ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನಡೆದದ್ದೇ ದಾರಿ
"ನಿನಗ ಹಿಂಗನಸ್ತಿದ್ದರ ರಜಿಸ್ಟ್ರೇಶನ್ ಮಾಡಸೂಣಂತ. ನನಗೇನು ಆ ವಿಧಿಯೊಳಗ ವಿಶೇಷ ನಂಬಿಕೆ ಇಲ್ಲ." "ರಜಿಸ್ಟ್ರೇಶನ್?" ರಮಾಕಾಂತ ಗಂಭೀರನಾದ. ನಂತರ ಅವಳನ್ನು ತನ್ನ ತೋಳುಗಳಲ್ಲಿ ಬರಸೆಳೆದು ಗಂಭೀರ ಧ್ವನಿಯಲ್ಲಿ ಅಂದ, "ಶಾಂತಿ, ನಾ ನಿನಗ ಎಂದೂ ನನ್ನ ಸಲುವಾಗಿ ಏನೂ ಹೇಳೇ ಇಲ್ಲಲ್ಲ ?" "ನನಗೂ ಕೇಳೋ ಅವಶ್ಯಕತಾ ಅನಸಿಲ್ಲ." "ಆದರ ಈಗ ಹೇಳೋ ಅವಶ್ಯಕತಾ ಅನಸತದ ನನಗ. ಹೇಳೋ ಟೈಮೂ ಬಂದದ ಈಗ. ಶಾಂತೀ, ನಾ ಹೇಳೂ ಕೇಳಿ ನನ್ನ ಬಿಟ್ಟು ಹೋಗ್ತಿಯೇನು?" - ರಮಾಕಾಂತ ಕಣ್ಣು ಒಮ್ಮೆಲೆ ತುಂಬಿ ಬಂದವು. "ನಿನಗ ಹಾಂಗನಸ್ತದೇನು ರಮಾಕಾಂತ?"
"ಇಲ್ಲ. ನನಗ ವಿಶ್ವಾಸ ಅದ ನೀ ನನ್ನ ಕ್ಷಮಾ ಮಾಡ್ತೀ ಅಂತ. ಕ್ಷಮಾ ಮಾಡಲಾಗದ ಪ್ರೀತಿ ಖರೇ ಪ್ರೀತಿನೇ ಅಲ್ಲ. ತ್ಯಾಗ- ಕ್ಷಮಾ ಇವೆರಡೂ ಪ್ರೀತಿಗಿಂತ ಹೆಚ್ಚು ಅಮೂಲ್ಯ ನನ್ನ ದೃಷ್ಟಿಯೊಳಗ."
"ನನ್ನ ನಂಬು ರಮಾಕಾಂತ. ಇಷ್ಟ ದಿನಾ ಕೂಡಿ ಇದ್ದಿವಿ. ನಾ ಎಂದರೆ ಅಪನಂಬಿಕೆಗೆ ಅವಕಾಶ ಆಗೂಹಾಂಗ ನಡಕೊಂಡೀನೇನು?" "ಇಲ್ಲ ಶಾಂತೀ,ನಿನ್ನ ಪ್ರೀತಿ ಅಗದೀ loyal ಆದLoyalty ನೇ ಪ್ರೀತಿಯ ಖರೇ ಮಾನದಂಡ.ನಾ ನಿನಗೆ ಹೇಳ್ತೀನಿ ಶಾಂತೀ,ಇವತ್ತ ಎಲ್ಲಾ ಹೇಳ್ತೀನಿ." ಆ ರಾತ್ರಿ ತಡವಾಗಿ ಮನೆಗೆ ಬಂದ ರಮಾಕಾಂತ ಸೀದಾ ಶಾಂತಿ ಕೂತಿದ್ದಲಿಗೆ ಹೋಗಿ ಅವಳಿಗೊಂದು ಭಾವಚಿತ್ರ ತೋರಿಸಿದ. ಮ್ಯೆತುಂಬ ಸೆರಗು ಹೊದ್ದು
ಚಿತ್ರವಿಚಿತ್ರದ ಆಭರಣದ ಧರಿಸಿದ ಸಣ್ಣ ಹುಡುಗಿಯ ಚಿತ್ರ . ಶಾಂತಿ ಅದನ್ನು ನೊಡುತ್ತಿದಂತೆ ಆತ ಅವಳಿಂದ ತುಸುದೂರ ನಡೆದುಹೋಗಿ ಅವಳ ಕಡೆ ಬೆನ್ನುಮಾಡಿ ನಿಂತು ಈ ಲಗ್ನಾ ನೋಡೇ ಸಾಯ್ತಿನಿ ಅಂದಳು ಅಂತ ಹಟಹಿಡಿದು ಲಗ್ನಾ ಮಾಡಿದ್ರು.ಮರುದಿನಾನೀ ಯಾರಿಗೂ ಹೇಳದs ಕೇಳದ ಊರು ಬಿಟ್ಟೆ.ಮುಂಬ್ಯೆಗೆ ಬಂದೆ .ಹನೆರದು ವಷ್ರ ಆಗಿ ಹೋದವು.ಮನೀಯವರು ಯಾರದೂ ಮಾರೀ ನೋಡಿಲ್ಲ ನಾನು.ನಾ ಸತ್ತಿನಂತs ತಿಳಿದಿರಬೇಕು ಅವರೆಲ್ಲ.ಆದs ಛಲೋನು ಆತು