆ ಪಸಂದ ಇಲ್ಲಾ ಅಂತ."
      ಕೈ ಹಿಂತೆಗೆದುಕೊಂಡು ನಗುತ್ತ ಆತ ಕೇಳಿದ,
      "ಲಗ್ನಾದ ಮ್ಯಾಲೇ ?"
      "ಆದಮ್ಯಾಲೂ ಎಷ್ಟೋ ಅಷ್ಟೆ, ಕೈ-ಗೈ ಮುಟ್ಟಿದರ ಹರಕತ್ತಿಲ್ಲ. ಅದಕ್ಕೂ ಹೆಚ್ಚಿನದು ಮಾತ್ರ ನನಗ ಸೇರೋದಿಲ್ಲ. ಛಿ, ಅಸಹ್ಯ. ನೀ ಈ ಕಂಡೀಶನ್ ಕ ಒಪ್ಪಿದರs ನಿನ್ನ ಲಗ್ನಾಗ್ತೀನಿ ಅಂತನೂ ಹೇಳೀನಿ ನಿನಗ. ನೆನಪದ ಇಲ್ಲೋ?"
      "ನೆನಪದ ಮಾರಾಯಳ. ಆದರ ಈ ಹುಚ್ಚುಚ್ಚಾರ ಕಂಡೀಶನ್ನಿನ ಅರ್ಥರೆ ಏನು?"
      ಆಕೆಯ ಧ್ವನಿ ಒಮ್ಮೆಲೆ ಸೀರಿಯಸ್ಸಾಯಿತು. "ನಿನಗೆ ಇದು ಹುಚ್ಚುಚ್ಚಾರ