ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೨ ನಡೆದದ್ದೇ ದಾರಿ


       ಸಾತಾರೆಯಲ್ಲಿ ರುವುದೇ ಬೇಡವೆಂದು ತಂದೆ-ತಾಯಿಗಳ ಕೂಡ ಹಟಮಾಡಿ ಒಪ್ಪಿಗೆ ಪಡೆದು ಶಾಂತಿ ಮುಂಬೈಯ ಮಾಂಶಿಯ ಮನೆಗೆ ಬಂದು ಆರು ತಿಂಗಳು ಸತತ ಪರಿಶ್ರಮಿಸಿದ ನಂತರ ಅವಳಿಗೆ ಶಾ ಮಾಣಿಕಚಂದ ಎಂಡ್ ಸನ್ಸ್ ಲಿಮಿಟೆಡ್ನವರ ಕೈಗಾರಿಕಾ ಸಾಮಾನುಗಳ ಶೋರೂಮನಲ್ಲಿ ರಿಸೇಪ್ಶನಿಸ್ಟ್ ಕೆಲಸ ಸಿಕ್ಕಿತ್ತು. ಇಂದು ಅವಳು ಮೊದಲ ಸಲ ಕೆಲಸಕ್ಕೆ ಹಾಜರಾಗಿದ್ದಳು.ವ್ಹಿ.ಟಿ.ಯಲ್ಲಿರುವ ಆ ಶೋರೂಮ್ನವರೆಗೂ ಆವಳನ್ನು ಕಳಿಸಲು ಬಂದಿದ್ದ ಮಾಂಶಿಯ ಕಿರಿಮಗನಿಗೆ ಆಕೆ ಹೇಳಿದ್ದಳು-"ಇನ್ನ ನೀ ಕಾಲೇಜಿಗೆ ಹೋಗು ಬಾಳೂ,ಸಂಜೀಕೆ ಮತ್ತ ಕರೀಲಿಕ್ಕೆ ಆಂತ ಬರಬ್ಯಾಡ,ನನಗೆಲ್ಲಾ ಗೊತ್ತಾಗ್ತದ,ನಾ ಲೋಕಲ್ ಹಿಡಿದು ಬರ್ತ್ತೀನಿ ಮಾತುಂಗಾಕ್ಕ."
       ಮೊದಲ ಸಲ ನೌಕರಿ ಮಾಡಲು ಸುರುಮಾಡುವ ಈ ಸಂಭ್ರಮ ಎಷ್ಟು ವಿಚಿತ್ರವಾದುದು,ತನಗೆ ಇದರ ಭರದಲ್ಲಿ ಎಲ್ಲ ಮರೆತಿದೆಯಲ್ಲ,ಕಳೆದ ಆರು ತಿಂಗಳಿಂದಲೂ ತನ್ನನ್ನು ಮುಸುಕಿದ್ದ ದಿಕ್ಕೆಟ್ಟಂತಹ ಭಾವನೆ ಕೂಡ ಇಂದು ಇಲ್ಲದಾಗಿದೆಯಲ್ಲ.ಹೀಗೇ ಮುಂದುವರಿದರೆ ಒಂದು ದಿನ ತಾನು ಜೀವನದಲ್ಲಿ ಪೆಟ್ಟು ತಿಂದುದನ್ನು ಸಂಪೂರ್ಣ ಮರೆಯಬಹುದು-ಎಂದೆನಿಸಿ ಶಾಂತಿಗೆ ಹಗುರ ಅನಿಸಿತು.ಅವಳ ಜೊತೆ ಕೆಲಸ ಮಾಡುವವರಲ್ಲಿ ಇನ್ನೂ ಮೂವರು ಹುಡುಗಿಯರಿದ್ದರು.ಅಬ್ಬ,ಅವರ ಫ್ಯಾಶನ್ನೇ|ಶೋಕೇಸ್ನಲ್ಲಿಟ್ಟ ಗೊಂಬೆಗಳ ಹಾಗಿದ್ದಾರೆ.ಶಾಂತಿಯನ್ನು ನೋಡಿ,ಕ್ಯಾಮರಾದೆದುರು ನಿಂತ ಹಾಗೆ ಬಾಗಿ ನಸುನಕ್ಕು 'ಹಲೋ'ಅಂದರು.ಹೇಗಪ್ಪ ಈ ಚಿಟ್ಟೆಗಳ ಕೂಡ ಇಡೀ ದಿನ  ಕಳೆಯುವುದು-ಎನಿಸಿತು ಆಕೆಗೆ.
        ಕೌಂಟರಿನಲ್ಲಿ ಕೂತಿದ್ದ ಗುರೂ ಶರ್ಟ್-ಬೆಲ್ ಪ್ಯಾಂಟಿನ ಮನುಷ್ಯ ಸರಳವಾಗಿ ನಕ್ಕು"ವೆಲ್ ಕಮ್ ಮಿಸ್ ಕಾಮತ"ಅಂದ.ತನ್ನ ಕೆಲಸವನ್ನು ಈತನೇ,ರಮಾಕಾಂತ ಸಿಂಧೆ,ಕಲಿಸಿ ಕೊಡುತ್ತಾನೆಂದು ಮ್ಯಾನೇಜರ್ ಮೊದಲೇ ಹೇಳಿದ್ದರು.ಈತನನ್ನು ನೋಡಿದೊಡನೆ ಶಾಂತಿಗೆ ತುಂಬ ಸಮಾಧಾನವಾಯಿತು.ಈ ಎಲ್ಲ ಬಣ್ಣಬಣ್ಣದ ಚಿತ್ರವಿಚಿತ್ರದ ಭಯಂಕರವಾದ ಜನ ಸಮುದ್ರದಲ್ಲಿ ಈತನೊಬ್ಬನೇ ಮನುಷ್ಯ,ತನ್ನ