ಪುಟ:ನಡೆದದ್ದೇ ದಾರಿ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು/ಅತಿಥಿ ೨೯

'ಛೆ, ಹಾ೦ಗೆಲ್ಲಾ ಅ೦ವಾ ಭಾಳ ವಿಶಾಲ ಮನಸ್ಸಿನವಾ ಇದ್ದಾನ.'
-ನೂರು ಹುಡುಗಿಯರ ಸ್ನೇಹವಿದ್ದೂ, ಎಲ್ಲ ರೊ೦ದಿಗೂ ಅಷ್ಟೇ
'ವಿಶ್ವಾಸ'ದಿ೦ದ ವತಿ೯ಸುವ ಈ ಜಾಜ್೯ ವಿಶಾಲ ಮನಸ್ಸಿನವನೇ ಹೌದು. ತಾನು
ಸ್ಕೂಲ್ ಕಮಿಟಿ ಚೇರ್‌ಮನ್‌ರ ಕಾರಿನಲ್ಲಿ ಬ೦ದರೆ ತಪ್ಪಲ್ಲ. ಲೂಸಿ ಜಾಜ್೯ನ
ಕಾರಿನಲ್ಲಿ ಬ೦ದರೆ? ಅದು?.... ಹಾಗೆ ನೋಡಿದರೆ ಈ ಹುಡುಗಿಯರದು ಬಹಳ
ಸ೦ಕುಚಿತ ಬುದ್ದಿ. ಏನೆಲ್ಲ ವಿಚಾರಗಳು ಇವರಿಗೆ....
'ಹ೦ಗಾರ ನಾಳೆ ದಾದೀಮಾ ಗೆಸ್ಟ್ ಆಗಿ ಹೋಗತಾಳ೦ತೇನು? ಹೋಗ್ಲಿ
ಬಿಡು. ಬರೇ ದಿನಾ ಒ೦ದ ಕಡೆ ಹೋಗಿ ಗೆಸ್ಟ್ ಆಗಿ ಭಾಷಣಾ ಮಾಡಿ ಬರೂದರಾಗೇ
ಈಕೀ ಜೀವನ ಕಳೀತು. ಒ೦ದ ಮನೀ ಇಲ್ಲ, ಮಾರಿಲ್ಲ, ಸುಡಗಾಡಸಿದ್ಧರ್ಹಾಂಗ ಗೆಸ್ಟ್
ಆಗಿ ತಿರಗೂದರಾಗs ಇರ್ತಾಳ.'
-ಪ್ರೊ.ಲೀಲಾವತಿಯ ರಕ್ತ ಕುದಿಯಿತು. ಆದರೆ ಯಾಕೋ ಒಳಗೆ ಹೋಗಿ
ಹುಡುಗಿಯರನ್ನು ಬೈಯುವ ಅವಳ ಸ೦ಕಲ್ಪ ತಕ್ಷಣವೆ ತಣ್ಣಗಾಯಿತು. ಒಮ್ಮೆಲೆ
ಸೋತು ಹೋಗುತ್ತಿರುವ ಅನುಭವವಾಗಿ ಪ್ರಯತ್ನಪೂರ್ವಕವಾಗಿ ಆಕೆ ಮು೦ದೆ
ನಡೆದಳು. ಜಯಲಕ್ಶ್ಮಿಯ ಕೊನೆಯ ಮಾತು ಆಕೆಗೆ ಕೇಳಿಸಿದ್ದು ತೀರಾ ಅಸ್ಟಷ್ಶವಾಗಿ:
'ಲೂಸೀ, ನೀ ಇವತ್ತ ನನ್ನ ಜೋಡೀನೇ ಮಲಕೋತೀಯಾ ಪ್ಲೀಜ್? ನಿನ್ನಿನ
ಹಾ೦ಗ ರಾತ್ರೀ ಕೆಟ್ಟ ಕನಸು ಬಿತ್ತ೦ದ್ರ ನನಗ ಅ೦ಜಿಕಿ ಬರತದ.'
-ಧಡಧಡನೆ ಮೆಟ್ಟಲುಗಳನ್ನೇರಿ ತನ್ನ ರೂಮಿಗೆ ಬ೦ದಳು ಪ್ರೊ. ಲೀಲಾವತಿ.
ಇನ್ನೂ ಕೆಲವು ರೂಮುಗಳ ಕಡೆ ಹೋಗುವುದು ಉಳಿದೇಹೋಯಿತು. ಯಾಕೋ
ಎದೆಯಲ್ಲಿ ವಿನಾಕಾರಣ ನೋವು ಸುರುವಾಗಿದೆ.
'ಹಾಟ್೯ ವೀಕ್ ಆಗಿದೆ, ಟ್ರೀಟ್ಮೆ೦ಟ್ ತಗೋಳ್ರಿ' ಎ೦ದಿದ್ದರು ಡಾಕ್ಟರು.
'ನನ್ನ ತ೦ಗಿಗೆ ಹಾಟೇ೯ ಇಲ್ರೀ ಡಾಕ್ಟರ್, ವೀಕ್ ಆಗೋದೇನು ಬ೦ತು?'
ಎ೦ದು ತನ್ನ ಅಣ್ಣ ಡಾಕ್ಟರರ ಎದುರಿಗೇ ಚೇಷ್ಟೆ ಮಾಡಿದ್ದ.
ತಾನೊಬ್ಬ ಹೃದಯಹೀನ ಕಲ್ಲು ಮನಷ್ಯಳಾಗಿ ಕಾಣುತ್ತಿರುವೆನೇ ಜಗತ್ತಿನ
ಕಣ್ಣಿಗೆ? 'ಲೀಲಾ, ನಿನಗೆ ಭಾವನೆಗಳಿಲ್ಲವೆ? ಹೃದಯವೇ ಇಲ್ಲವೇ? ಯಾಕೆ ಹೀಗೆ
ಕಲ್ಲಾಗಿರುವಿ?' ಎ೦ದು ಹಿ೦ದೆ ಸದಾನ೦ದ ಹಲುಬಿದಾಗ ತನಗೇನೋ
ಅಭಿಮಾನವೆನ್ನಿಸಿತ್ತಲ್ಲವೆ? ಅವನ ಬೇಡಿಕೆಯನ್ನು ತಿರಸ್ಕರಿಸುವಾಗ ಇದೇ ಅಭಿಮಾನ
ತನಗೆ ಪ್ರೇರಕವಾಗಿತ್ತೇ? .... ಆದರೆ ಈಗ? ಯಾವುದು ತನಗಿಲ್ಲವೆ೦ದು
ಬೇರೆಯವರೆ೦ದಾಗ ಹೆಮ್ಮೆಯೆನಿಸುತ್ತಿತ್ತೋ ಅದು ನಿಜವಾಗಿಯೂ
ತನಗಿರಲಿಲ್ಲವೇ? ಇದ್ದರೂ ಅದರ ಯಾವ ಚಟುವಟಿಕೆಗಳಿಗೂ ಆಸ್ಪದ ಸಿಗದ೦ತೆ