ಕಿರುಕಾದಂಬರಿಗಳು/ಗಂಡಸರು ೩೩೯ "ಗಂಡಸ್ರನ್ನೆಲ್ಲಾ ಆದಷ್ಟು ದೂರ ಇಡೂದs ಛಲೋ."
***
"ಕಾಂಗ್ರ್ಯಾಚುಲೇಶನ್ಸ್,ಮಿಸ್ ಕಾಮತ್,ನಿಮ್ಮ ಭಾಷಣ ಆಗಿದೀ ಎಕ್ಸ್ಲಂಲಂಟ್ ಇತ್ತು." -ಕಾಲೇಜಿನ ವಾರ್ಷಿಕ ಚರ್ಚಕೊಟದ ಸಮಾರಂಭದ ಮುಗಿಸಿಕೊಂಡು.ಗೆಳತಿಯರ ಅಭಿನಂದನೆ ಸ್ವೀಕರಿಸಿ,ಅವರಿಂದ ಬೀಳ್ಕೊಂಡು ಶಾಂತಿ ಒಬ್ಬಳೇ ಮನೆಯ ದಾರಿ ಹಿಡಿದಾಗ ಅವಳ ಹಿಂದಿನಿಂದಲೇ ಅಷ್ಟು ಹೊತ್ತಿನಿಂದಲೂ ನಡಕೊಂಡು ಬಂದಿದ್ ಪ್ರೊಫೆಸರ್ ಮಠದ ಹೇಳಿದ -ತುಂಬ ಸ್ಟೈಲಿಶ್ ಆಗಿ. "ಥ್ಯಾಂಕ್ಯೋ ಸರ್" ಅಂದಳು ಆಕೆ ಹೆಮ್ಮೆಯಿಂದ. ಅವಳೊಂದಿಗೇ ನಡೆದುಬರುತ್ತ ಆತ ಮುಂದುವರಿಸಿದ,"ನಮ್ಮ ಹಿಂದುಸ್ಥಾನದಾಗ ಹೆಂಗಸರಿಗೆ ಖರೇ ಅರ್ಥದಾಗ ಸ್ವಾತಂತ್ರ್ಯ ಸಿಕ್ಕೈತೇನು ಅನ್ನೂದು ನಾವೆಲ್ಲಾ ಸೀರಿಯಸ್ಲೀ ವಿಚಾರ ಮಾಡಬೇಕಾದಂಥಾ ವಿಷಯ.ಅವರಿಗೂ ವೋಟು ವ್ಹೋಟು ಹಾಕೂ ಅಧಿಕಾರ ಐತಿ. ಸಾಲೀಕಾಲೇಜ ಕಲಿಯೂ ಅಧಿಕಾರ ಐತಿ,ನೌಕರೀ ಮಾಡೋ ಅಧಿಕಾರ ಐತಿ,ಖರೇ.ಅದರ ನಮ್ಮ ದೇಶದಾಗಿನ ಗಂಡಸ್ರು ನೀವು ಹೇಳಿಧಾಂಗ ಮನುವಿನ ಮೊಮ್ಮಕ್ಕಳು. ಖರೇ ಅರ್ಥದಾಗ ಹೆಂಗಸಿಗೆ ಸ್ವಾತಂತ್ರ್ಯ ಸಿಗ್ಲಿಕ್ಕೆ, ಈ ಮರಿಮನುಗಳು ದಬ್ಬಾಳಿಕಿಯಿಂದ ಹೆಂಗಸು ಪಾರಾಗ್ಲಕ್ಕೆ ಇನ್ನೂ ಎಷ್ಟು ಕಾಲ ಬೇಕೋ. ನೀವು ಹೇಳಿದ ಪಾಯಿಂಟ್ಸ್ ನನಗೆ ಭಾಳ ಪಸಂದಾದ್ವು." "ಖರೇನs ಸರ್? ನಮ್ಮ ದೇಶದಾಗ ಅಗದೀ ಕಡಿಮಿ ಗಂಡಸ್ರಿಗೆ ಈ ಐಡಿಯ ಪಸಂದಾಗೋದು." "ನನಗೆ ಮಾತ್ರ ನಿಮ್ಮ ಐಡಿಯಾ ಅಗದೀ ಪಸಂದಾತು. ನಮ್ಮ ಹೆಂಗಸರು ನಿಮ್ಹಾಂಗ bold ಆಗಬೇಕು. "ಮಠದ್ ನಕಣ್ಣಲ್ಲಿ ಪ್ರಶಂಸೆಸ್ಟಷ್ಟವಾಗಿ ಮಿನುಗುತ್ತಿತ್ತು.
***
"ಯಾಕ ಶಂಕರ್. ಅಗದೀ ಸೀರಿಯಸ್ಸಾಗಿ ಬಿಟ್ಟೀಯಲಾ ಈ ಸರೆ ? ಧೊಡ್ಡ ನೌಕರೀ ಸಿಕ್ಕಿತು ಅಂತ 'ಗ' ಬಂತೇನು ನಿನಗ ?" "ಶಾಂತೀ, ನಾ ನಿನಗ ಒಂದೆರಡು ಮಾತು ಹೇಳ್ತೀನಿ, ನೆನಪಿನ್ಯಾಗಿಟಕೋ. ನೀ ಕಾಲೇಜಿನ್ಯಾಗ ಮತ್ತು ಸುಡಗಾಡು ಸಭಾದಾಗ, ಅಲ್ಲೆ-ಇಲ್ಲೆ ಭಾಷಣಾ ಮಾಡೂದು ಇನ್ನ ಬಂದ ಮಾಡು. " "ಯಾಕ ? ಯಾಕ ಶಂಕರ ?" ಅವಳಿಗೆ ಎಲ್ಲಿಲ್ಲದ ಅಚ್ಚರಿ, ಆಂತಕ, "ಯಾಕಂದರ ಅದೆಲ್ಲಾ ಮರ್ಯಾದಸ್ಥ ಹೆಂಗಸರ ಕೆಲಸವಲ್ಲ. ಸ್ತ್ರೀ ಸ್ವಾತಂತ್ರ್ಯ,