ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿರುಕಾದಂಬರಿಗಳು } ಗಂಡಸರು ೩೫೯ ಇದು ದುಃಖವಲ್ಲ, ಹಳೆಯ ಗಾಯ ಕೆದಕಿದ ಅನುಭವವಲ್ಲ, ನಿರ್ಲಿಪ್ತತೆಯೂ ಅಲ್ಲ, ಉದಾಸೀನತೆಯಲ್ಲ - ಏನೋ.... ಹೋಗಲಿ. ಶುಭಾಶಯ ಕಳಿಸೋಣ. ಎರಡನೆಯ ಚೀಟಿ ರಮಾಕಾಂತ ಸಿಂಧೆಯದು. "ರಜೆ ಮುಗಿಯುವ ಮೊದಲೇ ತಿರುಗಿ ಬಂದಿರುವಿ ಅಂತ ನಿನ್ನ ಕಸಿನ್ ಹೇಳಿದ. ಸಾಧ್ಯವಾದರೆ ಸಂಜೆ ಬಾ" ಟೆಲಿಗ್ರಾಂ ಸಾತಾರೆಯಿಂದ ಬಂದಿತ್ತು, 'Father expired. Come immediately." ಅವಳ ಅಣ್ಣನ ಹೆಸರಿನಿಂದ ಬಂದಿತ್ತು. ಗ್ಯಾಸ್ ಮೇಲಿಟ್ಟ ಚಹಾ ಮರೆತು ಶಾಂತಿ ಕೂತಲ್ಲೇ ಸುಮ್ಮನೆ ಕೂತಳು. ಅರ್ಧ ಗಂಟೆಯ ನಂತರ ಬಂದ ಮಾಂಶಿ ಅವಳನ್ನು ಹಾಗೆ ಕೂತಿದ್ದಂತೆಯೇ ಕಂಡಳು. ಮಾಂಶಿಯ ಹಿಂದೆಯೇ ಹುಡುಗರೂ ಬಂದರು. “ಯಾರದದು ತಾರು ಶಾಂತೀ ?" ಅನ್ನುತ್ತ ಹತ್ತಿರ ಬಂದ ಮಾಂತ್ರಿ, ಶಾಂತಿ ಮಾತಾಡದಿರಲು ತಾನೇ ತಾರನ್ನು ನೋಡಿ ಒಮ್ಮೆಲೆ ಶಾಂತಿಯ ಹತ್ತಿರ ಕುಸಿದು ಕೂತು ಅವಳನ್ನು ತಬ್ಬಿಕೊಂಡು ಅಳತೊಡಗಿದಳು.

“ಯಾರು ? ಶಾಂತಿ ? ಇಂಥಾ ರಾತ್ರಿ ಒಬ್ಬಾಕೀನೇ ಹ್ಯಾಂಗ ಬಂದಿ ? ಯಾಕ ಬಂದಿ ?" - ರಮಾಕಾಂತ ತುಂಬ ಅಚ್ಚರಿಯಿಂದ ಕೇಳಿದ. ಆತನ ರೂಮಿನೊಳಗೆ ಬಂದ ಆಕೆ ಬಾಗಿಲು ಹಾಕಿ, ಹಾಕಿದ ಬಾಗಿಲಿಗೇ ಒರಗಿ ನಿಂತು ತಲೆಯೆತ್ತಿ ಆತನನ್ನು ನೋಡಿದಳು. “ನಿನಗ ನನ್ನ ಚೀಟಿ ಮುಟ್ಟಿತೇನು ಶಾಂತಿ ? ಮಧ್ಯಾಹ್ನದಾಗs ಕಳಿಸಿದ್ದೆ, ಸಂಜೀಗೆ ಫ್ರೀ ಇದ್ದರ ಬಾ ಅಂತ. ಇಂಥಾ ರಾತ್ರೀ ಯಾಕ ಬಂದಿ ನೀನು ? ನಿಮ್ಮ ಮಾಂಶಿ ಹ್ಯಾಂಗ ಬಿಟ್ಟರು ನಿನ್ನ ? ಯಾರರೆ ನೋಡಿದರೆ ಏನಂತಾರ ?" ಶಾಂತಿಗೆ ದುಃಖವಾಯಿತು. ಕೆಳದನಿಯಲ್ಲಿ ಆಕೆ ಹೇಳಿದಳು, “ಮಾಂಶೀ ಬ್ಯಾಡ ಅಂದ್ರೂ ಬಂದೀನಿ. ನೀನು ಹೋಗು ಅಂದರ, ಮಂದಿ ಏನಂದಾರು ಅಂತ ಅಂಜಿಕಿ ಇದ್ದರ, ಹೋಗಿ ಬಿಡ್ತೀನಿ, “ಹಾಂಗಲ್ಲ ಶಾಂತೀ', ಆತ ಸುಧಾರಿಸಿಕೊಳ್ಳಲೆತ್ನಿ ಸುತ್ತ ಹೇಳಿದ. “ಸಿಂಗ್ ಊರಿಗೆ ಹೋಗ್ಯಾನ" - ನಂತರ ತಾನು ಹಾಗೆ ಹೇಳಿದ್ದಕ್ಕೆ ಅರ್ಥವಿಲ್ಲೆಂದು ತಿಳಿದು ಒಮ್ಮೆಲೆ ಸುಮ್ಮನಾದ. “ರಮಾಕಾಂತ, ನಮ್ಮ ಅಪ್ಪ ಸತ್ತು ಹೋದರು ಅಂತ ಟೆಲಿಗ್ರಾಂ ಬಂತು ಸಂಜೆ." “ಓ ! ಸಾರಿ" - ಒಮ್ಮೆಲೆ ಮುಂದೆ ಬಂದು ಆಕೆಯ ಕೈಗಳನ್ನು ಹಿಡಿದುಕೊಂಡ. * I'am very sorry , ಶಾಂತೀ, ಆಲ್ಲ, ಅಂದರ ನೀ ಊರಿಗೆ