ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿಂದೆ ಮೃದುವಾಗಿ ಹೇಳಿದ, "ನನಗೆ ಆಶ್ಚರ್ಯ ಆದದ್ದಕ್ಕ ತಪ್ಪು ತಿಳೀಬ್ಯಾಡ್ರಿ. ನೀವು ಕೇಳಿದ ಹುಡಿಗ್ಯಾರ ಹಾಂಗೆ ಅಲ್ಲಿ ಅಂತ ನನಗೆ ಗೊತ್ತಿದೆ."

      "ನೀವೂ ಮುಂಬೈಯ ಉಳಿದ ಗಂಡಸರ ಹಾಂಗ ಅಲ್ಲಂತ ನನಗೂ ಗೊತ್ತಿದೆ"— ಆಕೆ ನಾಚದೆ ಅವನನ್ನೇ ನೊಡುತ್ತಾ ಹೇಳಿದಳು.
      "ನೀವು ಹೋಗೋಣ ಅಂ

ದ್ರು ಹೋಗೋಣ. ಯಾವ ಸಿನೆಮಾ ?"— ಶಾಂತವಾಗಿ ಕೇಳಿದ ಆತ.

      "ಹೋಗೋಣ. ಆದರೆ ಸಿನೇಮಾಕ್ಕ ಬ್ಯಾಡ, ಜುಹೂಕ್ಕ ಹೋಗೋಣ. ಕೂತು ಮಾತಾಡೋಣ, ಹಾಂಗೆ ಆರಾಮ ಕೂತು...."
      "ಅಚ್ಚಾ ?" — ಆತನ ಕಣ್ಣುಗಳಲ್ಲಿ ಆಕೆಯ ಸೂಚನೆಯ ಬಗ್ಗೆ ಮೆಚ್ಚುಗೆ ವ್ಯಕ್ತಗೊಂಡಿತ್ತು.
      "ಟ್ಯಾಕ್ಸಿ...."
                                   ***
       ಒಂದು ರವಿವಾರ ಮಧ್ಯಾಹ್ನ ಶಾಂತಿ ಬಾಂದ್ರಾದಲ್ಲಿರುವ ಸಿಂಧೆಯ ರೂಮಿನ ವಿಳಾಸ ಹುಡುಕಿಕೊಂಡು ಹೋದಳು. ರೂಮಿನ ಎದುರುಗಡೆಯೇ ಪ್ರಸಿದ್ಧ ಸರ್ಜನ್ರೊಬ್ಬರ ದೊಡ್ಡ ಕ್ಲಿನಿಕ್ ಇದ್ದುದನ್ನು ಆತ ಮೊದಲೇ ಹೇಳಿದ್ದರಿಂದ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಇಕ್ಕಟ್ಟಾದ ಸುಂದರಿಯಲ್ಲದ ಹಾಯ್ದು ಮೆಟ್ಟಲುಗಳನ್ನೇರಿ ಆಕೆ ಬಾಗಿಲು ತಟ್ಟಿದಾಗ ಅದು ಕಿರ್ರಂದು ಸಪ್ಪಳ ಮಾಡಿ ತೆರೆದುಕೊಂಡಿತು. ಎದುರಿಗೆ ಅಜಾನುಬಾಹುವಾದ ಬಾರಿ ಪ್ಯಾಂಟ್ ಮಾತ್ರ ಧರಿಸಿದ್ದ ಸಿಖ್ ಸರ್ದಾರ್ಜಿ ತಿನ್ನು ನೋಡಿ ತುಸು ಹಿಂದೆ ಸರಿದು ಆಕೆ ತೊದಲಿದಳು.
       "ಎಕ್ಸ್ ಕ್ಯೂಜ್ ಮಾಡಿ, ಮಿಸ್ಟರ್ ಸಿಂಧೆ—" ಆಕೆಯ ಮಾತು ಮುಗಿಯುವ ಮೊದಲೇ ಆತ ದೊಡ್ಡದಾಗಿ ಅಟ್ಟಹಾಸ ಮಾಡಿ "ಆಯಿಯೇ ಆಯಿಯೇ ಬಹನ್ಜೀ ಅಂತ ಅವಳನ್ನು ಸ್ವಾಗತಿಸಿ ಹರಕು-ಮುರುಕು ಇಂಗ್ಲಿಷ್ ನಲ್ಲಿ ಹೇಳಿದ, "ನಾವು ನಿಮ್ಮನ್ನೇ ಕಾಯುತ್ತಿದ್ದಿವಿ. ನೀವು ಇವತ್ತು ರೂಮಿಗೆ ಬರುವವರಿದ್ದೀರೆಂದು ಈ ಸಿಂಧೇಕಾ ಬಚ್ಚಾ ಮುಂಜಾನೆಯಿಂದಲೂ ನನ್ನ ಕಡೆಯಿಂದ ರೂಮು ಕ್ಲೀನ್ ಮಾಡಿಸುತ್ತಿದ್ದಾರೆ."
        ಅಷ್ಟರಲ್ಲಿ ರಮಾಕಾಂತನೂ ಎದ್ದು ಬಂದು, "ಬಾ ಶಾಂತವೀರ, ಬರ್ತೀಯೋ ಇಲ್ಲೋ ಅನಿಸಿತ್ತು." ಒಳಗೆ ಬಂದು ಆಕೆಗೆ ಆತ ತನ್ನ ಗೆಳೆಯ ಸಿಂಗ್ ನ ಪರಿಚಯ ಮಾಡಿಸಿದ. ಸಿಂಗ್ ಮತ್ತೊಮ್ಮೆ ಅಟ್ಟಹಾಸ ಮಾಡಿ ಅಂದು, "ನಿಮ್ಮ ಪರಿಚಯವಾದಾಗಿನಿಂದ ಒಂದು ರಜೆಯ ದಿನವೂ ನನ್ನ ಗೆಳೆಯ ನನಗೆ ಸಿಕ್ಕಿಲ್ಲ. ನೀವು