ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿರುಕಾದಂಬರಿಗಳು } ಗಂಡಸರು ಆಕೆ ಆಗಿಂದಾಗ ಒಂದೇ ಸಾಲಿನ ಪತ್ರವೊಂದನ್ನು ಬರೆದಳು, “ 'Take all, give all ." ಪತ್ರ ಬರೆದ ನಂತರ ಅವಳಿಗೆ ತಾನು ಈ ಜೀವನದಲ್ಲಿ ಇನ್ನು ಸಾಧಿಸಬೇಕಾದುದೇನೂ ಉಳಿಯಲಿಲ್ಲ, ಎಲ್ಲ ದೃಷ್ಟಿಯಿಂದಲೂ ತಾನು ಪೂರ್ಣತೆಯನ್ನು ಮುಟ್ಟಿದೆ, ಎಂದೆನಿಸಿ ಶಾಂತವಾದ ಸಮಾಧಾನವಾಯಿತು. ಮರುದಿನವೇ ಸಾತಾರೆಗೆ ಹೋಗುವುದಿದ್ದುದರಿಂದ ಪತ್ರವನ್ನು ಪೋಸ್ಟ್ ಮಾಡದೆ ಆತನ ಕೈಯಲ್ಲೇ ಕೊಟ್ಟು ಆಶ್ಚರ್ಯದಿಂದ, ಆನಂದದಿಂದ ಆತನ ಕಣ್ಣುಗಳು ಬೆಳಗುವುದನ್ನು ನೋಡಬೇಕೆಂದು ನಿರ್ಧರಿಸಿ ಅದನ್ನು ಜೋಪಾನವಾಗಿ ಮಡಿಸಿ ಸೂಟ್‌ಕೇಸಿನ ತಳದಲ್ಲಿಟ್ಟಳು.

ರಜೆ ಮುಗಿಸಿ ಶಾಂತಿ ಸಾತಾರೆಗೆ ತಿರುಗಿ ಬಂದ ದಿನ ಸಂಜೆ ಅವಳ ಗೆಳತಿ ಜಯಶ್ರೀ ದೇಸಾಯಿ ಅವಳನ್ನು ಕಾಣಲೆಂದು ಬಂದಳು. ಬಂದವಳು ಎರಡನೆಯ ಮಾತಿಲ್ಲದೆ ಶಾಂತಿಯ ತೊಡೆಯ ಮೇಲೆ ಮುಖವಿಟ್ಟು ಗಟ್ಟಿಯಾಗಿ ಅಳುವುದಕ್ಕೆ ಪ್ರಾರಂಭಿಸಿದಳು. “ಏನಾತು ಜಯಾ ? ಹಿಂಗ್ಯಾಕ ಆಕ್ರೋ ? ಮನ್ಯಾಗ ಎಲ್ಲಾರು ಆರಾಮಿದ್ದಾ ರಿಲ್ಲೊ ?" -ಆತಂಕದಿಂದ ಶಾಂತಿ ಕೇಳಿದಳು. ಹೌದೆಂದು ಗೋಣುಹಾಕಿ ಸೂಚಿಸಿದ ಜಯಶ್ರೀ ಇನ್ನೂ ಗಟ್ಟಿಯಾಗಿ ಅಳತೊಡಗಿದಳು. “ಏನಾತು ಮಾರಾಯಳು ? ಇದೇನು ನಿನ್ನ ಅವತಾರ ? ಹರಕ ಸೀರಿ, ಕೆದರಿದ ಕೂದಲಾ ಕೆಂಪಾದ ಕಣ್ಣು, ಅಲ್ಲs ಪ್ರೇಮ ಭಂಗ ಆತೋ ಏನು ಮತ್ತ ? “ನಾ ಕೆಟ್ಟೆ ಶಾಂತೀ, ನಾ ಹಾಳಾದೆ' - ಜಯಶ್ರೀಯ ಮೈಯಿಡೀ ಅಳುವಿನಿಂದ ನಡುಗುತ್ತಿತ್ತು. ಆಂಥಾದ್ದೇನಾತು ಜಯಾ ? ಇತ್ಯಾಗ ನೀ ಯಾರೋ ಪ್ರೀತಿ ಮಾಡ್ಲಿಕ್ಸ್ತೀನಿ ಅಂತ ಹೇಳತಿದ್ದೆಲಾ, ಆ ನಿನ್ನ ಪ್ರೇಮಿ ಏನರೆ ಕೈಕೊಟ್ಟೇನು ?" - ಆಕೆಯ ಬೆನ್ನು ಸವರುತ್ತ ಕಾಳಜಿಯಿಂದ ಕೇಳಿದಳು ಶಾಂತಿ. ಆದರೆ ಜಯಶ್ರೀ ಏನೂ ಮಾತಾಡದೆ ಅಳುವುದನ್ನೇ ಮುಂದುವರಿಸಲು, ಈಕೆ ಆತ್ಯಾದರೂ ಮುಗಿಸಲೆಂದು ಶಾಂತಿ ಸುಮ್ಮನೆ ಕೂತಳು. ಜಯಶ್ರೀಯ ಅಪರಿಪಕ್ವ ಬುದ್ಧಿಯ ಬಗ್ಗೆ, ದುಡುಕುವ ಸ್ವಭಾವದ ಬಗ್ಗೆ, ಸರಳವಾಗಿ ಎಲ್ಲ ನಂಬುವ ಮೂಢತೆಯ ಬಗ್ಗೆ, ಮೊದಲಿನಿಂದಲೂ ಶಾಂತಿಗೆ ಅನಿಸುತ್ತಿದ್ದ ಜುಗುಪ್ಪೆ ಇಂದು ಅವಳ ಆಳುವನ್ನು ಕಂಡೊಡನೆ ಒಮ್ಮೆಲೆ ಅನುಕಂಪವಾಯಿತು.