ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದರಿಬರಿಗಳು / ಗರಿಡಸರಶಿ ೩೫೩
ಹಾಗಿರುವ ಇನ್ನೊಬ್ಬ ಮನುಶ್ಯ- ಅನಿಸಿತು. ನಂತರ ಆಕೆ ದಿನಏಡೀ ರಮಾಕಾ೦ತ ಸಿಂಧೆಯ ಪಕ್ಕದಲ್ಲೇ ಉಳಿದಳು. ಎಷ್ಟು ಸರಳ, ಎಷ್ಟು frank; ಎಷ್ಟು protective ಆಗಿದ್ದಾನೆ ಈ ಮನುಷ್ಯ. ಒಬ್ಬ ಹಿರಿಯ ಅಣ್ಣನ ಹಾಗೆ ಅನಿಸಿತು ಆಕೆಗೆ. ಆತನ ಮರಾಠೀ ಶೈಲಿಯ ಇಂಗ್ಲಿಶ್ ಆಕೆಗೆ ತುಂಬ ಮೋಜೆನಿಸಿತು. ಸಂಜೆಯ ಹೊತ್ತಿಗೆ ಮತ್ತೊಮ್ಮೆ ಬ೦ದ ಮ್ಯಾನೇಜರ್ ಶಾ೦ತಿಯ ಬಳಿಗೆ ಬಂದು ಅವಳ ಹೆಗಲ ತಟ್ಟಿ ನಕ್ಕು,"ಹೌ ಡು ಯೂ ಡು ?" ಅ೦ತ ಕೇಳಿ ಮುಂದೆ ಸಾಗಿದಾಗ ಸಿಂಧೆ ತಗ್ಗಿದ ಧ್ವನಿಯಲ್ಲಿ ಆಕೆಗೆ ಹೇಳಿದ. "ಈ ಮನುಷ್ಯನ ವಿಷಯದಾಗ ಮಾತ್ರ ನೀವು ಜ್ವಾಕಿ ಇರಬೇಕು ಹಾ ಮಿಸ್ ಕಾಮತ." "ಯಾಕ ?" ಆಕೆ ಕುತೂಹಲದಿ೦ದ ಕೇಳಿದಳು. " ಇಪ್ಪತ್ನಾಲ್ಕೂ ತಾಸೂ ಕುಡಿದಿರತಾನ." "ಕುಡಿದಿರತಾನ ? ಅಂದರ ಸೆರೆ ?"-ಆಕೆಗೆ ಆಘಾತ. "ಮತ್ತೇನು ನೀರು ಕುಡಿದಿರ್ತಾನ೦ತ ತಿಳದ್ರೇನು ?" ಅನ್ನುತ್ತ ರಮಾಕಾಂತ
ಸಿಂಧೆ ನಕ್ಕ- "you are still a child"
"ಕುಡಿಯೂದರಷ್ತು ಕೆಟ್ಟ ಚಟಾ ಮತ್ತೊ೦ದಿಲ್ಲ೦ತ. ನನಗಂತೂ ಕುಡುಕರು
ಅ೦ದ್ರ ಥೇಟ್ ರಾಕ್ಷಸ್ರು ಅನಸ್ತಾರ. ಛೀ..."
"ನೀವು ಎಲ್ಲಿದ್ದೀರಿ ಮಿಸ್ ಕಾಮತ? ಕುಡೀಲಾರದ ಗಂಡಸು ಈಗಿನ
ಕಾಲದಾಗ ಎಲ್ಲಿ ಸಿಗ್ತಾನ ನಿಮಗೆ ? ಹೆಂಗಸ್ರೂ ಕುಡೀತಾರ ಈಗ. ಆ ಕಡೀ ಟೇಬಲಿಗೆ ಕೊತಾಳಲಾ ಲೂಸಿ ಫರ್ನಾ೦ಡಿಸ್, ಆರು ಪೆಗ್ ಒರ೦ದs ಸೆರೆ ಕುಡೀತಾಳ. ಈ ಮ೦ದೀಗೆ ಕುಡೀದಿದ್ದರ ಮೈಮ್ಯಾಲ ಶುದ್ಢೀನೇ ಉಳಿಯೂದಿಲ್ಲ."
-ಶಾ೦ತಿಗೆ ಆಘಾತದ ಮೆಆಲೆ ಆಘಾತ ; "ಎಲ್ಲಾ ಗರ೦ಡಸ್ರೂ ಕುಡಿತಾರs? ನೀವೂ ?"" "ಹಾಞ ಹಾಞ, ನಾನೂ",ಆತನಕ್ಕ ಆತ ನಗುತ್ತಿರುವುದನ್ನು ನೋಡುತ್ತಿರುವ೦ತೆ ಆಕೆಗೆ ಈ ರಮಾಕಾ೦ತ ಸಿಂಧೆಯೂ ಕುಡಿಯುತ್ತಿದ್ದರೆ ಕುಡಿಯುವುದು ತಾನು ತಿಳಿದಷ್ತೇನು ಕೆಟ್ಟದಾಗಿರಲಿಕ್ಕಿಲ್ಲ
ಅನಿಸಿತು.
* * *
ಶನಿವಾರ ಕೆಲಸಕ್ಕೆ ಅಧ೯ ರಜಾ. ಆಂದು ಕೆಲಸೊ ಅವಧಿ ಮಎಗಿದ ನಂತರ
ತನ್ನ ವ್ಯಾನಿಟಿ ಬ್ಯಾಗು ಮತ್ತು ರೇನ್ಕೋಟ್ ಹೊತ್ತು, ಶೋರೂಮಿನ ದೊಡ್ಡದಾದ