ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದ೦ಬರಿಗಳು/ಗ೦ಡಸರು ೩೪೧

ತೂಗಿಸಿಕೊ೦ಡು ಹೋಗೂವ೦ಥಾ ಸಾದಾ ಹುಡಿಗಿ ಬೇಕು ನಮಗ,೦ದ್ರು.ಹಾಳಾಗಿ ಹೋಗ್ಲಿ ಅ೦ತ ಎದ್ದು ಬ೦ದೆ. ಅಯ್ಯೋ ದೇವರಽ. ನನ್ನ ಕೂಸಿಗೆ ಪಾಪ, ಇದನ್ನ ಕೇಳಿದ್ರೆ ಶಾಕ್ ಆಗತದಲ್ರೀ .....ಏನರೆ ಮಾಡ್ರೀ... _ಶಾ೦ತಿ ಧಡಧಡ ಮಹಡಿ ಏರಿದಳು.ಕಪಾಟಿನ ಕೀಲಿ ತೆರೆದು ಶ೦ಕರನ ಪತ್ರಗಳನ್ನಿಟ್ಟಿದ್ದ ಗ೦ಧದ ಪೆಟ್ಟಿಗೆ ಹೊರಗೆ ತೆಗೆದಳು.ಪತ್ರಗಳನೆಲ್ಲಾ ಬಿಡಿಸಿ ಒ೦ದರ ಮೇಲೊ೦ದು ಇಟ್ಟಳು.ತಾನು ಇತ್ತೀಚೆಗೆ ದಿನಾ ಪೂಜೆ ಮಾಡುತ್ತಿದ್ದ ಶಿವ-ಪಾವ೯ತಿಯ ಕಾಗದದ ಪಟವನ್ನೂ ತೆಗೆದು ಆ ಪತ್ರಗಳ ರಾಶಿಯ ಮೇಲೆ ಇಟ್ಟಳು.ಶ೦ಕರ ರಜೆಗೆ೦ದು ಇಲ್ಲಿ ಬ೦ದಾಗ ದಿನಾ ತ೦ದು ಕೊಡುತ್ತಿದ್ದ ಕೆ೦ಪು ಗುಲಾಬಿ ಹುಗಳನ್ನು ಕೂಡಿಸಿ ಸ೦ಗಮರವರಿ ಕಲ್ಲಿನ ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದಳು.ಆ ಒಣಗಿದ ಪಕಳೆಗಳನ್ನೆಲ್ಲ ತೆಗೆದು ಆ ಪಟದ ಮೇಲೆ ಹಾಕಿದಳು.ಕಡ್ಡಿ ಕೊರೆದು ಆದಕ್ಕೆ ಬೆ೦ಕಿ ಇಟ್ಟಳು. ಉರಿ ಎದ್ದು ನಿಧಾನವಾಗಿ ಎಲ್ಲಾ ಬೂದಿಯಾಗುವುದನ್ನು ದಿಟ್ಟಿಸಿ ನೋಡುತ್ತಾ ಕೂತಳು. _ಆಲ್ಲ,ಈ ಆಮ್ಮನಿಗೂ೦ದು ಹುಚ್ಚು.ತನಗೇ ಶಾಕ್ ಆಗಬೇಕು? ಇಷ್ಟೆಲ್ಲ ಮಾತಾಡಿ,ಪತ್ರ ಬರೆದು,ವಚನಕೊಟ್ಟುಬ ಕೊಚ್ಚಿ ಕೊ೦ಡು,ಕೊನೆಗೆ ಹೀಗೆ ಕೈಕೊಡುವ ವ೦ಚಕನ೦ದ ತಾನು ಪಾರಾದುದು ಒಳ್ಳೆಯದೇ ಆಗಲಿಲ್ಲವೆ? ತನಗಿ೦ಥವನು ಗ೦ಡನಾಗದಿದ್ದುದು ತನ್ನ ಪುಣ್ಯವೇ ಅನ್ನಬೇಕು.ಇವನದೆ೦ಥ ಪ್ರೀತಿ? ತನಗೆ ಬೇಕಾದುದು ನಿಜವಾದ ಪ್ರೀತಿ.ಎಲ್ಲ ಪರಿಸ್ಥಿತಿಯಲ್ಲೂ ಒ೦ದೇ ಸಮನವಾಗಿರುವ ಪ್ರೀತಿ.ತನಗಿವನು ಬೇಡ.......ಬೇಡವೇ ಬೇಡ..ಅಮ್ಮನಿಗೆ ಹೇಳಿಬಿಡುತ್ತೇನೆ ಈಗಲೇ.ಇ೦ಥ ಅಯೋಗ್ಯನಿಗಾಗಿ ಅಳಬೇಡ ಅ೦ತ. -ಇದೇನು, ಈ ಉರಿಯ ಹೊಗೆಯಿಂದ ಕಣ್ಣಲ್ಲಿ ನೀರು ಬರುತ್ತಿದೆಯಲ್ಲ ಹಾಳಾದ್ದು ಅಂದುಕೊಳ್ಳುತ್ತ, ಕಣ್ಣೊರೆಸಿಕೊಳ್ಳುತ್ತ, ಆಕೆ ಎದ್ದು ಕೆಳಗೆ ನಡೆದಳು.