ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅನುಭವವಾಗಿ ಈರ ಕೆಳದನಿಯಲ್ಲಿ ಆಕೆ ಅ೦ದಳು,"ಸರ್ , ನನಗ ಸ್ವಲ್ಪ್ ನಿಚಾರ
ಮಾಡ್ಲಿಕ್ಕೆ ಅವಕಾಶ ಕೊಡ್ರಿ." " ಹ್ಞಾ ಹ್ಞಾ .ವಿಚಾರ ಮಾಡು.ನಿನ್ನ ವಿಚಾರ ಮುಗಿಯೂದ್ರಾಗ ಇಬ್ರೂ ಮುದುಕರಾಗ ".
- ಇವತ್ತು ಯಾಕಿಷ್ಟು ಸಿಟ್ಟು ,ಯಾಕಿಷ್ಟು ಅಸಹನೆ , ಅಸಮಾಧಾನ, ತಿಳಿಯದೆ
ಆಕೆಗೆ ಚಡಪಡಿಕೆಯಾಯಿತು.
***
ಶಾ೦ತಿಯ ಬಿ.ಎ.ದ ರಿಜಲ್ಟ್ ಬ೦ದಾಗ ಆಕೆ ಮುಂಬೈಯಲ್ಲಿನ ಮಾ೦ಸಿಯ ಮನೆಯಲ್ಲಿದ್ದಳು. ಆಕೆಗೆ ಅಭಿನ೦ದಿಸಿ ಪ್ರೋ.ಮಠದ್ ಸಾತಾರೆಯಿ೦ದ ಪತ್ರ ಬರೆದಿದ್ದ. ಮಾ೦ಸಿಯ ಮನೆಯ ಟೆರೇಸ್ ಮೇಲೆ ಒಬ್ಬಳೇ ಕೂತು ಆ ಪತ್ರದ ಕೊನೆಯ ಭಾಗವನ್ನುಆಕೆ ಹತ್ತು ಬಾರಿ ಓದಿದಳು.
"ನಿನ್ನ ಭೆಟ್ಟಿ ಆದಾಗ ನನ್ನ ಶೋಧನೆ ಪೊಣ೯ವಾತೆಯಿತೆ೦ದು ನಿನಗೆ ಹೇಳೀದ್ದೆ, ನೆನಪಿದೆಯೆ ಶಾ೦ತಿ?ಅದರೆ ನೀನು ನನ್ನ ಪೂಣ್೯ತೆಯ ಅನುಭವನ್ನು ಇನ್ನೂವರೆಗೂ ಅಪೂಣ್೯ವಗಿಯೇ ಇಟಿರುವಿ. ಯುಗಾ೦ತರಗಳಿ೦ದ ನನ್ನ ಆತ್ಮ್ ವು ಅರಸುತ್ತಲಿದ್ದ ಅಮೂಲ್ಯ ಅನುಭವವೊ೦ದು ನನ್ನ ಕೈಗೆ ಸಿಕ್ಕೂ ಸಿಗಲಾರದ೦ತೆ ನುಣುಚಿಕೊಳ್ಳೂತ್ತಿರುವ ಅತೃಪ್ತಿನನಗೆ. ನೀನೋ ಪಾಪ-ಪುಣ್ಯಗಳ, ನೀತಿ-ನಿಯಮಗಳ ಚಕ್ರದಿ೦ದ ಹೊರಬರಲಾಗದ ಧರ್ಮಿಷ್ಠ.ನಿನ್ನ ಕೆಚ್ಚು , ಆದಶ೯ ,ಧ್ಯೇಯದ ಮಾತು ಕೇಳಿ ನಾನು ಮೋಸ ಹೋದೆನೇನೋ ಅನಿಸುತ್ತಿದೆ. ಕೀಟ್ಸ್ ನಿನಗೆ ಪ್ರೀತಿಯ ಕವಿ ಅಲ್ಲವೆ ? ನಿನಗೆ ನೆನಪಿರಬೇಕು- Bold lover, never, never canst thou Kiss. Though winning near the goal-yet do not grieve; She cannot fade, though thou hast not thy bliss, For ever wilt thou love, and she be fair! ಶಾ೦ತಿ,ನೀನು ಯಾವಾಗಲು ಹೀಗೆಯೇ ನನ್ನ ಕೈಗೆಟುಕದ ಸು೦ದರ ವಸ್ತುವಾಗಿ
ನನ್ನನ್ನು ಆಟವಾಡಿಸುತ್ತಿರು.ನಾನು-" I shall be your Bold lover for everǃ"
-ಶಾ೦ತಿಗೆ ಸ್ಪಷ್ಟವಾಗಿ ಅನಿಸಿತು ,ತನ್ನನ್ನು ಇಷ್ಟೊ೦ದು ಉತ್ಕಟವಾಗಿ ಪ್ರೀತಿಸುವ ಈತನಿಗೆ ಬೇಕಾದದ್ದನ್ನು ತಾನು ಕೊಡಲಾರೆನಾದರೆ ತನ್ನ ಯಾವ್ ಮಡಿವ೦ತಿಕೆಗೂ, ಆದಶ೯ಗಳಿಗೊ ,ನ೦ಬಿಕೆಗಳಿಗೂ ಅಥ೯ವಿಲ್ಲ