ಪುಟ:ನಡೆದದ್ದೇ ದಾರಿ.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೦ ನಡೆದದ್ದೇ ದಾರಿ ಮಣ್ಣು-ಸುಡುಗಾಡು ಅಂತ ಎಲ್ಲೆ ಬೇಕಾದಲ್ಲೆ ಹೋಗಿ ಬಾಯಿಗೆ ಬಂದದ್ದು ಒದರಿ ಬರೂದು ಇನ್ನ ಬಿಟ್ಟಬಿಡು.ನನಗದೆಲ್ಲಾ ಪಸಂದಿಲ್ಲ. "ಆದರ ಯಾಕ ಪಸಂದಿಲ್ಲ ನಿನಗ? ಇದ್ದ ಮಾತು ಇದ್ದಾಂಗ ಹೇಳೂದ್ರಾಗ ತಪ್ಪೇನದ?"-ಅವಳಿಗೆ ಆಳುವೇ ಬಂದಿತ್ತು. "ತಪ್ಪು?ಆಂಥದೆಲ್ಲಾ ನಮಮ್ಮವ್ವಗ ಸೇರೂದಿಲ್ಲ." "ಓ!"

"ಶಾಂತೀ,ಇದೇನು ನಿನ್ನ ಎಲ್ಲಾ ನೋಟ್ ಬುಕ್ಕಿನ್ಯಾಗೂ 'ಶ್ರೀ ಶಂಕರ ಪ್ರಸನ್ನ' ಅಂತ ಬರದೀಯಲ್ಲ,ನಿನಗ ಶಿವನಮ್ಯ್ ಲೆ ಇಷ್ಹ ಭಕ್ತಿಯೇನು?"-ಸಹಪಾರಿಯೊಬ್ಬಳು. "ಹೂ ಮತ್ತ, ಶಿವನೇ ಆಲ್ಲೇನು ಮೂರುಲೋಕದ ಸ್ವಾಮಿ?" "ನಿನ್ನ ನೋಟ್ ಬುಕ್ಕಿನ್ಯಾಗ,ಎಲ್ಲಾ ಟೆಕ್ಸ್ವ್ ಬುಕ್ಕಿನ್ಯಾಗ, ನಿನ್ನ ರೊಮಿನ ಗೋಡೇ ಮ್ಯೊಲೆ, ಕಪಾಟಿನ ಬಾಗಿಲ ಮ್ಯ್ ಲೆ ಮೂರು ಲೋಕದ ಸ್ವಾಮಿನೋ ಆಥ್ ವಾ...." "ನನ್ನ ಸ್ವಾಮಿ ಅನ್ನೊದಂತೊ ಖರೇ. ಮೂರು ಲೋಕದ ಸುದ್ದಿ ನನಗ ಗೊತ್ರಿಲ್ಲ"-ಅಂದು ಶಾಂತಿ ನಕ್ಕಿದ್ದಳು.

ಮುಂದೊಮ್ಮೆ ಸಂಜ಼ೆ ಶಾಂತಿ ಕಾಲೇಜ಼ನಿಂದ ಮನೆಗೆ ಬಂದು ತನ್ನ ರೂಮಿಗೆ ಹೋಗಲು ಮಹಡಿಯ ಕಡೆ ತಿರುಗಿದಾಗ ಆಕೆಗೆವ್ಹೆರಾಂಡಾದಲ್ಲಿ ಕೂತು ಆಪ್ಪ-ಆಮ್ಮ ಏನೋ ಗುಸುಗುಸು ನಡೆಸಿದ್ದು ಕೇಳಿಸಿತು. ನಡುವೆ ತನ್ನ ಹೆಸರು ಕೇಳಿಸಿದ್ದರಿಂದ ಆಕೆ ಆಲ್ಲೇ ಮರೆಗೆ ನಿಂತಳು."ನನಗ ಗೊತ್ತಿತ್ತು ಆ ಸೂಳೆಮಗಾ ಹಿಂಗ ಕೈ ಕೊಡ್ತಾನಂತ. ನಾ ಮೊದ್ಲ s ಹೇಳಿದ್ದೆ ನಿನಗ- ಇದು ಆಗೋ ಮಾತಲ್ಲ ಅಂತ. ನೀ ಕೇಳ್ಲಿಲ್ಲಾ"-ಆಪ್ಪನ ಧ್ವನಿಯಲ್ಲಿ ಸಿಟ್ಟು, ದುಃಖ, ಆಸಹಾಯಕತೆ. "ಅಲ್ಲ, ನಮ್ಮ ಹುಡುಗಿಗೆ ಏನು ಕಡಿಮೆ ಆಗೇದಂತ ಒಲ್ಲೆ ಅಂದ್ರು ಅವ್ರು? ನೀವು ಶಂಕರನ್ನ s ಕೇಳಬೇಕಾಗಿತ್ತು ಡೈರೆಕ್ಟ್ ಆಗಿ ?"- ಅಮ್ಮನ ಧ್ವನಿಯಲ್ಲಿ ಕಣ್ಣೀರು. "ಶಂಕರನೂ ಅಲ್ಲೇ ಇದ್ದಾ. ಆವನ ಅಪ್ಪನೂ ಇದ್ದಾ. ನಮ್ದೂ-ನಿಮ್ದೂ ಗೆಳತನಾ ಇರಿ. ಈ ಸಂಬಂಧ ಬ್ಯಾಡ,ಆಂದ್ರು. ಹುಡುಗಿ bold ಇದ್ದಾಳಂತ, ಭಾಳ ಕಲತಾಳಂತ,ಏನೋ ಹಿಂಗ s ಅಥ೯ ಇಲ್ಲದ್ದು ಬೊಗಳಿದ್ರು.ಆಕೀನ್ನ ಮಾಡಿಕೊಳ್ಳೊದು ನಮ್ಮ ಯೇಗ್ಯತಾ ಆಲ್ಲ ಆಂದ್ರು.ನಮ್ಮ ದೊಡ್ಡ ಸಂಸಾರ.