ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಗಂದಸರು
ಹೇಳ್ತೀನಿ ಕೇಳು - ನಿನ್ನ ಜೀವನದಾಗ ಹಿಂದೆ ನೀ ಏನು ತಪ್ಪು ಮಾಡಿದ್ರೂ ನಾಕ್ಶಮಾ ಮಾಡ್ತೀನಿ. ಇನ್ನ ನೀ ನನಗ loyal ಆಗಿದ್ದರ ತೀರಿತು. ಹೌದಲ್ಲೊ."
"ಹೌದು"- ಆಂದು ಆಕೆ ಆತನ ಎದೆಯಲ್ಲಿ ಮುಖ ಹುದುಗಿಸಿ ಕಣ್ಣು ಮುಚ್ಚಿದಳು.
ರಮಾಕಾಂತನಲ್ಲಿ ವಿಲಕ್ಷಣವಾದಿದೊಂದು ಸಂರಕ್ಷಕ ಭಾವವಿದೆ. ಆತನೊಡನೆ ಮಲಗಿ ಎದ್ದಾಗ ಆಗುವ ಸಮಾದಾನ-ಆಲ್ಲ ಅದು, ಮಗುವಗಿದಾಗ ತಂದೆಯ ಮಡಲಲ್ಲಿ ಆಡುವಾಗ ಆಗುತ್ತಿದ್ದಂಥ ಸಮಾದಾನ... ಆತನಿಗೆ ತನ್ನ ಬಗ್ಗೆ ಎಷ್ಟು ಕಾಳಜಿಯಿದೆ! ಕೆಲಸದ ಅವದಿಯಲ್ಲಿ ಇತರ ಜನರೆಲ್ಲ ಇದ್ದಾಗ ತನ್ನ ಕಡೆ ಹೆಚ್ಚಾಗಿ ನೋಡುವುದಿಲ್ಲ ಕೂಡ. " ಮಂದಿ ನಿನಗೆ ಅಪಶಬ್ದ ಆದಬಾರದು ಶಾಂತೀ, ನಿನ್ನ ಹೆಸರು ಕೆಡದಾಂಗ ನೋಡಿಕೋಳ್ಳೊದೂ ನನ್ನ ಕರ್ತವ್ಯ."
ಮಠದ್ ನ ಮುಕ್ತ ಸ್ವೈರವೃತ್ತಿಗಿಂತ ಎಷ್ಟು ಭಿನ್ನ ! ಛಿ, ಮಠದ್ ಬರಿಯ ಸ್ವಾರ್ಥದ ಮುದ್ದೆಯಾಗಿದ್ದ. ರಮಾಕಾಂತನಿಗೆ ಅಷ್ಟು ಧೋರಣೆಯಿದೆ...
ಅದಕ್ಕೇ ಮಾಂಶಿಯ ಮನೆ ಬಿತ್ತು ಥಾನು ಬಾಂದ್ರಾದಲ್ಲೇ ಅರಡು ಕೋಣೆಗಳುಳ್ಳ ಹೊಸಮನೆಗೆ ಬಂದಾಯಿತು.ಒಂದು ರೀತಿಯೀಂದ ತನ್ನ ರಮಾಕಾಂತನ ಸಂಸಾರವೇ ಸುರುವಾಗಿದೆ ಇಲ್ಲಿ.
ಮಾಂಶಿ ಗುಟ್ಟಾಗಿ ಉಪದೇಶಿಸಿದ್ದಳು ಒಂದು ದಿನ, "ನೀ ಸುಮ್ಮ ಲಗ್ನಾ ಮಾಡಿಕೋಂಡು ಭಿಡಲಾ ಆವನನ್ನ? ಜಾತಿ-ಸುಡ್ಲಿ, ಭ್ಯಾರೇ ಆದರ ಆಗೆವೊಲ್ದೂ. ಲಗ್ನಾ ಅಂತ ಒಂದಾದರ ಅಡೀಯಿಲ್ಲ. ಇದೇನ್ನು ಛಂದ ಮಾರಾಯಳು? ನಿಮ್ಮವ್ವಗೇನರೆ ಗೊತ್ತಾದರ ಎದೀ ಒಡಕೊಂಡು ಪ್ರಾಣಾ ಬಿಡ್ತಾಳ ನೋಡು. ಲಗೂನ ಲಗಾಗಿಬಿಡ್ರಿ."
ಹೌದಲ್ಲ, ಲಗ್ನವಾಗದೆ ಹೂಡಿದ ಸಂಸಾರ ಮಾಂಶಿಯ ಮಾತಿನ ಬಗ್ಗೆ ಸೀರಿಯಸ್ಸಾಗಿ ವಿಚಾರಿಸುವ ಅವಶ್ಯಕತೆಯಯೇನೂ ಅಷ್ಟಾಗಿ ಕಾಣುತ್ತಿಲ್ಲ.
ಒಂದು ವರ್ಶದ ನಂತರ ಯಾವುದೋ ಮಾತು ಬಂದಾಗ ಸಾಂತಿ ನಗುತ್ತ ಮಾಂಶಿ ಆಂದದ್ದನ್ನು ಹೇಳಿದ್ದಳು ರಮಾಕಾಂತನಿಗೆ.
ಅವಶ್ಯವಾದುದೋಂದು ಮಹತ್ವಡೊಂದು ವಿಷ್ಯ ಮರೆತುಬಿತ್ತು ಒಮ್ಮ್ಲೆ ನೆನಪಾದವರಂತೆ ಆತ ಆಂದ, "ಹೌದು ಶಾಂತೀ, ಆದೂ ವಿಚಾರ ಮಾಡಬೇಕಾದ ವಿಷಯ. ಮಂದೀ ಸಲುವಾಗಿ ಇವೆಲ್ಲಾ formalities ನಾವು. ಸುಮ್ನೇ ಮಂದಿ ನಿನ್ನ ಸಲುವಾಗಿ ಅಪಶಬ್ದ ಆಡಬಾರದು ನೋಡು."