ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೨ ನಡೆದದ್ದೇ ದಾರಿ


                             ೨
    ಬಾಗಿಲಮೇಲೆ ಟಕ್ ಟಕ್ ಅಂತ ತಟ್ಟಿದ ಶಬ್ಬ ಕೇಳಿದಾಗ ಮಾಡುತ್ತಿದ್ದ ಕೆಲಸದಿಂದ ತಲೆಯೆತ್ತದೆಯೆ ಪ್ರೊ.ಮಠದ"Yes,come in",ಅಂದ. ತೂಗಾಡುವ ಬಾಗಿಲನ್ನು ನೂಕಿಕೊಂಡು ಆಕೆ ಆಳುಕುತ್ತ ಒಳಗೆ ಬಂದಳು.
"ಓ,ಮಿಸ್ ಕಾಮತ,ಬರ್ರಿ ಬರ್ರಿ"_ ಅಂದ  ಆತ ಮುಖದ ತುಂಬ ನಗುತ್ತ.         
ಆಕೆ ನಿಂತೇ ಇದ್ದಾಗ,"ಕೂಡ್ರಿ,ಕೂಡ್ರಿ,ಏನು,ಕ್ಲಾಸ್ ಮುಗಿತs? ಮನೀಗೆ ಹೊಂಟ್ರೇನು?"ಎಂದ.

ಸಂಕೋಚದಿಂದ ಕುರ್ಚಿಯ ತೀರ ತುದಿಗೆ ಕೊಡುತ್ತ ಆಕೆ ಅಂದಳು,"Sorry,ನಿಮಗ ಡಿಸ್ಟರ್ಬ್ ಮಾಡ್ಲಿಕ್ಹತ್ತೀನೇನೋ.ನೀವೇನೋ ಕೆಲಸಾ ನಡೆಸೀರಿ."

"ಡಿಸ್ಟರ್ಬ್ ಇಲ್ಲಾ ಏನಿಲ್ಲಾ.ನೀವು ಬಂದದ್ದು ಛಲೋ ಆತು, ನಾನು ನಿಮ್ಮನ್ನ ಭೆಟ್ಟಿ ಆಗಾಂವs ಇದ್ದೆ."
ಈ ಮಠದನ ಕಣ್ಣುಗಳು ಮೊದಲಿನಿಂದಲೂ ಇಷ್ಷೇ ಹೊಳೆಯುತ್ತಿದ್ದವೇ ಅಥವಾ ಇವತ್ತೇ ಹೀಗೋ?
"ನನ್ನs? ಯಾಕ ?"_ಅವಳಿಗೆ ಆಶ್ಚರ್ಯ, ಕುತೂಹಲ.
"ನಾಳಿನ ಸಂಡೇ ಕರ್ನಾಟಕ ಸಂಘದಾಗ ನನ್ನ ಹೊಸಾ ಕಾದಂಬರಿಯ ಬಿಡುಗಡೆ ಸಮಾರಂಭ ಆದ. ಆದಕ್ಕ ನೆಮ್ಮನ್ನ invite ಮಾಡಾಂವ ಇದ್ದೆ." . "ಸರ್,ನೀವು ಕಾದ್ಂಬರಿ ಬರೀತೀರಾ?"_ ಆವಳಿಗೆ ಹೇಳತೀರದ ಆಶ್ಚರ್ಯ,ಕೌತುಕ. "ನೀವು ನೋಡೇ ಇಲ್ಲೇನು ನನ್ನ ಯಾವ್ದೂ ಕಾದಂಬರಿ? ಎಂಥಾ ನಿರ್ಭಾಗ್ಯ ನಾನು!"_ಆತ ನಗುತ್ತ ಎರಡು ಪುಸ್ತಕಗಳನ್ನು ಆವಳ ಕಡೆ ಚಾಚಿದ.

ಆಕೆಯ ಕಣ್ಣುಗಳು ಒಮ್ಮೆಲೆ ಹೊಳೆದವು,"ಓ,'ಕಾ.ಮ.'ಅಂತ ಹೆಸರಿನಿಂದ ಬರೆಯವ್ರು ನೀವೇನಾ ಸರ್?ನಾ ಹಂಗಾರ ನಿಮ್ಮ ಎಲ್ಲಾ ಕಾದಂಬರೀ ಓದೀನಿ. 'ಕಾ.ಮ.'ನನ್ನ ಪ್ರೀತಿಯ ಲೇಖಕ . ಸ್ಟೆಶಲೀ ಮಹಿಳಾ ಉದ್ಥಾರದ ಬಗ್ಗೆ ಬರೆದಿರೋ ಕಾದಂಬರಿಗಳಂತೂ ನನಗ ಭಾಳ-ಭಾಳ ಸೇರತಾವ. ಖರೇ ಹೇಳಬೇಕಂದ್ರ,ಹಿಂದೂ ಹೆಣ್ಮಕ್ಕಖಳ ದುಸ್ಥಿತಿಯ ಸಲುವಾಗಿ ನನಗ ಕಳಕಳಿ ಹುಟ್ಟಿಸಿ ಸೀರಿಯನಸ್ಸಾಗಿ, ವಿಚಾರ