ಕಿರುಕಾದಂಬರಿಗಳು / ಗಂಡಸರು ೩೪೭
-ಆಕೆ ಅಸಹಾಯಕಳಾಗಿ ಆತನನ್ನು ಗಟ್ಟಿಯಾಗಿ ಅಪ್ಪಿದಳು. ***
"ನಂದೂ- ನಿಂದೂ ನಂಟು ಇಷ್ಟ ಗಟ್ಟಿ ಆಗಿ ಹ್ಯಾಂಗ ಅಂಟಿಕೂಂಡಿತು ನಿನಗೆ ಗೊತ್ತೇನು ಶಾಂತಿ?ನಮ್ಮಿಬ್ಬರ ವಿಚಾರ ಒಂದs ಅವ.ಆದರ್ಶ ಒಂದs ಅವ.ಭಾವನಾ ಒಂದs ಅವ.ಎಲ್ಲಾ ರೀತಿಯ ಬಂಧನದಿಂದ ದೂರಾಗಿ ಪೂರಾ ಫ್ರೀ ಆಗಿ ಇರಬೇಕು - ಅಂತ ನಿನಗೆ ಹ್ಯಾಂಗ ಅನಸ್ತದ ನೋಡು.ನನಗೂ ಹಾಂಗs ಮುಕ್ತ ಜೀವನದ ಹಂಬಲ ಇತ್ತು ಮೊದಲಿನಿಂದಲೂ"- ಮಠದ್.
"ಅದಕ್ಕಿಂತ ಹೆಚ್ಚಾಗಿ ನನ್ನನ್ನ ನಿಮ್ಮ ಹತ್ತಿರ ತಂದದ್ದು ಅಂದರ-" ಆತನ ಹತ್ತಿರ ಸರಿದು ಶಾಂತಿ ಅಂದಳು,"ನಮ್ಮ ಹೆಣ್ಣು ಮಕ್ಕಳಿಗೆ ಆಗ್ತಿರೋ ಅನ್ಯಾಯದ ಸಲುವಾಗಿ ನಿಮಗೆ ಇರುವ ಕಳಕಳಿ. ಈ ಧ್ಯೇಯದ ಸಲುವಾಗಿ ಇಷ್ಟು ನಿಷ್ಠಾದಂದ fight ಮಾಡೋ ಗಂಡಸನ್ನೇ ನಾ ನೂಡಿರ್ಲಲ್ಲ.ಮತ್ತ ಎರಡನೇ ಕಾರಣ ಅಂದರೆ - ನಿಮ್ಮ ಲಿಟರೇಚರ್.ನಿಮ್ಮ ಬರವಣಿಗೆ, ನಿಮ್ಮ ಆಳವಾದ ಓದು- I'm mad after both.ನಿಮಷ್ಟು maturity, ನಿಮಷ್ಟು deep understanding ಸಹಸಾ ಎಲ್ಲರಿಗೂ ಇರೋದಿಲ್ಲ."-ಶಂಕರನ ನೆನಪಾಗಿಯೋ ಏನೋ, ಆಕೆ ನಿಟ್ಟುಸಿರುಬಿಟ್ಟಳು. "ಶಾಂತೀ,ಖರೇ ಪ್ರೀತಿ ಅಂದರೆ ಇದs ನೋಡು. ವಿಚಾರ, ಭಾವನಾ, ತತ್ವ,ಅದರ್ಶ, ಹೃದಯ, ಮನಸ್ಸು-ಎಲ್ಲಾದರ ಮಿಲನ ಆಗೇದ ನಮ್ಮಿಬ್ಬರದೂ. ನನಗೇನನಸ್ತದ ಗೊತ್ತೇನು?" " ಏನನ್ನಿಸ್ತದ?"- ಆಕೆಗೆ ಅಕಾರಣ ಭಯ. "ಒಮ್ಮೊಮ್ಮೆ ನನಗನಸ್ತದ,ಈ ಮಿಲನ ನಾವು ಯಾವ ರೀತಿಯಿಂದಲೂ ಅಪೂರ್ಣ ಬಿಡಬಾರದು."- ಆತನ ಕಣ್ಣುಗಳೇಕೋ ಕೆಂಪಾಗಿ ಉರಿಯುತ್ತಿದ್ದಂತೆ ಕಂಡಿತು ಆಕೆಗೆ. "ಇಲ್ಲ ಸರ್ , ಅದೊಂದು ಕೇಳಬ್ಯಾಡ್ರಿ." ನಿರಾಶೆಯುಕ್ತ ಕೆಣಕುವ ಧಾಟಿಯಲ್ಲಿ ಆತನೆಂದ," ನನಗೆ ಗೊತ್ತದ ನಿನ್ನ boldness ಎಲ್ಲಾ ಬರೇ ಭಾಷಣದಾಗ,ಬಾಯಿ ಮಾತಿನ್ಯಾಗ.Freedom ಇರಬೇಕು ಹೆಂಗಸರಿಗೆ- ಅಂತೀದಿ.ಆದರ ಸ್ವತಃ ನಿನಗೆ ನೀನ ಒಂದನೂರು restrictions ಹಾಕ್ಕೊಂಡೀದಿ.ನಿನ್ನದು ನಾ ಎಣಿಸಿಧಾಂಗ,"Take all,give all" ಥರದ ಪ್ರೀತಿ ಅಲ್ಲ.ಒಂದು ನಮೂನೀ ಮಡೀ ಪ್ರೀತಿ.Extreme ಗೆ ಹೋಗೋ ಧೃರ್ಯಾ ಇಲ್ಲ ನಿನಗೆ. ನೀ ಪುಕ್ಕಿ-" -ಆತನ ಮಾತು ಕೇಳುತ್ತದ್ದಂತೆ ಎದೆಯಲ್ಲಿ ವಿಪರೀತ ನೋವಿನ