ಹೌದು,ಇದು ಅವಳದೇ ರೂಮು.ಇದೇನು ನಡೆಸಿದ್ದಾಳೆ ಈ ಶೂರ್ಪನಖಿ ?
ನಾಳೆ ತಾನಿಲ್ಲದಾಗ ರಾತ್ರಿ ಪಿಕ್ಚರಿಗೆ ಓಡುವ ಪ್ಲ್ಯಾನೇ ?
ಪ್ರೊ. ಲೀಲಾವತಿ ತಟಸ್ಥಳಾಗಿ ನಿಂತಲ್ಲೇ ನಿಂತಳು. 'ದಾದೀಮಾ' ಆಂತೆ. ಎಷ್ಟು
ಸೊಕ್ಕು ಇವಳಿಗೆ ! ತಾನೇನು ಕಡೆತನಕ ಹೀಗೇ ಜ್ಯೂನಿಯರ್ ಬಿ.ಎ.ದಲ್ಲಿದ್ದಾಗಿನ
ಹಾಗೆಯೇ ತೆಳುವಾಗಿ ಸ್ಮಾರ್ಟಾಗಿ ಇರುವೆನೆ೦ದು ತಿಳಿದಿದ್ದಾಳೋ ? ನನ್ನ ವಯಸ್ಸಿಗೆ
ಇವಳೂ 'ದಾದೀಮಾ' ಆಗಳೇ ?
'ಲೇಟಾಗಿ ಬರತಾಳಽ ? ಯಾಕ ? ಆಕಿ ಎಂದರೆ ಲೇಟಾಗಿ ಬರತಾಳೇನು !
ಅಟೆಂಡನ್ಸ್ ದ ಹೊತ್ತಿನಕಿಂತಾ ತಾಸು ಮೊದಲೇ ಬಂದು ಲೆಖ್ಖಾ ಹಾಕಿಕೋತ
ಕೂತಿರತಾಳ-ಯಾರ್ನ ಬಿಡ್ಲಿ ಅಂತ. ಇಷ್ಟಾಗಿ ಮ್ಯಾಲ ಲೇಟಾಗಿ
ಬರಲಿಕ್ಕೆ ಆಕಿ ಹೋಗಬೇಕರಽ ಎಲ್ಲೆ ಪಾಪ!"-ಮೊನ್ನೆ ಮೇದಲ್ಲಿ ಯಷ್ಟೆ
ಮದುವೆಯಾಗಿ, ಡಾಕ್ಟರಾದ ಗಂಡನನ್ನು ಒಂದು ವರ್ಷದ ಮಟ್ಟಿಗೆ ಫಾರೆನ್ನಿಗೆ ಕಳಿಸಿ,
ತನ್ನ ಬಿ. ಎ. ಮುಗಿಸಲೆಂದು ಬಂದವಳು ಜಯಲಕ್ಷ್ಮಿ. ಮದುವೆಯಾಗದೇ ಉಳಿದು
ಜೀವನವನ್ನು ವ್ಯರ್ಥ ಸವೆಸುತ್ತಿರುವ ವಾರ್ಡನ್ ಬಗೆಗೆ ಸಹಾನುಭೂತಿ ಅವಳಿಗೆ.
'ಪಾಪ' ಅಂತೆ. ತಕ್ಷಣ ಒಳಗೆ ಹೋಗಿ ಎರಡು ಬಿಗಿಯಬೇಕೆನಿಸಿತು ಪ್ರೊ. ಲೀಲಾವತಿಗೆ.
ಏ ಹುಡುಗಿ, ಮದುವೆ- ಮಕ್ಕಳು-ಸಂಸಾರ ಇವುಗಳನ್ನು ಹೆಣ್ಣುಕತ್ತೆಗಳೂ ಮಾಡುತ್ತವೆ,
ವ್ಹೈಸ್ ಪ್ರಿನ್ಸಿಪಾಲ್ ಆಗಲು,ನನ್ನ ಹಾಸ್ಟೆಲಿನ ವಾರ್ಡನ್ ಆಗಲು, ನನ್ನ ಹಾಗಿರಲು
ಯೋಗ್ಯತೆ ಬೇಕು ಎಂದೆ. ತಿಳಿಯಿತೇನೆ?
ಜಯಲಕ್ಷ್ಮಿಯು ವಾರ್ಡನ್ ಬಗೆಗೆ ತೋರಿದ ಮರುಕ ರೂಮಿನಲ್ಲಿ ನಗೆಯ
ತೆರೆಗಳನ್ನೆಬ್ಬಿಸಿದೆ. ಮತ್ತೆ ಯಾವ್ಯಾವ ಚಾಂಡಾಲಿಯರಿರುವರೋ ಈ
ಸಮ್ಮೇಲನದಲ್ಲಿ? ಎಲ್ಲರೂ ಕೂಡಿ ನಾಳೆ ತನ್ನ ಕಣ್ಣಿಗೆ ಮಣ್ಣೆರಚಬೇಕೆಂದಿದ್ದಾರೆ.
ಇವರ ಈ ಸಿನೆಮಾ ಯೋಜನೆಯನ್ನು ಮಣ್ಣುಗೂಡಿಸದಿದ್ದರೆ ತಾನು ಹುಟ್ಟಿದುದು
ವ್ಯರ್ಥ.
ಈ ಲೂಸಿಗೆ ಎಲ್ಲಾ ಸುದ್ದಿ ಹೇಗೆ ಪತ್ತೆಯಾಗುವವೋ ಏನು ಮಣ್ಣೋ!
'ನಾಳೆ ಆಕಿ ಆ ಹುಡಿಗ್ಯಾರ ಹೈಸ್ಕೂಲಿನ ಗ್ಯಾದರಿಂಗಿಗೆ ಚೀಫ್ ಗೆಸ್ಟ್ ಆಗಿ ಹೋಗಾಕಿ
ಇದ್ದಾಳ. ಅಲ್ಲೆ ಭಾಷಣಾ-ಗೀಷಣಾ ಮುಗಿಸಿ, ಸ್ಕೂಲಿನ ಕಮೀಟಿ ಚೇರಮನ್ ರ
ಕಾರಿನ್ಯಾಗ ಕೂತು ಈಕಿ ಹಾಸ್ಟೆಲಿಗೆ ಬರಬೇಕಾದರ ರಾತ್ರಿ ಹತ್ತಘಂಟೇಆರ ಆಗತದ.
ಅಷ್ಟರಾಗ ನಾವು ಬಂದಬಿಡೂಣಲಾ. ಹ್ಯಾಂಗೂ ಜಾರ್ಜ್ ತನ್ನ ಕಾರು ತರ್ತೀನಿ ಅಂತ
ಹೇಳ್ಯಾನ. ಒಂಬತ್ತೂವರಿಗೇ ನಾವು ಹಾಸ್ಟೆಲು ಮುಟ್ಟಬಹುದು. ನೀವೇನಂತೀರಿ?'
'ಜಾರ್ಜ್ ನ ಕಾರಿನ್ಯಾಗ ನಾವ್ಯಾಕವಾ ಬರೂದು? ಅವನಿಗೆ ಸಿಟ್ಟಬಂದೀತು.'
ಪುಟ:ನಡೆದದ್ದೇ ದಾರಿ.pdf/೩೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ನಡೆದದ್ದೇ ದಾರಿ