ಹೋಗೊದಿಲ್ಲೇನು ?"
ಶಾಂತಿ ಆತನ ಕೆೃ ಗಳನು ತನ್ನ ಕೃಗಳಲ್ಲಿಟ್ಟೇ ಆತನ ಕಣ್ಣುಗಳನ್ನು ನೊಡುತ್ತ ಮಾತಾಡಿದಳು,"ರಮಾಕಾಂತ, ನನಗ" "ಏನು ಶಾಂತಿ ? ನಿನಗೆ ಏನು ಹೆಲ್ಟ್ ಬೇಕು ಹೇಳು, ನಾ ರೆಡೀ ಇದ್ದೀನಿ"
ಅತನ ಧ್ವನಿಯಲ್ಲಿ ಪ್ರಾಮಾಣಿಕತೆ ಇತ್ತು. ರಾಮಕಾಂತ,ನನಗ ಈಗ ಇಲ್ಲಿಂದ ಹೋಗು ಅನಬ್ಯಾಡ." "ನಾಯೆಲ್ಲೆ ಹೋಗು ಅಂದೆ ?ನಿನಗ ಸಮಾಧಾನ ಆಗೂ ತನಕಾ ಕೂಡು.ಆ ಮ್ಯಲ ನಾನ್ಯ ಕಳಸಿ ಬರ್ತಿನಿ ಮಾತುಂಗಾದ ತನಕಾ." "ರಮಾಕಾಂತ !" ಆಕೆಯ ಧ್ವನಿ ಆಕೆಗೇ ಕೇಳಿಸದಷ್ಟು ಬದಲಾಗಿತ್ತು. ಎರಡು ಕ್ಷಣ,ನಂತರ ಆತನೇ ಮುಂದೆ ಬಂದನೋ,ಆಕೆಯೇ ಮುಂದೆ ಬಂದಳೋ,ಅಂತೂ ಮೂರನೆಯ ಕ್ಷಣ ,ಗಟ್ಟಿಯಾಗಿ ಅಪಿಕೊಂಡಿದ್ದರು. ಶಾಂತಿಯ ಧ್ವಿನಿ ಅಳು,ಯಾಚನೆ,ಅರ್ಪಣೆ,ನಿರಾಶೆ, ನಿಸ್ಸಹಾಯತೆ ಎಲ್ಲ ಕೂಡಿ ತೀರ ಅಸ್ವಷ್ಟವಾಯಿತು."ರಮಾಕಾಂತ, ನನಗೆ ಏನೂ ತಿಳೀವಲ್ದು....ರಮಾಕಾಂತ...ನಾನು...."
ರಮಾಕಾಂತ ತಿಳಿವಳಿಕೆಯುಳ್ಳವನಾಗಿದ್ದ.ಶಾಂತಿ ಹೇಳಬೇಕೆಂದಿದ್ದುದು,ಹೇಳುಲು ಅಗದೇ ಇದ್ದುದು,ಆತನಿಗೆ ತಿಳಿದು ಹೊಯಿತು,ಆತ ಅವಳನ್ನು ಮಗುವಿನಂತೆ ಎತ್ತಿಕೊಂಡು ಮೃದುವಾಗಿ ಮಂಚದ ಮೇಲೆ ಮಲಗಿಸಿದ.
ಅರ್ದ ಗಂಟೆಯ ನಂತರ ಮೃ-ಮನಸು ಎಲ್ಲ ಹಗುರ-ಹಗುರವೆನಿಸಿದಾಗ ಅಂಗಾತಾಗಿ ಮಲಗಿದ್ದ ಶಾಂತಿ ತನ್ನ ಎದೆಯ ಮೇಲೆ ತಲೆಯಿಟ್ಟು ಮಲಗಿದ್ದ ರಮಾಕಾಂತನ ಕೂದಲಲ್ಲಿ ಬೆರಳಾಡಿಸುತ್ತ ನಕ್ಕು ಅಂದಳು "ನಿನಗೆ ಗೊತ್ತದ ಏನು ರಮಾಕಾಂತ? ನಾ ಕಾಲೇಜಿನ್ಯಾಗಿದ್ದಾಗ ಒಬ್ಬನ್ನ..."
ಅವಳ ತುಟಿಯ ಮೇಲೆ ತುಟಿಯಿಟ್ಟು ಮೆತ್ತಗೆ ಮುದ್ದಿಸಿಆತ ಅಂದ ,"ಹಿಂದಕ ಏನೇನು ಆತು ಅನ್ನೂದನ್ನ ಮರೆತಬಿಡು ಶಾಂತಿ , ನಾನೂ ನನ್ನ ಭೂತ ಮರ್ತಬಿಡ್ತಿನಿ. ನಾವು ಹೊಸಾ ಜೀವನ ಸುರೂ ಮಾಡೊಣ."
"ಹ್ಞಾ, ಆದರೂ ನನಗೆ ಹೇಳಬೇಕನಸ್ತದ". " ಹೇಳು,ಅದರ ಹಿಂಗ-ಇವತ್ತ ಬ್ಯಾಡ. ಒಮ್ಮೆ ಇಬ್ಬರಿಗೂ ಪುರಸೊತ್ತಿದ್ದಾಗ ಕೂತು ಹಿಂದಕೆ ಏನೇನಾತು ಅನ್ನೂದನ್ನ ಒಬ್ಬರಿಗೊಬ್ಬರು ಹೇಳಿಕೊಳ್ಳೊಣಂತ . ಅದರೂ ನನಗದು ವ್ಯರ್ಧ ಅನಸತದ. ಹಿಂದಿನದು ತಗೊಂಡು ಏನ್ಮಾಡೂದು? ನಾ.